‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡಿನ ರೊಮ್ಯಾನ್ಸ್ ಝಲಕ್; ಯಶ್-ಕಿಯಾರಾ ಬೋಲ್ಡ್ ದೃಶ್ಯದ ಗ್ಯಾಲರಿ

Updated on: Jul 08, 2026 | 12:55 PM

ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಟಾಕ್ಸಿಕ್’ ಚಿತ್ರದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ ಬಿಡುಗಡೆಯಾಗಿದೆ. ರಾಯ ಮತ್ತು ರುಮಿ ಪಾತ್ರಗಳ ಮಿತಿಮೀರಿದ ರೊಮ್ಯಾನ್ಸ್ ಹಾಗೂ ಬೋಲ್ಡ್ ದೃಶ್ಯಗಳ ಆಕರ್ಷಕ ಫೋಟೋ ಗ್ಯಾಲರಿ ಇಲ್ಲಿದೆ. ಈ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಮೊದಲ ದಿನ ಸಿನಿಮಾ ಭರ್ಜರಿ ಗಳಿಕೆ ಮಾಡುವ ನಿರೀಕ್ಷೆ ಇದೆ.

1 / 7
ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟನೆಯ ‘ಟಾಕ್ಸಿಕ್’ ಸಿನಿಮಾದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಇಬ್ಬರ ಭರ್ಜರಿ ಕೆಮಿಸ್ಟ್ರಿ ಮೂಡಿಬಂದಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಸುದ್ದಿ ಆಗುತ್ತಿದೆ. ಇಬ್ಬರ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.

2 / 7
ಹಾಡಿನ ಉದ್ದಕ್ಕೂ ಯಶ್ ಮತ್ತು ಕಿಯಾರಾ ಅವರ ಮಿತಿಮೀರಿದ ರೊಮ್ಯಾನ್ಸ್ ಹೈಲೈಟ್ ಆಗಿದೆ. ಮಳೆಯ ಹಿನ್ನೆಲೆಯಲ್ಲಿ ಹಾಗೂ ಸುಂದರ ಕಡಲತೀರದಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಕಿಯಾರಾ ಅವರ ಗ್ಲಾಮರ್ ಮತ್ತು ಯಶ್ ಅವರ ಕಟ್ಟುಮಸ್ತಾದ ದೇಹ ಹಾಡಿನ ಹೈಲೈಟ್.

3 / 7
ಈ  ಗೀತೆಗೆ ಕನ್ನಡದ ಖ್ಯಾತ ನಿರ್ದೇಶಕ ಹಾಗೂ ಸಾಹಿತಿ ಯೋಗರಾಜ್ ಭಟ್ ಅವರು ಅದ್ಭುತವಾಗಿ ಸಾಹಿತ್ಯ ಬರೆದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಲಿರಿಕಲ್ ವಿಡಿಯೋಗೆ ಭಾರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಹೊರಬಂದಿರುವ ಪೂರ್ಣ ವಿಡಿಯೋ ಸಾಂಗ್, ದೃಶ್ಯ ವೈಭವ ಹಾಗೂ ಮೇಕಿಂಗ್ ವಿಚಾರದಲ್ಲಿ ಸಿನಿಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.

4 / 7
ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು 'ರಾಯ' ಎಂಬ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಯಾರಾ ಅಡ್ವಾಣಿ ಅವರು 'ರುಮಿ' ಹೆಸರಿನ  ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಬೆಳ್ಳಿತೆರೆಯ ಮೇಲೆ ಹೊಸ ಮ್ಯಾಜಿಕ್ ಸೃಷ್ಟಿಸಲಿದೆ ಎಂಬುದಕ್ಕೆ ಈ ಹಾಡೇ ಸಾಕ್ಷಿ.

5 / 7
ಖ್ಯಾತ ಮಹಿಳಾ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಈ ಬಿಗ್ ಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾದ ಪ್ರತಿಯೊಂದು ಫ್ರೇಮ್ ಕೂಡ ಅದ್ದೂರಿಯಾಗಿ ಮೂಡಿಬಂದಿದ್ದು, ಪ್ರಚಾರದ ಭಾಗವಾಗಿ ಬೆಳಿಗ್ಗೆ 11.33ಕ್ಕೆ ಸರಿಯಾಗಿ ಬಿಡುಗಡೆಯಾದ ಈ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ ದಾಖಲೆ ವೀಕ್ಷಣೆ ಪಡೆಯುವತ್ತ ಮುನ್ನುಗ್ಗುತ್ತಿದೆ.

6 / 7
ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರವು, ಇಡೀ ಭಾರತೀಯ ಚಿತ್ರರಂಗದಲ್ಲೇ ಸದ್ಯದ ಮಟ್ಟಿಗೆ ಅತ್ಯಂತ ಭಾರಿ ಕುತೂಹಲ ಮೂಡಿಸಿರುವ ಚಿತ್ರವಾಗಿದೆ.

7 / 7
ಬಹುನಿರೀಕ್ಷಿತ ‘ಟಾಕ್ಸಿಕ್’ ಪ್ಯಾನ್ ವರ್ಲ್ಡ್ ಸಿನಿಮಾ ಇದೇ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ. ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗಲಿರುವ ಈ ಚಿತ್ರವು, ಬಾಕ್ಸ್ ಆಫೀಸ್‌ನಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡುವುದು ಗ್ಯಾರಂಟಿ ಎಂದು ಗಾಂಧಿನಗರದ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

Follow Us