ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಲ್ಲಿ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಬೀಚ್ ಪಕ್ಕ ನಿಂತು ಫೋಟೋ ಹಂಚಿಕೊಂಡಿದ್ದರು. ರಾಧಿಕಾ ಜತೆ ಮಕ್ಕಳಾದ ಆಯ್ರಾ ಯುಶ್ ಹಾಗೂ ಯಥರ್ವ್ ಯಶ್ ಕೂಡ ಇದ್ದಾರೆ.
ಆಯ್ರಾ ಹಾಗೂ ಯಥರ್ವ್ ಇಬ್ಬರೂ ರಾಧಿಕಾ ಜತೆ ರಜೆಯ ಮಜ ಕಳೆಯುತ್ತಿರುವ ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು ರಾಧಿಕಾ ಹಂಚಿಕೊಂಡಿದ್ದಾರೆ.
ರಾಧಿಕಾ ಹಾಗೂ ಮಕ್ಕಳ ಜತೆ ಯಶ್ ಕೂಡ ಇದ್ದಾರೆ ಎನ್ನಲಾಗುತ್ತಿದೆ. ಆದರೆ, ಯಶ್ ಜತೆಗಿನ ಫೋಟೋಗಳನ್ನು ರಾಧಿಕಾ ಶೇರ್ ಮಾಡಿಕೊಂಡಿಲ್ಲ.
ರಾಧಿಕಾ ಪಂಡಿತ್ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಗಿದ್ದರು. ಮದುವೆ ಬಳಿಕ ಅವರು ಸಿನಿಮಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಮತ್ತೆ ಬಣ್ಣದ ಲೋಕಕ್ಕೆ ಬರಲಿ ಎಂಬುದು ಅನೇಕರ ಕೋರಿಕೆ.