ಇಂದು (ಮೇ 31) ವಿಶ್ವ ಧೂಮಪಾನ ರಹಿತ ದಿನ. ಒಂದು ವೇಳೆ ನೀವು ಧೂಮಪಾನದ ದಾಸರಾಗಿದ್ದು, ಅದನ್ನು ತ್ಯಜಿಸುವುದು ಕಷ್ಟ ಎಂದು ಯೋಚಿಸುತ್ತಿದ್ದರೆ ಈ ಬಾಲಿವುಡ್ ತಾರೆಯರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬಹುದು. ಒಂದು ಕಾಲದಲ್ಲಿ ಬಹಳಷ್ಟು ಸಿಗರೇಟ್ ಸೇದುತ್ತಿದ್ದ ಹೃತಿಕ್ ರೋಷನ್ ನಂತರ ಅದನ್ನು ಸಂಪೂರ್ಣ ತ್ಯಜಿಸಿದರು. 2020ರಲ್ಲಿ ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು
ಸಲ್ಮಾನ್ ಖಾನ್ ಚೈನ್ ಸ್ಮೋಕರ್ ಆಗಿದ್ದವರು. ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡ ನಂತರ ಸಂಪೂರ್ಣವಾಗಿ ಧೂಮಪಾನವನ್ನು ತ್ಯಜಿಸಿದರು.
ನಟ ಅರ್ಜುನ್ ರಾಮ್ಪಾಲ್ ಕೊರೊನಾ ಲಾಕ್ಡೌನ್ ಸಮಯದಲ್ಲಿ ಸಿಗರೇಟ್ ತ್ಯಜಿಸಿದರು. ಅವರ ಪುಟಾಣಿ ಪುತ್ರ ಇದಕ್ಕೆ ಪ್ರೇರಣೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದರು.
ಖ್ಯಾತ ನಟಿ ಕೊಂಕಣ್ ಸೇನ್ ಶರ್ಮಾ ಕೂಡ ಧೂಮಪಾನ ದಾಸರಾಗಿದ್ದರು. ತಾಯಿಯಾದ ನಂತರ ಅವರು ತಂಬಾಕು ತ್ಯಜಿಸಿದರು.
ಸೈಫ್ ಅಲಿ ಖಾನ್ ಕೂಡ ಧೂಮಪಾನದ ದಾಸರಾಗಿದ್ದವರು. 36ನೇ ವಯಸ್ಸಿನಲ್ಲಿ ಹಾರ್ಟ್ ಅಟ್ಯಾಕ್ಗೆ ತುತ್ತಾದ ನಂತರ ಅವರು ಅದನ್ನು ತ್ಯಜಿಸಿದರು.
ವಿವೇಕ್ ಒಬೆರಾಯ್ ಕೂಡ ಧೂಮಪಾನವನ್ನು ತ್ಯಜಿಸಿದವರು. ಅಲ್ಲದೇ ನಂತರದಲ್ಲಿ ಅವರು ಹಲವಾರು ಧೂಮಪಾನ ವಿರೋಧಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.