ಯಾದಗಿರಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ, ಎತ್ತುಗಳಿಗೆ ಸಿಂಗಾರ: ಫೋಟೋಸ್ ನೋಡಿ
ಕಾರು ಹುಣ್ಣಿಮೆ ಮುಗಿಯಿತು, ಅನ್ನುವಷ್ಟರಲ್ಲಿ ಬರುವ ಮತ್ತೊಂದು ರೈತರ ಹಬ್ಬ ಅಂದ್ರೆ ಅದು ಮಣ್ಣೆತ್ತಿನ ಅಮವಾಸ್ಯೆ. ಮಣ್ಣೆತ್ತಿನ ಅಮಾವಾಸ್ಯೆ ದಿನ ರೈತರು ಮಣ್ಣಿನ ಎತ್ತುಗಳನ್ನು ತಯಾರಿಸಿ ಅಥವಾ ಅಂಗಡಿಯಿಂದ ಖರೀದಿಸಿಕೊಂಡು ಬಂದು ಪೂಜಿಸುತ್ತಾರೆ. ಈ ಬಾರಿಯ ಮಾರುಕಟ್ಟೆಯಲ್ಲಿ ಕಲರ್ ಫುಲ್ ಮಣ್ಣೆತ್ತುಗಳು ಎಂಟ್ರಿ ಕೊಟ್ಟಿವೆ. ಫೋಟೋಸ್ ನೋಡಿ.
15 ದಿನಗಳ ಹಿಂದೆಷ್ಟೇ ಕಾರುಣ್ಣಿಮೆ ಮುಗಿದಿದೆ. 15 ದಿನಗಳ ಬಳಿಕ ಮತ್ತೊಂದು ಹಬ್ಬದ ಸಂಭ್ರಮದಲ್ಲಿ ಯಾದಗಿರಿ ಜನರಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಯಾದಗಿರಿ ಕೃಷಿ ಪ್ರಧಾನ ಜಿಲ್ಲೆಯಲ್ಲಾಗಿದ್ದರಿಂದ ಜಿಲ್ಲೆಯ ಜನ ಮಣ್ಣೆತ್ತಿನ ಅಮಾವಾಸ್ಯೆ ದಿನ ಬೆಳಗ್ಗೆ ಎದ್ದು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಅಥವಾ ಅಂಗಡಿಯಿಂದ ಖರೀದಿಸಿಕೊಂಡು ಬಂದು ಮನೆಯಲ್ಲಿರುವ ದೇವರ ಜಗಲಿ ಮೇಲೆ ಇಟ್ಟು ಮನೆಯ ಮಂದಿಯಲ್ಲ ಸೇರಿಕೊಂಡು ಪೂಜೆ ಮಾಡುತ್ತಾರೆ.
1 / 6
ಮಣ್ಣಿನ ಎತ್ತುಗಳಿಗಾಗಿಯೇ ವಿಶೇಷ ರೀತಿಯಲ್ಲಿ ನೈವೇದ್ಯ ಕೂಡ ಸಿದ್ದಪಡಿಸುತ್ತಾರೆ. ಪೂಜೆ ಬಳಿಕ ಮಣ್ಣೆತ್ತುಗಳಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ಮಣ್ಣೆತ್ತಿನ ಅಮವಾಸ್ಯೆಯನ್ನು ಎಲ್ಲ ಧರ್ಮದ ರೈತರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಪೂಜೆ ಸಲ್ಲಿಸಿದ ಬಳಿಕ ರೈತರಿಗೆ ಒಳ್ಳೆಯದಾಗಲಿ ಜೊತೆಗೆ ಈ ಬಾರಿ ಬೆಳೆ ಚೆನ್ನಾಗಿ ಬರಲಿ ಅಂತ ಮಣ್ಣೆತ್ತಿನ ರೂಪದಲ್ಲಿರುವ ಬಸವಣ್ಣನ ಬಳಿ ಬೇಡಿಕೊಳ್ಳುತ್ತಾರೆ.
2 / 6
ಈ ಬಾರಿ ಮಾರುಕಟ್ಟೆಗೆ ಹೊಸ ಹೊಸ ರೀತಿಯ ಮಣ್ಣೆತ್ತುಗಳು ಎಂಟ್ರಿ ಕೊಟ್ಟಿವೆ. ಮಣ್ಣೆತ್ತಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಕುಂಬಾರರು ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ಕಲರ್ ಫುಲ್ ಆಗಿರುವ ಎತ್ತುಗಳನ್ನು ತಂದಿದ್ದಾರೆ. ಹೀಗಾಗಿ, ದಾರಿಯಲ್ಲಿ ಹಾದು ಹೋಗುವವರು ಸಹ ಮಣ್ಣೆತ್ತುಗಳನ್ನು ಖರೀದಿ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಕಾರುಣ್ಣಿಮೆಗೆ ಯಾವ ರೀತಿ ಎತ್ತುಗಳಿಗೆ ಸಿಂಗಾರ ಮಾಡ್ತಾರೋ ಅದೆ ರೀತಿ ಈ ಮಣ್ಣೆತ್ತುಗಳಿಗೂ ಸಿಂಗಾರ ಮಾಡಲಾಗುತ್ತದೆ. ಮಣ್ಣೆತ್ತುಗಳಿಗೆ ನಾನಾ ರೀತಿಯ ಬಣ್ಣಗಳನ್ನ ಹಚ್ಚಿ, ಬಟ್ಟೆ ಹೊದಿಸಲಾಗುತ್ತದೆ.
3 / 6
ಸದ್ಯ ಮಾರುಕಟ್ಟೆಯಲ್ಲಿ ಬಣ್ಣಗಳಿಲ್ಲದ ಮಣ್ಣಿನ ಎತ್ತುಗಳಿಗೆ ಡಿಮ್ಯಾಂಡ್ ಕಡಿಮೆಯಾಗಿದೆ. ಈ ಕಾರಣದಿಂದ ಕುಂಬಾರರು ಕಲರ್ ಫುಲ್ ಆಗಿರುವ ಎತ್ತುಗಳನ್ನು ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ತಂದಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಗ್ರಾಹಕರು ಮಣ್ಣೆತ್ತುಗಳನ್ನು ಖರೀದಿಸಿರುವುದರಿಂದ ಕುಂಬಾರರಿಗೆ ವ್ಯಾಪಾರ ಜೋರಾಗಿ ನಡೆಯುತ್ತಿದೆ.
4 / 6
ನಿನ್ನೆ ಮತ್ತು ಇವತ್ತು ಜನ ಮುಗಿ ಬಿದ್ದು ಮಣ್ಣೆತ್ತುಗಳನ್ನು ಖರೀದಿ ಮಾಡಿದ್ದಾರೆ. ಜೋಡಿ ಮಣ್ಣೆತ್ತುಗಳು 40 ರೂ.ಯಿಂದ 600 ರೂ. ವರೆಗೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಎರಡು ದಿನಕ್ಕೆ ಮಾತ್ರ ಎತ್ತುಗಳ ಮಾರಾಟ ವ್ಯಾಪಾರ ನಡೆಯುವುದ್ದರಿಂದ ವ್ಯಾಪರ ಜೋರಾಗಿ ನಡೆಯುತ್ತೆ ಎನ್ನುತ್ತಾರೆ ಕುಂಬಾರರು.
5 / 6
ಒಟ್ಟಿನಲ್ಲಿ ಈ ತಂತ್ರಾಜ್ಞಾನದ ಯುಗದಲ್ಲಿ ಹಳೆ ಸಂಪ್ರಾಯಗಳು ಮಾಯವಾಗುತ್ತಿರುವ ನಡುವೆ ಯಾದಗಿರಿ ಜಿಲ್ಲೆಯ ಜನ ಇಂತಹ ಆಚರಣೆಗಳನ್ನು ಪಾಲಸಿಕೊಂಡು ಬರುವ ಮೂಲಕ ಪುರಾತನ ಸಂಪ್ರಾಯವನ್ನು ಇನ್ನೂವರೆಗೂ ಜೀವಂತವಾಗಿಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು.