Year Ender 2024: ಈ ವರ್ಷ ಹಿಟ್ ಆದ ಕನ್ನಡ ಸಿನಿಮಾಗಳಿವು

|

Updated on: Dec 29, 2024 | 1:17 PM

Year Ender 2024: 2022 ಮತ್ತು 2023 ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ ವರ್ಷಗಳಾಗಿದ್ದವು. ಈ ಎರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸದ್ದು ಮಾಡಿತು. 2023ರಲ್ಲಿ ‘ಕಾಂತಾರ’ ಸಿನಿಮಾದ ಭಾರಿ ಗೆಲುವಿನ ಬಲವಾಗಿ ಇಟ್ಟುಕೊಂಡು 2024ಕ್ಕೆ ಚಿತ್ರರಂಗ ಕಾಲಿಟ್ಟಿತು. ಆದರೆ ಈ ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದು ಕೇವಲ ನಿರಾಸೆಯಷ್ಟೆ. ಮೊದಲ ಅರ್ಧ ವರ್ಷ ಕನ್ನಡ ಸಿನಿಮಾಗಳು ಯಶಸ್ಸಿನ ರುಚಿ ನೋಡಲಿಲ್ಲ. ಆದರೆ ವರ್ಷದ ದ್ವಿತೀಯಾರ್ಧದಲ್ಲಿ ಭರ್ಜರಿ ಯಶಸ್ಸು ದೊರೆತಿದೆ. ಈ ವರ್ಷ ಹಿಟ್ ಎನಿಸಿಕೊಂಡ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

1 / 6
ಈ ವರ್ಷ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಒಂದು ಸ್ಪಷ್ಟ ಗೆಲುವು ತಂದುಕೊಟ್ಟ ಸಿನಿಮಾ ‘ಭೀಮ’. ದುನಿಯಾ ವಿಜಯ್ ನಟಿಸಿ, ನಿರ್ದೇಶನವನ್ನೂ ಮಾಡಿದ್ದ ‘ಭೀಮ’ ಸಿನಿಮಾ, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಬಾಕ್ಸ್ ಆಫೀಸ್​ನಲ್ಲಿ ಗೆಲುವು ಕಂಡಿತು. ದುನಿಯಾ ವಿಜಯ್ ಎರಡನೇ ಬಾರಿ ನಿರ್ದೇಶಕರಾಗಿ ಗೆಲುವು ಕಂಡರು.

2 / 6
‘ಭೀಮ’ ಸಿನಿಮಾ ಬಿಡುಗಡೆ ಆದ ಒಂದೇ ವಾರದ ಅಂತರದಲ್ಲಿ ಬಿಡುಗಡೆ ಆದ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸಹ ದೊಡ್ಡ ಗೆಲುವು ಕಂಡಿತು. ಈ ಸಿನಿಮಾ ಶತದಿನ ಆಚರಿಸಿದ್ದು ವಿಶೇಷ. ಸುಂದರವಾದ ಹಾಡುಗಳು, ಸರಳವಾದ ಪ್ರೇಮಕತೆ, ಹಾಸ್ಯ ಎಲ್ಲವನ್ನೂ ಒಳಗೊಂಡಿದ್ದ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಯ್ತು.

3 / 6
ಶ್ರೀಮುರಳಿ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ವರ್ಷಗಳಾಗಿದ್ದವು. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಆದ ‘ಬಘೀರ’ ಸಿನಿಮಾ ಒಳ್ಳೆಯ ಹಿಟ್ ಸಿನಿಮಾ ಎನಿಸಿಕೊಂಡಿತು. ಹೊಂಬಾಳೆ ನಿರ್ಮಾಣ ಮಾಡಿದ್ದ ಈ ಸಿನಿಮಾ ಸೂಪರ್ ಹೀರೋ ಕತೆ ಒಳಗೊಂಡಿತ್ತು. ರುಕ್ಮಿಣಿ ವಸಂತ್ ನಾಯಕಿಯಾಗಿದ್ದ ಈ ಸಿನಿಮಾ ಸಾಧಾರಣ ಗೆಲುವು ಕಂಡಿತು.

4 / 6
ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿ ಉತ್ತಮ ಗೆಲುವು ಕಂಡಿತು. ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿದ್ದ ಈ ಸಿನಿಮಾವನ್ನು ಶಿವಣ್ಣ ಹೋಮ್ ಬ್ಯಾನರ್ ಮೂಲಕ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ.

5 / 6
ಬಹಳ ವರ್ಷಗಳ ನಂತರ ಉಪೇಂದ್ರ ನಿರ್ದೇಶನ ಮಾಡಿ ನಟಿಸಿರುವ ‘ಯುಐ’ ಸಿನಿಮಾ ವಾರದ ಹಿಂದಷ್ಟೆ ಬಿಡುಗಡೆ ಆಗಿದ್ದು, ಬಹಳ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆದ ಮೊದಲ ದಿನವೇ ಸುಮಾರು 7 ಕೋಟಿ ರೂಪಾಯಿ ಗಳಿಸಿತು. ಒಂದೇ ವಾರಕ್ಕೆ ಸಿನಿಮಾಕ್ಕೆ ಹಿಟ್ ಬೋರ್ಡ್ ಬಿದ್ದಿದೆ.

6 / 6
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನವಾದರೂ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ, ಮಾಡುತ್ತಿರುವ ಕಲೆಕ್ಷನ್ ನೋಡಿದರೆ ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎನ್ನಲಾಗುತ್ತಿದೆ. ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆದ ಕೇವಲ ನಾಲ್ಕು ದಿನದಲ್ಲಿ 22 ಕೋಟಿಗೂ ಹೆಚ್ಚು ಹಣ ಗಳಿಸಿದೆ.