
‘ಸು ಫ್ರಮ್ ಸೋ’ ಚಿತ್ರದ ಚೈತ್ರಾ ಪಾತ್ರ ಸಾಕಷ್ಟು ಹೈಲೈಟ್ ಆಗಿದೆ. ಈ ಪಾತ್ರ ಮಾಡಿದ್ದು ತನಿಷ್ಕಾ ಶೆಟ್ಟಿ. ಇವರು ಮಂಗಳೂರು ಹಿನ್ನೆಲೆ ಹೊಂದಿದ್ದಾರೆ. ಆದರೆ, ಇವರು ನೆಲೆಸಿದ್ದು ಮುಂಬೈನಲ್ಲಿ. ಅವರು ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ.

ಒಮ್ಮೆ ಜೆಪಿ ಹಾಗೂ ಟೀಂ ನಾಟಕ ಮಾಡಲು ಮುಂಬೈಗೆ ತೆರಳಿತ್ತು. ಈ ನಾಟಕ ಆಯೋಜನೆ ಮಾಡಿದ್ದು ತನಿಷ್ಕಾ ಅವರ ತಂದೆ. ತನಿಷ್ಕಾ ಅವರನ್ನು ನೋಡಿದ ಜೆಪಿ ‘ಸು ಫ್ರಮ್ ಸೋ’ ಚಿತ್ರದ ಚೈತ್ರಾ ಪಾತ್ರಕ್ಕೆ ಇವರು ಸೂಕ್ತ ಎಂದುಕೊಂಡರು.

ಆ ಬಳಿಕ ತನಿಷ್ಕಾ ಹಾಗೂ ಅವರ ತಂದೆಯ ಬಳಿ ಮಾತನಾಡಿ ಆಡಿಷನ್ ಕೂಡ ಪಡೆದರು. ಆಡಿಷನ್ನಲ್ಲಿ ತನಿಷ್ಕಾ ಪಾಸ್ ಆದರು. ಹೀಗೆ ಅವರಿಗೆ ಆಫರ್ ಸಿಕ್ಕಿದೆ. ಅವರು ಈಗ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ತನಿಷ್ಕಾ ಇನ್ನೂ ಎರಡನೇ ವರ್ಷದ ಡಿಗ್ರಿ ಓದುತ್ತಿದ್ದಾರೆ. ಅವರು ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಬ್ಯಾಚುಲರ್ ಡಿಗ್ರಿ ಪಡೆಯುತ್ತಿದ್ದಾರೆ. ಮೊದಲು ಶಿಕ್ಷಣ ಪಡೆದು ಆ ಬಳಿಕ ಸಿನಿಮಾ ಮಾಡುವ ಪ್ಲ್ಯಾನ್ನಲ್ಲಿ ಇದ್ದಾರೆ.

ತನಿಷ್ಕಾಗೆ ಮಂಗಳೂರಿನಲ್ಲಿ ಸಂಬಂಧಿಕರು ಇದ್ದಾರೆ. ಅವರಿಗೆ ಮಂಗಳೂರಿಗೆ ಬರೋದು ಎಂದರೆ ಸಖತ್ ಖುಷಿ. ಶೂಟಿಂಗ್ ಸಮಯದಲ್ಲಿ ಅವರು ಸಾಕಷ್ಟು ಸಮಯವನ್ನು ಇಲ್ಲಿ ಕಳೆದಿದ್ದಾರೆ. ಅದು ಅವರ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದು.

ತನಿಷ್ಕಾ ಕನ್ನಡ ಕಲಿಯುವ ಪ್ರಯತ್ನದಲ್ಲಿ ಇದ್ದಾರೆ. ಅವರು ತುಳುವನ್ನು ಸುಲಭದಲ್ಲಿ ಮಾತನಾಡ ಬಲ್ಲರು. ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಸಿನಿಮಾಗಳನ್ನು ಮಾಡುವ ಕನಸು ಅವರಿಗೆ ಇದೆ. ಸಿನಿಮಾ ಹಿಟ್ ಆಗಿರುವದರಿಂದ ಅವರಿಗೆ ಮತ್ತಷ್ಟು ಆಫರ್ಗಳು ಬರಲಿವೆ.