- Kannada News Photo gallery Cricket photos IPL 2022 Here is the Top 5 unexpected things on Indian Premier League 15th Edition
IPL 2022: ಈ ಬಾರಿಯ IPL ನಲ್ಲಿ ನಡೆದಿತ್ತು ಊಹಿಸಲಾಗದ ಘಟನೆ: ಏನದು?, ಇಲ್ಲಿದೆ ನೋಡಿ
IPL Final: ವಿರಾಟ್ ಕೊಹ್ಲಿ ಮೂರು ಬಾರಿ ಗೋಲ್ಡನ್ ಡಕ್- ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಅಚ್ಚರಿ ಎಂದರೆ IPL-2022 ರಲ್ಲಿ ಇವರು ಮೂರು ಬಾರಿ ಮೊದಲ ಎಸೆತದಲ್ಲೇ ಔಟಾದರು. ಇಡೀ ಕ್ರಿಕೆಟ್ ಲೋಕವೇ ಇವರ ಕಳಪೆ ಫಾರ್ಮ್ ಗೆ ಬೆರಗಾಗಿದೆ.
Updated on:May 31, 2022 | 10:34 AM



ರಾಯುಡು ನಿವೃತ್ತಿ - ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ಅಂಬಟಿ ರಾಯುಡು ಟ್ವಿಟರ್ ನಲ್ಲಿ ನಾನು ಸಿಎಸ್ಕೆಯಿಂದ ನಿವೃತ್ತಿ ಘೋಷಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ, ಕ್ಷಣಮಾತ್ರದಲ್ಲಿ ಟ್ವೀಟ್ ಕೂಡ ಡಿಲೀಟ್ ಮಾಡಿದರು. "ಇದು ನನ್ನ ಕೊನೆಯ ಐಪಿಎಲ್ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಕಳೆದ 13 ವರ್ಷಗಳಲ್ಲಿ ಎರಡು ಅತ್ಯುತ್ತಮ ತಂಡಗಳೊಂದಿಗೆ ಆಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನನಗೆ ಇಂತಹ ಅದ್ಭುತ ಪ್ರಯಾಣವನ್ನು ನೀಡಿದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು. ಆದರೆ, ಸಿಎಸ್ ಕೆ ಸಿಇಒ ಕಾಶಿ ಬಿಶ್ವನಾಥನ್ ಅವರು ರಾಯುಡು ನಿವೃತ್ತಿಯಾಗುತ್ತಿಲ್ಲ ಎಂದು ಹೇಳಿದರು.

ಚಹಲ್ ವಿರಾಟ್ ರನ್ ಔಟ್ - ಯುಜ್ಬೇಂದ್ರ ಚಹಲ್ ಕಳೆದ ಋತುವಿನಲ್ಲಿ ವಿರಾಟ್ ಕೊಹ್ಲಿಯ ಆರ್ ಬಿ ತಂಡದಲ್ಲಿದ್ದರು. ಆದರೆ, ಈ ಬಾರಿ ಅವರು ರಾಜಸ್ಥಾನ ರಾಯಲ್ಸ್ ಜೆರ್ಸಿಯಲ್ಲಿ ಆಡಿದ್ದಾರೆ. ಆರ್ ಆರ್ ಹಾಗೂ ಆರ್ ಸಿಬಿ ನಡುವಣ ಪಂದ್ಯದಲ್ಲಿ ವಿರಾಟ್ ಸಿಂಗಲ್ಸ್ ತೆಗೆದುಕೊಳ್ಳಲು ಮುಂದಾದಾಗ ಚಹಲ್ ಇವರನ್ನು ರನೌಟ್ ಮಾಡಿದ್ದು ದೊಡ್ಡ ಸದ್ದು ಮಾಡಿತ್ತು.

ನೋ-ಬಾಲ್ ವಿವಾದ- ಏಪ್ರಿಲ್ 22 ರಂದು ಐಪಿಎಲ್ ಪಂದ್ಯದ ಕೊನೆಯ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಟಕೀಯವಾಗಿ ಸೋತರು. ಆ ಪಂದ್ಯದಲ್ಲಿ ರಿಷಭ್ ಪಂತ್ ತಾಳ್ಮೆ ಕಳೆದುಕೊಂಡಿದ್ದು ಐಪಿಎಲ್ 2022ರ ದೊಡ್ಡ ವಿವಾದವಾಯಿತು. ಡೆಲ್ಲಿ ನಾಯಕ ಪಂತ್ ಅಂಪೈರ್ ವಿರುದ್ಧ ಸಿಡಿದೆದ್ದು ತಕ್ಷಣವೇ ತಮ್ಮ ಬ್ಯಾಟರ್ ಗಳನ್ನು ಮೈದಾನದಿಂದ ತೊರೆಯುವಂತೆ ಹೇಳಿದರು.
Published On - 9:48 am, Tue, 31 May 22



















