
ನಟ ಯಶ್ ಅವರ ಹುಟ್ಟುಹಬ್ಬ ಇಂದು (ಜನವರಿ 08) ಕಳೆದ ಬಾರಿಯಂತೆ ಈ ಬಾರಿಯೂ ಸಹ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಹುಟ್ಟುಹಬ್ಬದ ದಿನ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಗೋವಾದ ಕಡಲ ಕಿನಾರೆಯಲ್ಲಿ ಪತ್ನಿ ರಾಧಿಕಾ, ಮಕ್ಕಳು ಹಾಗೂ ‘ಟಾಕ್ಸಿಕ್’ ಚಿತ್ರತಂಡದ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಯಶ್ ಹುಟ್ಟುಹಬ್ಬದಂದು ನಡೆದ ಅವಘಡದಲ್ಲಿ ಅವರ ಅಭಿಮಾನಿಗಳು ನಿಧನ ಹೊಂದಿದ್ದರು. ಅದಾದ ಬಳಿಕ ಯಶ್ ಅವರು ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ಹುಟ್ಟುಹಬ್ಬದಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

‘ಟಾಕ್ಸಿಕ್’ ಸಿನಿಮಾದ ನಿರ್ಮಾಪಕ, ಕೆವಿಎನ್ ಪ್ರೊಡಕ್ಷನ್ನ ವೆಂಕಟ್ ನಾರಾಯಣ್ ಸೇರಿದಂತೆ ಇನ್ನೂ ಕೆಲವು ಪ್ರಮುಖರು ಯಶ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದು, ಅವರಿಗೆ ಶುಭಾಶಯ ತಿಳಿಸಿದ್ದಾರೆ.

ತಾವು ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣ ಹಾಗೂ ಹುಟ್ಟುಹಬ್ಬದ ದಿನ ಬೆಂಗಳೂರಿನಲ್ಲಿ ಇಲ್ಲದೇ ಇರುವ ಕಾರಣ ಯಾರೂ ಮನೆಯ ಬಳಿ ಬರಬಾರದೆಂದು ಮೊದಲೇ ಅಭಿಮಾನಿಗಳ ಬಳಿ ನಟ ಯಶ್ ಮನವಿ ಮಾಡಿದ್ದರು.
Published On - 4:14 pm, Wed, 8 January 25