ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈಗೀಗ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಿದೆ. 2022 ರಲ್ಲಿ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಫೀಚರ್ಸ್ ಪರಿಚಯಿಸಲು WhatsApp ಮುಂದಾಗಿದೆ. ಹಾಗಾದ್ರೆ WhatsApp ನಲ್ಲಿ ಸದ್ಯದಲ್ಲೇ ಬರಲಿರುವ ಬಹುನಿರೀಕ್ಷಿತ ಪ್ರಮುಖ 10 ಫೀಚರ್ಸ್ ಬಗ್ಗೆ ನೋಡುವುದಾದರೆ…
WhatsApp ಶೀಘ್ರದಲ್ಲೇ ಫೇಸ್ಬುಕ್ನಲ್ಲಿರುವಂತೆಯೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಪರಿಚಯಿಸಲಿದೆ. ಈಗಾಗಲೇ ಇದರ ಪರೀಕ್ಷಾ ಹಂತಕೂಡ ಮುಕ್ತಾಯಗೊಂಡಿದ್ದು, ಮುಂದಿನ ಅಪ್ಡೇಟ್ನಲ್ಲಿ ಬಳಕೆದಾರರಿಗೆ ಸಿಗುವ ಅಂದಾಜಿದೆ. ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್ಗಳು ಬಳಕೆದಾರರಿಗೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ಗಳನ್ನು ನೀಡುತ್ತಿವೆ.
WhatsApp ನಲ್ಲಿ ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ ಗಳಲ್ಲಿ ಹೊಸ ಆಯ್ಕೆ ಬರಲಿದೆ. ಈ ಹೊಸ ಫೀಚರ್ ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ತಮ್ಮ ಲಾಸ್ಟ್ ಸೀನ್, ಸ್ಟೇಟಸ್, ಪ್ರೊಫೈಲ್ ಫೋಟೋ ವಿವರಣೆಯನ್ನು ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸಲು ಅನುಮತಿಸುತ್ತದೆ.
WhatsApp ಕಾಲ್ನಲ್ಲಿ ಸೇರ್ಪಡೆ ಆಗಲು ಕಾಲ್ಸ್ ಲಿಂಕ್ಗಳನ್ನು (Whatsapp Call Link) ಕ್ರಿಯೆಟ್ ಮಾಡಲು ಅವಕಾಶ ನೀಡಲಿದೆ. ಇದರಿಂದ WhatsApp ಕಾಲ್ ಅನ್ನು ಕಾಲ್ಸ್ ಲಿಂಕ್ ಮೂಲಕವೇ ಸೇರಬಹುದಾಗಿದೆ. ಗ್ರೂಪ್ ಕಾಲ್ ಹೋಸ್ಟ್ ಮಾಡುವವರು ಕಾಲ್ಸ್ ಲಿಂಕ್ ಮೂಲಕ ತಮ್ಮ ಸ್ನೇಹಿತರನ್ನು ಇನ್ವೈಟ್ ಮಾಡಲು ಸಾಧ್ಯವಾಗಲಿದೆ. ಅಂದರೆ ಗೂಗಲ್ ಮೀಟ್ ಲಿಂಕ್ ಮಾದರಿಯಲ್ಲಿ ಇದೆ ಇರಲಿದೆ.
WhatsApp ಪರಿಚಯಿಸಲು ಹೊರಟಿರುವ ಮತ್ತೊಂದು ಹೊಸ ಅಪ್ಡೇಟ್ ಕವರ್ ಫೋಟೋ. ನೀವು ಫೇಸ್ಬುಕ್ನಲ್ಲಿ ಕವರ್ ಫೋಟೋ ಆಯ್ಕೆಯನ್ನು ನೋಡಿರುತ್ತೀರಿ. ಸದ್ಯದಲ್ಲೇ ಇದೇರೀತಿಯ ಆಯ್ಕೆ ವಾಟ್ಸ್ಆ್ಯಪ್ನಲ್ಲೂ ಸಿಗಲಿದೆ. ವಾಟ್ಸ್ಆ್ಯಪ್ ಬೇಟಾಇನ್ಫೋ ವರದಿ ಪ್ರಕಾರ, ಈ ಆಯ್ಕೆ ವಾಟ್ಸ್ಆ್ಯಪ್ ಪ್ರೊಫೈಲ್ನಲ್ಲಿ ಕಾಣಲಿದೆಯಂತೆ.
WhatsApp ಚಾಟ್ಬಾಕ್ಸ್ನಲ್ಲಿರುವ ಡಾಕ್ಯುಮೆಂಟ್ ಆಯ್ಕೆಯಲ್ಲಿ ಹೊಸ ಅಪ್ಡೇಟ್ ನೀಡಲು ಮುಂದಾಗಿದೆ. ಇದರ ಹೆಸರು ಡಾಕ್ಯುಮೆಂಟ್ ಪ್ರೀವ್ಯೂ ಫೀಚರ್. ಆಂಡ್ರಾಯ್ಡ್ ಬೇಟಾ ಬಳಕೆದಾರರಿಗಾಗಿ ಈ ಫೀಚರ್ ಪರೀಕ್ಷಾ ಹಂತದಲ್ಲಿದೆ. 2.25.5.11 ಬೇಟಾ ವರ್ಷನ್ನಲ್ಲಿ ಈ ಆಯ್ಕೆ ಸಿಗಲಿದೆಯಂತೆ.
ಇನ್ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಆಯ್ಕೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಕೂಡ ಸದ್ಯದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಇದೀಗ WhatsApp ವೆಬ್ ಬಳಕೆದಾರರಿಗೆ ಈ ಆಯ್ಕೆ ನೀಡಲು ಕಂಪನಿ ಮುಂದಾಗಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ ವೆಬ್ನಲ್ಲಿ ಮೆಸೇಜ್ ರಿಯಾಕ್ಷನ್ ಫೀಚರ್ ಸೇರಿಸಲು ಕಂಪನಿ ಸಿದ್ಧತೆ ನಡೆಸಿದೆ.
ಇದಲ್ಲದೆ WhatsApp ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಬಳಕೆದಾರರು ಹೊಸ ಸರ್ಚ್ ಬಟನ್ ಪರಿಚಯಸಲು ಮುಂದಾಗಿದೆ. ಇದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಸಂಪರ್ಕಗಳು ಮತ್ತು ಗುಂಪು ಚಾಟ್ಗಳ ಮಾಹಿತಿ ಪುಟದಲ್ಲಿ ಈ ಸರ್ಚ್ ಆಯ್ಕೆಯನ್ನು ಕಾಣಬಹುದಾಗಿದೆ. ಪ್ರಸ್ತುತ, ಈ ಫೀಚರ್ಸ್ ಅನ್ನು ಬೀಟಾ ಪರೀಕ್ಷಕರ ಗ್ರೂಪ್ನಲ್ಲಿ ಪರಿಚಯಿಸಲಾಗುತ್ತಿದೆ.
WhatsApp ತನ್ನ ಪ್ಲಾಟ್ಫಾರ್ಮ್ನಲ್ಲಿ ಸ್ಟೇಟಸ್ ಪ್ರೈವೆಸಿ ಶಾರ್ಟ್ಕಟ್ ಅನ್ನು ಸಹ ಸೇರ್ಪಡೆ ಮಾಡಿದೆ. ಇದರ ಮೂಲಕ ನೀವು ಚಾಟ್ನಲ್ಲಿನ ಫೋಟೋ ಅಥವಾ ವೀಡಿಯೊಗಾಗಿ ವಿಭಿನ್ನ ಸ್ವೀಕೃತದಾರರನ್ನು ಆಯ್ಕೆ ಮಾಡಲು ಅಥವಾ ಅದನ್ನು ಸ್ಟೇಟಸ್ ಅಪ್ಡೇಟ್ನಂತೆ ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
WhatsApp ಐಒಎಸ್ ಡಿವೈಸ್ನಲ್ಲಿ ಹೊಸ ವಾಯ್ಸ್ ಇಂಟರ್ಫೆಸ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಹೊಸ ಫೀಚರ್ಸ್ ಗ್ರೂಪ್ಕಾಲ್ನಲ್ಲಿ ಹೊಸ ಅನುಭವವನ್ನು ತರಲಿದೆ. ಇದು ಪ್ರತಿ ಸ್ಪೀಕರ್ಗೆ ರಿಯಲ್-ಟೈಂ, ಕಲರ್-ಕೋಡೆಡ್ ಆಡಿಯೊ ತರಂಗರೂಪಗಳನ್ನು ನಿಯೋಜಿಸುತ್ತದೆ.
Published On - 1:21 pm, Mon, 28 February 22