ಗ್ಯಾಸ್ ಸ್ಟವ್ ಜ್ವಾಲೆಯ ಬಣ್ಣವು ನೀಡುತ್ತೆ ಅಪಾಯದ ಸೂಚನೆ, ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 27, 2025 | 3:33 PM

ಗ್ಯಾಸ್ ಸ್ಟವ್ ಜ್ವಾಲೆಯ ಬಣ್ಣ ಬದಲಾವಣೆಯಾಗುವುದನ್ನು ಗಮನಿಸಿದ್ದೀರಬಹುದು. ಸಾಮಾನ್ಯವಾಗಿ ನೀಲಿ ಬಣ್ಣ ಕಾಣಿಸಿಕೊಂಡರೆ ಸುರಕ್ಷಿತವಾಗಿ ಉರಿಯುತ್ತಿದೆಯೇ ಎಂದು ಸೂಚಿಸುತ್ತದೆ. ಕೆಲವೊಮ್ಮೆ ಕೆಂಪು ಅಥವಾ ಹಳದಿ ಜ್ವಾಲೆಗಳು ಕಾಣಿಸಿಕೊಳ್ಳುತ್ತವೆ. ಗ್ಯಾಸ್ ಸ್ಟೌವ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಬರ್ನರ್ ರಂಧ್ರಗಳು ಮುಚ್ಚಿಹೋಗಿರಬಹುದು. ಈ ಬಣ್ಣ ಬದಲಾವಣೆಯೂ ಪ್ರಾಥಮಿಕವಾಗಿ ಸ್ಟೌವ್‌ನಿಂದ ಹೊರಸೂಸುವ ಇಂಗಾಲದ ಮಾನಾಕ್ಸೈಡ್ ಅನಿಲದಿಂದ ಉಂಟಾಗುತ್ತದೆ. ಕೆಂಪು ಅಥವಾ ಹಳದಿ ಜ್ವಾಲೆಯು ಸಾಮಾನ್ಯವಾಗಿ ಈ ಹಾನಿಕಾರಕ ಅನಿಲದ ಉಪಸ್ಥಿತಿಯನ್ನು ಸೂಚಿಸುತ್ತದೆ. ಹೀಗಾಗಿ ಬಣ್ಣ ಗ್ಯಾಸ್ ಸ್ಟವ್ ಬಣ್ಣ ನೋಡಿ ಅಪಾಯದ ಸೂಚನೆ ಕಂಡು ಬಂದರೆ ತಕ್ಷಣವೇ ಕ್ರಮ ಕೈಗೊಳ್ಳುವುದು ಸೂಕ್ತ.

1 / 5
ಈಗಿನ ಕಾಲದಲ್ಲಿ ಸೌದೆ ಒಲೆ ಬಳಸುವವರ ಸಂಖ್ಯೆ ತೀರಾ ಕಡಿಮೆಯೇ. ಹೀಗೇನಿದ್ದರೂ ಗ್ಯಾಸ್ ಸ್ಟವ್ (Gas Stove) ನಿಂದ ಅಡುಗೆ ಮಾಡುವವರೇ ಹೆಚ್ಚು. ಆದರೆ  ಗ್ಯಾಸ್ ಸ್ಟವ್ ಜ್ವಾಲೆಯೂ  ನೀಲಿ (Blue), ಹಳದಿ (Yellow) ಅಥವಾ ಕಿತ್ತಳೆ (Orange) ಬಣ್ಣದ್ದಲ್ಲಿರುವುದನ್ನು ಗಮನಿಸಿರಬಹುದು.  ಈ ಜ್ವಾಲೆಯ ಬಣ್ಣಕ್ಕೆ ಗಮನ ಕೊಡುವುದು ಅತ್ಯಗತ್ಯ. ನಾವು ಪ್ರತಿದಿನ ಅಡುಗೆಮನೆ (Kitchen) ಯಲ್ಲಿ ಬಳಸುವ ಒಲೆ ಹೇಗೆ ಉರಿಯುತ್ತದೆ ಎಂಬುದನ್ನು ಗಮನಿಸುವುದರಿಂದ ಅಡುಗೆ ಸುರಕ್ಷಿತವಾಗಿದೆಯೇ ಎಂದು ಅರ್ಥ ಮಾಡಿಕೊಳ್ಳಬಹುದು.

2 / 5
ಗ್ಯಾಸ್ ಸ್ಟವ್ ಜ್ವಾಲೆಯು ನೀಲಿ ಬಣ್ಣದಲ್ಲಿದ್ದರೆ, ಅನಿಲವು ಸಂಪೂರ್ಣವಾಗಿ ಉರಿಯುತ್ತಿದೆ ಎಂದರ್ಥ. ಇದು ಅಡುಗೆ ದಕ್ಷತೆಯನ್ನು ಹೆಚ್ಚಿಸುವ ಜ್ವಾಲೆಯಾಗಿದೆ. ನೀಲಿ ಜ್ವಾಲೆಯು ಆಹಾರವು ವೇಗವಾಗಿ ಬೇಯಲು ಸಹಾಯ ಮಾಡುತ್ತದೆ. ಇದು ಅನಿಲ ವ್ಯರ್ಥವಾಗುವುದನ್ನು ತಪ್ಪಿಸಿ  ಅಪಾಯಕಾರಿ ಇಂಗಾಲದ ಮಾನಾಕ್ಸೈಡ್ ಅನಿಲದ ಬಿಡುಗಡೆಯನ್ನು ಕಡಿಮೆ ಮಾಡುತ್ತದೆ.

3 / 5
ಗ್ಯಾಸ್ ಸ್ಟವ್ ಜ್ವಾಲೆಯ ಬಣ್ಣವು ಕಿತ್ತಳೆ ಅಥವಾ ಹಳದಿಯಾಗಿದ್ದರೆ ಸಂಪೂರ್ಣವಾಗಿ ಉರಿಯುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ  ಜ್ವಾಲೆಯು ಕಿತ್ತಳೆ ಬಣ್ಣದಲ್ಲಿದ್ದರೆ, ಅನಿಲ ಬಳಕೆ ಹೆಚ್ಚಾಗಿರುತ್ತದೆ. ಒಲೆಯ ಸುತ್ತಲೂ ಮಸಿ ಸಂಗ್ರಹವಾಗಿ ಪಾತ್ರೆಗಳು ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಈ ಬಣ್ಣವು ಹಾನಿಕಾರಕ ಇಂಗಾಲದ ಮಾನಾಕ್ಸೈಡ್ ಅನಿಲದ ಅತಿಯಾದ ಬಿಡುಗಡೆಗೆ ಕಾರಣವಾಗಬಹುದು. ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.

4 / 5
ಈ ರೀತಿ ಬಣ್ಣದಲ್ಲಿ ಬದಲಾವಣೆ ಕಂಡು ಬಂದರೆ ಬರ್ನರ್‌ನಲ್ಲಿ ಕಳಪೆ ಮಟ್ಟದ ಗಾಳಿಯ ಪೂರೈಕೆ ಮತ್ತು ಧೂಳು ಶೇಖರಣೆಯಾಗಿದೆ ಎಂದರ್ಥ. ಹೀಗಾಗಿ ಮೊದಲು ಮೊದಲು ಬರ್ನರ್ ಅನ್ನು ಸ್ವಚ್ಛಗೊಳಿಸಿ, ಅನಿಲ ಸಂಪರ್ಕ ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿ. ಅದಲ್ಲದೇ, ಗ್ಯಾಸ್  ಸ್ಟವ್ ಒನ್ ಮಾಡಿದಾಗ ಅನಿಲದ ವಾಸನೆ ಬಂದರೆ ಜಾಗರೂಕರಾಗಿರಿ.

5 / 5
ಆ ಕೂಡಲೇ ಈ ಕ್ರಮಗಳನ್ನು ಕೈಗೊಂಡರೆ ಪ್ರಾಣಾಪಯದಿಂದ ಪಾರಾಗಬಹುದು. ಹೀಗಾಗಿ  ತಕ್ಷಣವೇ ಗ್ಯಾಸ್ ಆಫ್ ಮಾಡಿ  ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಯಾವುದೇ ಕಾರಣಕ್ಕೂ ವಿದ್ಯುತ್ ದೀಪಗಳು ಮತ್ತು ಸ್ವಿಚ್‌ಗಳನ್ನು ಆನ್ ಮಾಡಬೇಡಿ.  ಅನಿಲ ಸೋರಿಕೆಯನ್ನು ಪರಿಶೀಲಿಸಿ, ಆ ಕೂಡಲೇ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ.