
ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಅನೇಕರಿಗೆ ಮಾದರಿ. ಇವರು ಹಾಯಾಗಿ ಸಂಸಾರ ನಡೆಸುಕೊಂಡು ಹೋಗುತ್ತಿದ್ದಾರೆ. ಇವರ ದಾಂಪತ್ಯಕ್ಕೆ ಈಗ ಎಂಟು ವರ್ಷ. 2016ರ ಡಿಸೆಂಬರ್ 9ರಂದು ಈ ಜೋಡಿ ವಿವಾಹ ಆಯಿತು.

ಯಶ್ ಹಾಗೂ ರಾಧಿಕಾ ಪಂಡಿತ್ಗೆ ಕಿರುತೆರೆಯಿಂದ ಪರಿಚಯ ಇದೆ. ಇಬ್ಬರೂ ಒಂದೇ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದರು. ಆ ಬಳಿಕ ಹಿರಿತೆರೆಗೂ ಒಟ್ಟಿಗೆ ಕಾಲಿಟ್ಟರು. ಕೆಲವು ಸಿನಿಮಾಗಳಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡರು.

ಆ ಬಳಿಕ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ನಂತರ ಮದುವೆ ಕೂಡ ಆಯಿತು. ಈಗ ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ದಾಂಪತ್ಯ ಅನೇಕರಿಗೆ ಮಾದರಿ. ಈ ಜೋಡಿಗೆ ಆಯ್ರಾ ಹಾಗೂ ಯಥರ್ವ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ದಾಂಪತ್ಯದಲ್ಲಿ ಸಾಕಷ್ಟು ಫನ್ ಮೂಮೆಂಟ್ಗಳು ಇವೆ. ಆ ಪೈಕಿ ರಾಧಿಕಾಗೆ ಸಿಕ್ಕ ಮೊದಲ ಗಿಫ್ಟ್ ಕೂಡ ಒಂದು. ಏನೂ ಸಿಕ್ಕಿಲ್ಲ ಎಂದು ರಾಧಿಕಾಗೆ ಕೊತ್ತುಂಬರಿ ಸೊಪ್ಪನ್ನು ತಂದುಕೊಟ್ಟಿದ್ದರು ಯಶ್.

ರಾಧಿಕಾ ಪಂಡಿತ್ಗೆ ಈಗ ಯಶ್ ಯಾವುದಕ್ಕೂ ಕಡಿಮೆ ಮಾಡುತ್ತಿಲ್ಲ. ಅವರು ಸಾಕಷ್ಟು ಸಮಯವನ್ನು ಕುಟುಂಬದ ಜೊತೆ ಕಳೆಯುತ್ತಾರೆ. ವಿಶೇಷ ದಿನಗಳನ್ನು ಕುಟುಂಬದ ಜೊತೆ ಆಚರಿಸಿಕೊಳ್ಳಲು ಆದ್ಯತೆ ನೀಡುತ್ತಾರೆ.