ಸ್ಯಾಂಡಲ್ವುಡ್ ಚೆಲುವೆ ಸಂಜನಾ ಆನಂದ್ ಜನಪ್ರಿಯತೆ ಹೆಚ್ಚುತ್ತಿದೆ. ವಿವಿಧ ಭಾಷೆಗಳಲ್ಲಿ ನಟಿಗೆ ಬೇಡಿಕೆ ಏರುತ್ತಿದೆ.
‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಸಂಜನಾ, ನಂತರ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಹನಿಮೂನ್’ ಸೀರೀಸ್ ಮೂಲಕ ಓಟಿಟಿಗೂ ಪದಾರ್ಪಣೆ ಮಾಡಿದ್ದಾರೆ ನಟಿ.
ಇತ್ತೀಚೆಗೆ ತೆರೆ ಕಂಡಿದ್ದ ‘ಸಲಗ’ ಸಂಜನಾಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ‘ಶೋಕಿವಾಲಾ’ ಚಿತ್ರದಲ್ಲೂ ಇವರ ಅಭಿನಯ ಗಮನಸೆಳೆದಿತ್ತು.
ಇದೀಗ ಸಂಜನಾ ಎರಡು ಚಿತ್ರಗಳ ಬಿಡುಗಡೆಗೆ ಕಾದಿದ್ದಾರೆ. ಅವುಗಳಲ್ಲಿ ಒಂದು ಕನ್ನಡ ಚಿತ್ರವಾದರೆ ಮತ್ತೊಂದು ತೆಲುಗಿನ ಚಿತ್ರ.
ನಿರೂಪ್ ಭಂಡಾರಿ ನಾಯಕರಾಗಿ ನಟಿಸುತ್ತಿರುವ, ಶೀತಲ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ‘ವಿಂಡೋ ಸೀಟ್’ ರಿಲೀಸ್ಗೆ ಸಿದ್ಧವಾಗಿದೆ. ಅದರಲ್ಲಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ.
‘ವಿಂಡೋ ಸೀಟ್’ ಚಿತ್ರದ ಟ್ರೇಲರ್ ಜೂನ್ 6ರಂದು ರಿಲೀಸ್ ಆಗಲಿದೆ.
‘ನೇನು ಮೀಕು ಬಾಗ ಕವಾಲ್ಸಿನವಾಡಿನಿ’ ಚಿತ್ರದ ಮೂಲಕ ಟಾಲಿವುಡ್ಗೆ ಸಂಜನಾ ಪದಾರ್ಪಣೆ ಮಾಡುತ್ತಿದ್ದಾರೆ. ಅದರ ಚಿತ್ರೀಕರಣ ಮುಕ್ತಾಯವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿರುವ ಸಂಜನಾ, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸಂಜನಾ ಆನಂದ್