ಡ್ರೆಸ್ ಕೋಡ್ ನಿಯಮದಲ್ಲಿ ಬದಲಾವಣೆ; ವಿಂಬಲ್ಡನ್ ಆಡುವ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್

Wimbledon: ಹೊಸ ನಿಯಮದ ಪ್ರಕಾರ, ಮಹಿಳೆಯರು ಈಗ ತಮ್ಮ ಶಾರ್ಟ್ಸ್ ಅಥವಾ ಸ್ಕರ್ಟ್‌ಗಳಿಗಿಂತ ಉದ್ದವಾಗಿರದಿದ್ದಲ್ಲಿ ಡಾರ್ಕ್ ಅಥವಾ ಲೈಟ್-ಡಾರ್ಕ್ ಬಣ್ಣದ 'ಅಂಡರ್‌ಶಾರ್ಟ್ಸ್' ಧರಿಸಬಹುದು.

TV9 Web
| Updated By: ಪೃಥ್ವಿಶಂಕರ

Updated on:Nov 18, 2022 | 1:17 PM

ವಿಂಬಲ್ಡನ್​ನಲ್ಲಿ ಪಾಲ್ಗೊಳ್ಳುವ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ಆಟ ನಡೆಯುವ ವೇಳೆ ಎಲ್ಲಾ ಆಟಗಾರರು ಬಿಳಿ ಬಣ್ಣದ ಅಂಡರ್ ಶಾರ್ಟ್ಸ್ ಧರಿಸಬೇಕು ಎಂಬ ನಿಯಮವನ್ನು ವಿಂಬಲ್ಡನ್ ಆಡಳಿತ ಮಂಡಳಿ ಸಡಿಲಗೊಳಿಸಿದೆ. ಅಲ್ಲದೆ ಆಟಗಾರರಿಗೆ ಈಗ ಬೇರೆ ಬಣ್ಣದ 'ಅಂಡರ್ ಶಾರ್ಟ್ಸ್' ಧರಿಸಲು ಅವಕಾಶ ಮಾಡಿಕೊಟ್ಟಿದ್ದು, ಬಿಳಿ ಬಟ್ಟೆ ಧರಿಸುವ ಕಡ್ಡಾಯ ನಿಯಮವನ್ನು ಸಡಿಲಿಸಿದೆ.

1 / 5
ವಿಂಬಲ್ಡನ್ ತನ್ನ ಗ್ರಾಸ್‌ಕೋರ್ಟ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಎಲ್ಲಾ ಆಟಗಾರರಿಗೆ ಕಟ್ಟುನಿಟ್ಟಾದ ಬಿಳಿ ಉಡುಪಿನ ನಿಯಮವನ್ನು ಜಾರಿಗೊಳಿಸಿತ್ತು. ಆದರೆ ಆಲ್ ಇಂಗ್ಲೆಂಡ್ ಕ್ಲಬ್ WTA, ಬಟ್ಟೆ ಕಂಪನಿಗಳು ಮತ್ತು ವೈದ್ಯಕೀಯ ತಂಡದೊಂದಿಗೆ ಚರ್ಚಿಸಿದ ನಂತರ ತನ್ನ ನಿಯಮಗಳನ್ನು ನವೀಕರಿಸಲು ಯೋಜಿಸಿದೆ ಎಂದು ತಿಳಿಸಿದೆ. ಋತುಸ್ರಾವದ ಸಮಯದಲ್ಲಿ ಮಹಿಳಾ ಆಟಗಾರ್ತಿಯರು ಹೆಚ್ಚು ಆರಾಮದಾಯಕವಾಗಿ ಆಡಲು ಅನುವು ಮಾಡಿಕೊಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿಕೊಂಡಿದೆ.

2 / 5
ಹೊಸ ನಿಯಮದ ಪ್ರಕಾರ, ಮಹಿಳೆಯರು ಈಗ ತಮ್ಮ ಶಾರ್ಟ್ಸ್ ಅಥವಾ ಸ್ಕರ್ಟ್‌ಗಳಿಗಿಂತ ಉದ್ದವಾಗಿರದಿದ್ದಲ್ಲಿ ಡಾರ್ಕ್ ಅಥವಾ ಲೈಟ್-ಡಾರ್ಕ್ ಬಣ್ಣದ 'ಅಂಡರ್‌ಶಾರ್ಟ್ಸ್' ಧರಿಸಬಹುದು.

3 / 5
ಈ ನಿಯಮವನ್ನು ಹೊರತುಪಡಿಸಿ ಇನ್ನುಳಿದಂತೆ ಹಳೆಯ ನಿಯಮಗಳು ಹಾಗೆಯೇ ಇರುತ್ತವೆ ಎಂದು ವಿಂಬಲ್ಡನ್ ತಿಳಿಸಿದೆ. ಆಲ್ ಇಂಗ್ಲೆಂಡ್ ಕ್ಲಬ್‌ನ ಮುಖ್ಯ ಕಾರ್ಯನಿರ್ವಾಹಕರಾದ ಸ್ಯಾಲಿ ಬೋಲ್ಟನ್ ಈ ಬಗ್ಗೆ ಮಾಹಿತಿ ನೀಡಿದ್ದು, "ಆಟಗಾರರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ ಮತ್ತು ಅವರಿಗೆ ಯಾವ ರೀತಿಯ ನೆರವು ನೀಡಿದರೆ ಅವರು ಅತ್ಯುತ್ತಮ ಪ್ರದರ್ಶನ ನೀಡಬಹುದು ಎಂಬುದರ ಕುರಿತು ಅವರ ಪ್ರತಿಕ್ರಿಯೆಯನ್ನು ಕೇಳುತ್ತೇವೆ ಎಂದಿದ್ದಾರೆ.

4 / 5
ಹಾಗೆಯೇ ‘ಈ ನಿಯಮದಲ್ಲಿ ಸಡಿಲಿಕೆ ನೀಡುವ ಮೂಲಕ ಆಟಗಾರರ ಆತಂಕ ನಿವಾರಣೆಯಾಗಲಿದ್ದು, ಪ್ರದರ್ಶನದತ್ತ ಸಂಪೂರ್ಣ ಗಮನ ಹರಿಸಬಹುದು’ ಎಂದು ಸ್ಯಾಲಿ ಬೋಲ್ಟನ್ ಹೇಳಿದ್ದಾರೆ.

5 / 5

Published On - 1:17 pm, Fri, 18 November 22

Follow us