
ಮನಾಲಿ : ಹೊಸದಾಗಿ ಮದುವೆಯಾದ ಜೋಡಿ ಹನಿಮೂನ್ ಗಾಗಿ ಆಯ್ಕೆ ಮಾಡಿಕೊಂಡ ತಾಣಗಳಲ್ಲಿ ಹಿಮಾಚಲ ಪ್ರದೇಶದಲ್ಲಿರುವ ಮನಾಲಿ ಕೂಡ ಸೇರಿದೆ. 2024 ರಲ್ಲಿ ಜೋಡಿಗಳ ಹನಿಮೂನ್ ತಾಣಗಳ ಪೈಕಿ ಮೊದಲ ಆಯ್ಕೆಯೇ ಈ ಮನಾಲಿ ಆಗಿದ್ದು, ಪ್ಯಾರಾ ಗೈಡಿಂಗ್, ಟ್ರಕ್ಕಿಂಗ್ ಸೇರಿದಂತೆ ವಿವಿಧ ಕ್ರೀಡೆಗಳ ಮೂಲಕ ಜೋಡಿಗಳು ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ನವವಿವಾಹಿತ ಜೋಡಿಗಳು ಈ ತಾಣಕ್ಕೆ ಭೇಟಿ ನೀಡಿ ರೋಮಾಂಚಕ ಅನುಭವವನ್ನು ಪಡೆದಿದ್ದಾರೆ.

ಡಾರ್ಜಿಲಿಂಗ್ : ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಿಲಿಂಗ್ ಕೂಡ ಒಂದು. ಎಲ್ಲಿ ನೋಡಿದರಲ್ಲಿ ನೈಸರ್ಗಿಕ ಸೌಂದರ್ಯ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯಮಯ ಆಕರ್ಷಣೆಗಳಿಂದ ಕೂಡಿದೆ. ಹನಿಮೂನ್ ತಾಣಗಳ ಪೈಕಿ ಅತೀ ಹೆಚ್ಚು ವಿವಾಹಿತ ಜೋಡಿ ಭೇಟಿ ನೀಡಿದ ತಾಣಗಳಲ್ಲಿ ಇದು ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಈ ವರ್ಷ ನವ ಜೋಡಿ ಹೆಚ್ಚಾಗಿ ಇಲ್ಲಿ ಭೇಟಿ ವಿಭಿನ್ನ ಅನುಭವವನ್ನು ಪಡೆದುಕೊಂಡಿದ್ದಾರೆ.

ಶ್ರೀನಗರ : 2024 ರಲ್ಲಿ ನವಜೋಡಿಗಳು ಹನಿಮೂನ್ ಗಾಗಿ ಆಯ್ಕೆ ಮಾಡಿದ ತಾಣಗಳಲ್ಲಿ ಶ್ರೀನಗರ ಕೂಡ ಒಂದು. ಎತ್ತರದ ಹಿಮಾಲಯ ಪರ್ವತಗಳು, ತಂಪಾದ ವಾತಾವರಣದ ನಡುವೆ ಹಚ್ಚ ಹಸಿರಿನ ಪ್ರಕೃತಿಯ ಸೌಂದರ್ಯವು ಜೋಡಿಗಳನ್ನು ಆಕರ್ಷಿಸಿದೆ. ದಾಲ್, ಶಿಖರ್ ಸರೋವರದ ವಿಹಾರ, ಮರದ ದೋಣಿಗಳ ಮೇಲಿನ ಪ್ರಯಾಣ, ವಾಸ್ತವ್ಯವಿರುವ ಕಾರಣ ಹೆಚ್ಚು ಜೋಡಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.

ಗೋವಾ : ಮೋಜು ಮಸ್ತಿಯೆಂದಾಗ ಮೊದಲು ನೆನಪಾಗುವುದೇ ಈ ಗೋವಾ. ಆದರೆ 2024 ರಲ್ಲಿ ನವ ಜೋಡಿಗಳು ಈ ತಾಣಕ್ಕೆ ಹೆಚ್ಚು ಭೇಟಿ ನೀಡಿದ್ದಾರೆ. ಹೀಗಾಗಿ ಈ ವರ್ಷದ ಹನಿಮೂನ್ ಸ್ಟಾಪ್ ಗಳಲ್ಲಿ ಗೋವಾ ನಾಲ್ಕನೇ ಸ್ಥಾನವನ್ನು ಗಳಿಸಿಕೊಂಡಿದೆ. ಹನಿಮೂನ್ ಗೆಂದು ಈ ಸ್ಥಳಕ್ಕೆ ಭೇಟಿ ನೀಡಿದ ಜೋಡಿಗಳು ಪಾರ್ಟಿ, ಬೀಚ್‌ಗಳು, ಸಮುದ್ರಾಹಾರಗಳನ್ನು ಸವಿದು ಸಂಭ್ರಮಿಸಿದ್ದಾರೆ.

ಲಕ್ಷದ್ವೀಪ : ಈ ವರ್ಷ ವಿವಾಹಿತ ದಂಪತಿಗಳು ಅತೀ ಹೆಚ್ಚು ಭೇಟಿ ನೀಡಿದ ಹನಿಮೂನ್ ತಾಣಗಳ ಪೈಕಿ ಐದನೇ ಸ್ಥಾನದಲ್ಲಿ ಲಕ್ಷದ್ವೀಪವಿದೆ. ವಿದೇಶಿ ಪ್ರವಾಸಕ್ಕೆ ತೆರಳುವ ಬದಲು ಕಡಿಮೆ ಖರ್ಚಿನಲ್ಲಿ ಈ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿನ ಸೌಂದರ್ಯವು ಮಾಲ್ಡೀವ್ಸ್‌ನಂತೆಯೇ ಇದೆ. ಇಲ್ಲಿ ಹಲವಾರು ಐಷಾರಾಮಿ ಹೋಟೆಲ್-ರೆಸಾರ್ಟ್‌ಗಳಿಂದ ಕೂಡಿದ್ದು ಹೊಸ ಲೋಕಕ್ಕೆ ಹೋದಂತಹ ಅನುಭವ ನೀಡುತ್ತದೆ. ಜಲ ಸಾಹಸ ಕ್ರೀಡೆಗಳು ಸೇರಿದಂತೆ ಇನ್ನಿತ್ತರ ಆಕರ್ಷಣೆಗಳು ಕೂಡಿದ್ದು, ಈ ಬಾರಿ ಅತೀ ಹೆಚ್ಚು ಜೋಡಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.