- Kannada News Photo gallery If you do these mistakes while being romantic, your husband will not like it Kannada News
Relationship Tips : ಬೆಡ್ ರೂಮ್ನಲ್ಲಿ ರೋಮ್ಯಾಂಟಿಕ್ ಆಗಿರುವಾಗ ಪತಿಗೆ ಇಷ್ಟವಾಗದ ಈ ಕೆಲಸವನ್ನು ಮಾಡ್ಲೆಬೇಡಿ
ವೈವಾಹಿಕ ಜೀವನವು ಸುಮಧುರವಾಗಿ ಸಾಗಲು ಪ್ರೀತಿ, ಕಾಳಜಿ ಜೊತೆಗೆ ಲೈಂಗಿಕತೆಯೂ ಮುಖ್ಯವಾಗುತ್ತದೆ. ನಮ್ಮ ನಮ್ಮ ದೇಹಕ್ಕೆ ಆಹಾರ ಹೇಗೆ ಮುಖ್ಯವೋ ಅದೇ ರೀತಿ ಲೈಂಗಿಕತೆಯು ಅತೀ ಅಗತ್ಯವಾಗಿದೆ. ಲೈಂಗಿಕ ಜೀವನದಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದೆ ಹೋದಲ್ಲಿ ಮದುವೆಯ ಜೀವನವು ಮುರಿದು ಬೀಳುತ್ತದೆ. ಪತಿಯ ಜೊತೆಗೆ ಲೈಂಗಿಕತೆ ಕ್ರಿಯೆಯಲ್ಲಿ ತೊಡಗಿಕೊಂಡ ವೇಳೆ ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಪತಿಗೆ ನೀವು ಇಷ್ಟವಾಗದೇ ಇರಬಹುದು. ಹೀಗಾಗಿ ಈ ವೇಳೆಯಲ್ಲಿ ಸಂಗಾತಿಗೆ ಇಷ್ಟವಾಗದ ಈ ಕೆಲವು ತಪ್ಪುಗಳನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.
Updated on: Aug 15, 2024 | 4:00 PM

ತಿಯೊಂದಿಗೆ ಸರಸ ಸಲ್ಲಾಪದಲ್ಲಿರುವಾಗ ತನ್ನ ಮಾಜಿ ಪ್ರಿಯಕರನ ಬಗ್ಗೆ ಮಾತನಾಡಲೇ ಬೇಡಿ. ಅಪ್ಪಿ ತಪ್ಪಿಯು ಆತನ ಹೆಸರನ್ನು ಹಾಗೂ ಆತನೊಂದಿಗೆ ಕಳೆದ ಆ ಕ್ಷಣಗಳ ಬಗ್ಗೆ ನೆನಪಿಸಿಕೊಳ್ಳುವುದಾಗಲಿ ಮಾಡಬೇಡಿ. ಒಂದು ವೇಳೆ ಮಾಜಿ ಪ್ರಿಯಕರನ ಹೆಸರು ನಿಮ್ಮ ಬಾಯಲ್ಲಿ ಬಂದರೆ ಸಂಗಾತಿಗೆ ಇಷ್ಟವಾಗಲ್ಲ. ಈ ವಿಚಾರವೇ ಲೈಂಗಿಕ ಸಂಬಂಧ ಹಾಗೂ ಸಾಂಸರಿಕ ಜೀವನದ ಬಿರುಕಿಗೆ ಕಾರಣವಾಗುತ್ತದೆ.

ಪುರುಷರು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಮಹಿಳಾ ಸಂಗಾತಿಯು ಮಾತನಾಡಬೇಕೆನ್ನುವ ಬಯಕೆ. ನಿಮ್ಮ ಸಂಗಾತಿಗೆ ವಿಶ್ರಾಂತಿಯ ಅಗತ್ಯವಿದ್ದಾಗ ನಿಮ್ಮ ಮಾತುಗಳು ಪತಿಗೆ ಕೋಪ ತರಬಹುದು, ನೀವು ಕಿರಿಕಿರಿ ಅನಿಸಬಹುದು. ನನ್ನನ್ನು ನನ್ನ ಮಡದಿ ಅರ್ಥ ಮಾಡಿಕೊಳ್ಳಲ್ಲ ಎಂದುಕೊಂಡು ಬೇಸರವಾಗುವುದಿದೆ.

ಲೈಂಗಿಕ ಸಂಭೋಗದಲ್ಲಿ ತೊಡಗಿಕೊಂಡ ವೇಳೆಯಲ್ಲಿ ಬದುಕಿನ ಕಹಿ ಘಟನೆಗಳು, ಬೇಸರ ಸಂಗತಿಗಳನ್ನು ಮಾತುಗಳನ್ನು ಆಡಬೇಡಿ. ಈ ನಿಮ್ಮ ಮಾತು ಪತಿಯ ರೋಮ್ಯಾಂಟಿಕ್ ಮೂಡ್ ಹಾಳಾಗುವಂತೆ ಮಾಡುತ್ತದೆ. ಅದಲ್ಲದೇ ಈ ವಿಷಯದಿಂದಾಗಿ ನಿಮ್ಮ ಮೇಲಿನ ಆಸಕ್ತಿಯೂ ಕಡಿಮೆಯಾಗಬಹುದು.

ಲೈಂಗಿಕ ಕ್ರಿಯೆಯ ಬಳಿಕ ಪತಿಯಲ್ಲಿ ಅನುಭವ ಬಗ್ಗೆ ಕೇಳುವುದು ಸರಿಯಲ್ಲ. ನಿಮ್ಮ ನೇರವಾದ ಮಾತಿನಿಂದ ಸಂಗಾತಿಗೆ ಸಂಕೋಚವಾಗಬಹುದು. ಹೀಗಾಗಿ ಹೆಚ್ಚಿನ ಪುರುಷರು ತಮ್ಮ ಅನುಭವವನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಸಾಧ್ಯವಾದಷ್ಟು ಇಂತಹುದ್ದನ್ನು ಕೇಳದೆ ಇರುವುದೇ ಉತ್ತಮ. ಒಂದು ವೇಳೆ ನೀವು ಕೂಡ ಈ ಗುಣವನ್ನು ಹೊಂದಿದ್ದರೆ ಪತಿಗೆ ಖಂಡಿತವಾಗಿಯೂ ಇಷ್ಟವಾಗದು.

ಸಂಗಾತಿಯೊಂದಿಗೆ ದೈಹಿಕ ಸಂಪರ್ಕದಲ್ಲಿರುವಾಗ ಪುರುಷರಿಗೆ ಸಂಗಾತಿಯೂ ಮಾತನಾಡಬೇಕು ಎನ್ನುವುದಿರುತ್ತದೆ ಸೈಲೆಂಟ್ ಆಗಿರುವ ಲೈಂಗಿಕ ಕ್ರಿಯೆಯನ್ನು ಅಷ್ಟಾಗಿ ಪುರುಷರು ಇಷ್ಟ ಪಡುವುದಿಲ್ಲ. ಪತ್ನಿಯು ಈ ಸಮಯದಲ್ಲಿ ರೋಮ್ಯಾಂಟಿಕ್ ಆಗಿ ಮಾತನಾಡಿದರೆ ತುಂಟತನ ತೋರಿದರೆ ಪತಿಗೆ ಇಷ್ಟವಾಗುತ್ತದೆ. ಹಾಸಿಗೆಯ ಮೇಲೆ ಸೈಲೆಂಟ್ ಆಗಿರುವ ಸಂಗಾತಿಯನ್ನು ಪುರುಷರು ಎಂದಿಗೂ ಇಷ್ಟ ಪಡುವುದೇ ಇಲ್ಲ.




