ಮೂರು ತಿಂಗಳ ಬಳಿಕ ತಂಗಿ ಮದುವೆಯ ಚಿತ್ರಗಳ ಹಂಚಿಕೊಂಡ ನಟಿ ಸಾಯಿ ಪಲ್ಲವಿ
Sai Pallavi: ಮದುವೆಯಾಗಿ ಮೂರು ತಿಂಗಳ ಬಳಿಕ ಸಾಯಿ ಪಲ್ಲವಿ, ತಂಗಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಉದ್ದನೆಯ ಪೋಸ್ಟ್ ಹಂಚಿಕೊಂಡಿದ್ದು, ತಂಗಿ ಖುಷಿಯಾಗಿದ್ದಾಳೆ ಎಂದಿದ್ದಾರೆ. ಎಲ್ಲ ವಿಷಯದಲ್ಲಿಯೂ ನಾನು ತಂಗಿ ಪೂಜಾಗೆ ಸಲಹೆ ನೀಡುತ್ತಿದ್ದೆ. ಆದರೆ ಮದುವೆ ವಿಷಯದಲ್ಲಿ ನಾನು ಯಾವುದೇ ಸಲಹೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಹೆದರಿದ್ದೆ, ಆದರೆ ಆ ಹೆದರಿಕೆ ಈಗ ಹೊರಟು ಹೋಗಿದೆ ಎಂದಿದ್ದಾರೆ. ಇಲ್ಲಿವೆ ನೋಡಿ ಕೆಲ ಸುಂದರ ಚಿತ್ರಗಳು.
ಸಾಯಿ ಪಲ್ಲವಿ ಸಹೋದರಿ ಪೂಜಾ ಕೆಲ ತಿಂಗಳ ಹಿಂದಷ್ಟೆ ತಮ್ಮ ಬಾಯ್ಫ್ರೆಂಡ್ ಜೊತೆಗೆ ತಮ್ಮದೇ ಮನೆಯಲ್ಲಿ ಸರಳವಾಗಿ ವಿವಾಹವಾದರು. ಸಾಯಿ ಪಲ್ಲವಿ ಸಕ್ರಿಯವಾಗಿ ಮದುವೆಯಲ್ಲಿ ಭಾಗಿಯಾಗಿದ್ದರು.
1 / 7
ನಟಿಯಾಗುವ ಪ್ರಯತ್ನ ಮಾಡಿದ್ದ ಪೂಜಾ ಒಂದು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಯಶಸ್ವಿ ಆಗಲಿಲ್ಲ. ಈಗ ಪೂಜಾ ಮದುವೆಯಾಗಿ ಆರಾಮವಾಗಿದ್ದಾರೆ.
2 / 7
ಮದುವೆಯಾಗಿ ಮೂರು ತಿಂಗಳ ಬಳಿಕ ಸಾಯಿ ಪಲ್ಲವಿ, ತಂಗಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಉದ್ದನೆಯ ಪೋಸ್ಟ್ ಹಂಚಿಕೊಂಡಿದ್ದು, ತಂಗಿ ಖುಷಿಯಾಗಿದ್ದಾಳೆ ಎಂದಿದ್ದಾರೆ.
3 / 7
ಎಲ್ಲ ವಿಷಯದಲ್ಲಿಯೂ ನಾನು ತಂಗಿ ಪೂಜಾಗೆ ಸಲಹೆ ನೀಡುತ್ತಿದ್ದೆ. ಆದರೆ ಮದುವೆ ವಿಷಯದಲ್ಲಿ ನಾನು ಯಾವುದೇ ಸಲಹೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಹೆದರಿದ್ದೆ, ಆದರೆ ಆ ಹೆದರಿಕೆ ಈಗ ಹೊರಟು ಹೋಗಿದೆ ಎಂದಿದ್ದಾರೆ.
4 / 7
ಮದುವೆ ಆಗಿ ಮೂರು ತಿಂಗಳಾಗಿದ್ದು ಒಂದು ಬಾರಿಯೂ ಸಹ ನನ್ನ ತಂಗಿ ತಪ್ಪು ಮಾಡಿದಳು, ಅಥವಾ ನಾನು ಆಕೆಗೆ ಮಾರ್ಗದರ್ಶನ ಮಾಡಲಿಲ್ಲ ಎಂಬ ಅಳುಕೇ ನನಗೆ ಮೂಡಿಲ್ಲ ಎಂದಿದ್ದಾರೆ ಸಾಯಿ ಪಲ್ಲವಿ.
5 / 7
ಪೂಜಾ ಅವರ ಮದುವೆಯ ಹಲವು ಸುಂದರ ಚಿತ್ರಗಳನ್ನು ಸಾಯಿ ಪಲ್ಲವಿ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬದ ಹಿರಿಯರು, ಗೆಳೆಯರ ಚಿತ್ರಗಳ ಜೊತೆಗೆ ಮದುವೆಯ ವಿವಿಧ ಶಾಸ್ತ್ರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
6 / 7
ಸಾಯಿ ಪಲ್ಲವಿ ಸಹೋದರಿ ಪೂಜಾ ಇತ್ತೀಚೆಗಷ್ಟೆ ಆಸ್ಟ್ರೇಲಿಯಾನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಸಾಯಿ ಪಲ್ಲವಿಯೂ ಪೂಜಾ ಜೊತೆ ಹೋಗಿ ಪದವಿ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೂಜಾರ ಪತಿಯೂ ಕಾರ್ಯಕ್ರಮಕ್ಕೆ ಬಂದಿದ್ದರು.