Weekly Numerology: ನಿಮ್ಮ ಜನ್ಮಸಂಖ್ಯೆಗನುಗುಣವಾಗಿ ಮೇ 25ರಿಂದ 31ರ ವರೆಗಿನ ಭವಿಷ್ಯ ಇಲ್ಲಿ ತಿಳಿಯಿರಿ
ಈ ಲೇಖನವು ಜನ್ಮ ಸಂಖ್ಯೆ 1 ರಿಂದ 9 ರವರೆಗಿನ ಜನ್ಮಸಂಖ್ಯೆಯಲ್ಲಿ ಹುಟ್ಟಿದ ವ್ಯಕ್ತಿಗಳ ಈ ವಾರದ ಭವಿಷ್ಯವನ್ನು ಒಳಗೊಂಡಿದೆ. ಆರೋಗ್ಯ, ಹಣಕಾಸು, ಉದ್ಯೋಗ ಮತ್ತು ಸಂಬಂಧಗಳ ಬಗ್ಗೆ ಮುಖ್ಯ ಅಂಶಗಳನ್ನು ತಿಳಿಸಲಾಗಿದೆ. ಪ್ರತಿಯೊಂದು ಜನ್ಮ ಸಂಖ್ಯೆಗೂ ವಿಶೇಷ ಸಲಹೆಗಳನ್ನು ನೀಡಲಾಗಿದ್ದು, ಧನಾತ್ಮಕ ಮತ್ತು ಋಣಾತ್ಮಕ ಬೆಳವಣಿಗೆಗಳನ್ನು ವಿವರಿಸಲಾಗಿದೆ. ಜಾಗರೂಕತೆ ಮತ್ತು ಸಮತೋಲನದ ಅಗತ್ಯತೆಯನ್ನು ಲೇಖನವು ಒತ್ತಿ ಹೇಳುತ್ತದೆ.
Updated on:May 25, 2025 | 11:21 AM

ಜನ್ಮಸಂಖ್ಯೆ 1: ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1. ಈ ವಾರ ಈ ಜನ್ಮಸಂಖ್ಯೆಯಲ್ಲಿ ಹುಟ್ಟಿದವರ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ನಿಮ್ಮ ಮಾತು, ನಡವಳಿಕೆ ಹಾಗೂ ಆತುರದ ತೀರ್ಮಾನಗಳು ಸಮಸ್ಯೆಯನ್ನು ತಂದೊಡ್ಡಲಿವೆ. ಇನ್ನು ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆಯನ್ನು ವಹಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಮಧುಮೇಹ, ರಕ್ತದೊತ್ತಡ ಇಂಥ ಸಮಸ್ಯೆಗಳಿಂದ ಬಳಲುತ್ತಿರುವವರು ಈ ವಾರ ನಿಮ್ಮ ದೇಹ ಸೌಖ್ಯ, ಅಂದರೆ ಆರೋಗ್ಯಕ್ಕೆ ಬೇಕಾದ ಕಾಳಜಿಯನ್ನು ತೆಗೆದುಕೊಳ್ಳುವುದು ಉತ್ತಮ.

ಜನ್ಮಸಂಖ್ಯೆ 2: ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2. ಈ ವಾರ ಈ ಹಿಂದೆ ಕೆಲಸ ಮಾಡಿದ್ದೀನಿ, ಇನ್ನೂ ಆ ಹಣ ಬಂದಿಲ್ಲ ಎಂದು ಅಲೆದಾಟ ಮಾಡುತ್ತಿರುವವರಿಗೆ ಹಣ ಕೈ ಸೇರಲಿದೆ. ಸಿಟ್ಟಿನ ಭರದಲ್ಲಿ ತಪ್ಪು ನಿರ್ಧಾರವನ್ನೋ ಅಥವಾ ಆಯ್ಕೆಗಳನ್ನೋ ಮಾಡಿಕೊಳ್ಳದಿರಿ. ವೃತ್ತಿನಿರತರಾಗಿದ್ದಲ್ಲಿ ಈ ಹಿಂದೆ ನೀವು ನೀಡಿದ್ದ ಮಾತು, ತೆಗೆದುಕೊಂಡಿದ್ದ ಜವಾಬ್ದಾರಿ, ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಗಳು ಈಗ ಕೈ ಕೊಡಲು ಆರಂಭ ಆಗುತ್ತದೆ. ಕಚೇರಿಯಲ್ಲಿ ಅಥವಾ ನೀವು ಇರುವಂಥ ಸ್ಥಳದಲ್ಲಿ ಅಗ್ನಿ ಅವಘಡಗಳು ಸಂಭವಿಸಬಹುದು. ಆದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು.

ಜನ್ಮಸಂಖ್ಯೆ 3: ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3.ನಿಮಗೆ ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಹಣ ಖರ್ಚಾಗಲಿದೆ. ಈ ಹಿಂದೆ ನಿಮ್ಮ ನಿರ್ಲಕ್ಷ್ಯದಿಂದ ನಷ್ಟ ಆಯಿತು ಎಂದು ಪರಿಹಾರ ಕೇಳಿಕೊಂಡು ಬರಬಹುದು. ವಿದ್ಯಾರ್ಥಿಗಳಾಗಿದ್ದಲ್ಲಿ ತಂದೆಯವರಿಗೆ ಈಗಾಗಲೇ ಇರುವ ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ನಿಮ್ಮ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರುವ ಎಲ್ಲ ಸಾಧ್ಯತೆ ಇದೆ. ಮಹಿಳೆಯರಿಗೆ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಹೆಚ್ಚಾಗಲಿದೆ. ಜಾಹೀರಾತು ಏಜೆನ್ಸಿಗಳಲ್ಲಿ ಕೆಲಸ ಮಾಡುವಂಥವರಿಗೆ ಆದಾಯ ಹೆಚ್ಚಳ ಆಗುವ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ಪ್ರಮೋಷನ್ ಸಹ ಆಗಬಹುದು.

ಜನ್ಮಸಂಖ್ಯೆ 4: ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4.ನಿಮ್ಮ ಓದು, ಅನುಭವ, ಕಲಿಕೆ ಹಾಗೂ ಸ್ನೇಹಿತರ ವಲಯದ ಅತ್ಯುತ್ತಮವಾದ ಉಪಯೋಗವು ದೊರೆಯಲಿದೆ. ಇದರಿಂದ ನಿಮ್ಮ ಉದ್ಯೋಗ- ವ್ಯವಹಾರ, ವ್ಯಾಪಾರಗಳಿಗೆ ಅನುಕೂಲವನ್ನು ಮಾಡಿಕೊಳ್ಳಲಿದ್ದೀರಿ. ಯಾರು ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರ ಹೀಗೆ ಅಥವಾ ಇಂಥ ವ್ಯವಹಾರಗಳನ್ನು ಮಾಡುತ್ತಿರುವಿರೋ ಅಂಥವರು ಬಹಳ ಉತ್ತಮವಾದ ಸಮಯವನ್ನು ಕಾಣಲಿದ್ದೀರಿ.

ಜನ್ಮಸಂಖ್ಯೆ 5: ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5.ವಾರದ ಮಧ್ಯಭಾಗದಿಂದ ಆಚೆಗೆ ನಿಮ್ಮ ಬುದ್ಧಿ ಬಹಳ ಚುರುಕಾಗಿ ಕೆಲಸ ಮಾಡಲಿದೆ. ಆಸ್ತಿ ವ್ಯವಹಾರಗಳನ್ನು ಮಾಡಬೇಕು ಎಂದು ಹಣಕಾಸನ್ನು ಹೊಂದಿಸಿಕೊಳ್ಳುತ್ತಾ ಇರುವವರಿಗೆ ಹಣಕಾಸಿನ ಹರಿವು ನೀವು ಅಂದುಕೊಂಡ ಮಟ್ಟಕ್ಕೆ ಇರುವುದಿಲ್ಲ. ಹಣ ಇಲ್ಲದಿದ್ದರೂ ಹೇಗೋ ಹೊಂದಿಸಿಕೊಳ್ಳಬಹುದು, ಆದರೆ ಸಾಂಸಾರಿಕವಾಗಿ ಸಂತೋಷ ಇರಬೇಕು, ನೆಮ್ಮದಿಯೊಂದು ಇದ್ದರೆ ಸಾಕು ಎಂದು ಆಲೋಚಿಸುತ್ತಿದ್ದವರಿಗೆ ಇಷ್ಟು ಸಾಲುವುದಿಲ್ಲ ಎಂದೆನಿಸುವುದಕ್ಕೆ ಶುರುವಾಗುತ್ತದೆ.

ಜನ್ಮಸಂಖ್ಯೆ 6: ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6. ಪದೇಪದೇ ತಮ್ಮ ಚುಚ್ಚು ಮಾತುಗಳಿಂದ ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವುದಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಗಟ್ಟಿ ಧ್ವನಿಯಲ್ಲಿ ಉತ್ತರ ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚಿನ ರಿಸ್ಕ್ ಒಳಗೊಂಡ ವ್ಯವಹಾರಗಳಿಗೆ ಕೈ ಹಾಕಬಹುದು. ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ ಸಿಗುವ ಸಾಧ್ಯತೆ ಇದೆ. ಇಲ್ಲದಿದ್ದಲ್ಲಿ ಭೂಮಿ ಮೂಲಕವಾಗಿ ಲಾಭವನ್ನಂತೂ ಕಾಣುವ ಯೋಗ ಇದೆ.

ಜನ್ಮಸಂಖ್ಯೆ 7: ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗ ಇದೆ. ಮನೆ ದೇವರ ಪೂಜೆಯಲ್ಲಿ ಪಾಲ್ಗೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ. ಕುಟುಂಬ ಸಮೇತವಾಗಿ ತೆರಳಿ ಹರಕೆಗಳಿದ್ದಲ್ಲಿ ತೀರಿಸುವಂಥ ಸಾಧ್ಯತೆಗಳು ಸಹ ಇವೆ. ಇನ್ನು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹಲವರು ಬೆನ್ನಿಗೆ ನಿಲ್ಲಲಿದ್ದಾರೆ. ನಿಮ್ಮ ಈ ಹಿಂದಿನ ಶ್ರಮಕ್ಕೆ ಫಲ ದೊರೆಯುತ್ತಿದೆ ಎಂಬ ಭಾವವೊಂದು ಮನೆ ಮಾಡಲಿದೆ. ಇತರರಿಗೆ ನೆರವು ನೀಡಿದ್ದರ ಫಲಿತಾಂಶವನ್ನು ಕಾಣಲಿದ್ದೀರಿ. ಇನ್ನು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ ವೇತನ ಹೆಚ್ಚಳ ಆಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8: ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8. ನಿಮ್ಮಲ್ಲಿ ಯಾರು ವಿವಾಹ ವಯಸ್ಕರಾಗಿದ್ದೀರಿ, ಅಂಥವರಿಗೆ ಸಭೆ, ಸಮಾರಂಭ ಮೊದಲಾದ ಕಾರ್ಯಕ್ರಮದಲ್ಲಿ ಭಾಗೀ ಆಗಲು ಬಂದ ವ್ಯಕ್ತಿಯ ಪರಿಚಯವು ಸ್ನೇಹವಾಗಿ, ಅಲ್ಲಿಂದ ಅದು ಪ್ರೀತಿಯಾಗಿ ಮಾರ್ಪಟ್ಟು, ಮದುವೆಯಲ್ಲಿ ಕೊನೆಯಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ನಿಮಗೆ ಹಣಕಾಸಿನ ಅಗತ್ಯ ತೀವ್ರವಾಗಿದೆ ಎಂದಿದ್ದಲ್ಲಿ ಈ ವಾರ ಅಚ್ಚರಿಯ ಬೆಳವಣಿಗೆಗಳನ್ನು ಕಾಣಲಿದ್ದೀರಿ.

ಜನ್ಮಸಂಖ್ಯೆ 9 :ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9. ಈ ವಾರದಲ್ಲಿ ನಿಮ್ಮ ಹಣಕಾಸಿನ ಆದಾಯ ಹೆಚ್ಚಳವಾಗುತ್ತದೆ. ಶುಭ ವಾರ್ತೆ ಕೇಳಿಬರಲಿದೆ. ಸಂತೋಷವಾಗಿ ಸಮಯ ಕಳೆಯುವುದಕ್ಕೆ ಬೇಕಾದ ವಾತಾವರಣ, ಬೆಳವಣಿಗೆಗಳು ಆಗಲಿವೆ. ಇದೇ ಮೊದಲು ಎಂಬಂತೆ ಪ್ರಯತ್ನಿಸಿದ ಕೆಲವು ವ್ಯವಹಾರಗಳಲ್ಲಿ ಉತ್ತಮವಾದ ಲಾಭ, ಪ್ರತಿಫಲ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ನಿಮಗೆ ತಿಳಿದಿರುವಂಥ ವಿದ್ಯೆಗೆ ಇರುವ ಪರಿಣತಿಗೆ ಸಿಕ್ಕಾಪಟ್ಟೆ ಬೇಡಿಕೆ ಬರಲಿದೆ.
Published On - 11:20 am, Sun, 25 May 25









