ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಲ್ವರ ನಾಮನಿರ್ದೇಶನ; ಪಟ್ಟಿಯಲ್ಲಿ ಬುಮ್ರಾ ಹೆಸರಿಲ್ಲ..!

ICC T20i Cricketer Of The Year: ಐಸಿಸಿ ಟಿ20 ವರ್ಷದ ಕ್ರಿಕೆಟ್ ಪ್ರಶಸ್ತಿಗೆ 4 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಈ ಬಾರಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆಯಿಂದ ತಲಾ 1 ಆಟಗಾರರು ಈ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿದ್ದಾರೆ. ಆದಾಗ್ಯೂ, ಜಸ್ಪ್ರೀತ್ ಬುಮ್ರಾ ಬದಲಿಗೆ ಭಾರತದಿಂದ ಯುವ ಬೌಲರ್ ಅನ್ನು ನಾಮನಿರ್ದೇಶನ ಮಾಡಲಾಗಿದೆ.

ಪೃಥ್ವಿಶಂಕರ
|

Updated on:Dec 29, 2024 | 3:03 PM

ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ನಾಲ್ವರು ಆಟಗಾರರ ಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆಗೊಳಿಸಿದೆ. ಈ ನಾಲ್ವರು ಆಟಗಾರರಲ್ಲಿ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡದಿಂದ ತಲಾ ಒಬ್ಬೊಬ್ಬ ಆಟಗಾರರು ನಾಮನಿರ್ದೇಶನಗೊಂಡಿದ್ದಾರೆ. ಈ ಎಲ್ಲಾ ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಈ ವರ್ಷ ಸಾಕಷ್ಟು ಸುದ್ದಿ ಮಾಡಿದ್ದಾರೆ. ಆ ನಾಲ್ವರ ವಿವರ ಇಂತಿದೆ.

1 / 5
ಐಸಿಸಿ ವರ್ಷದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಹೆಸರೂ ಸೇರಿದೆ. ಅರ್ಷದೀಪ್ ಸಿಂಗ್ ಬಹಳ ಸಮಯದಿಂದ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲೂ ಅರ್ಷದೀಪ್ ಪ್ರದರ್ಶನ ಉತ್ತಮವಾಗಿತ್ತು. ಈ ವರ್ಷ ಅರ್ಷದೀಪ್ ಆಡಿರುವ 18 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟ 36 ವಿಕೆಟ್ ಪಡೆದಿದ್ದಾರೆ.

2 / 5
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್‌ ಕೂಡ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವರ್ಷ, ಹೆಡ್ ಆಡಿದ 15 ಟಿ20 ಪಂದ್ಯಗಳಲ್ಲಿ 539 ರನ್ ಕಲೆಹಾಕಿದ್ದಾರೆ. 178.47 ರ ಸ್ಟ್ರೈಕ್ ರೇಟ್​ನಲ್ಲಿ ರನ್ ಕಲೆಹಾಕಿರುವ ಹೆಡ್ ಅವರ ಅತ್ಯುತ್ತಮ ಇನ್ನಿಂಗ್ಸ್ 80 ರನ್ ಆಗಿದೆ.

3 / 5
ಜಿಂಬಾಬ್ವೆಯ ಸ್ಫೋಟಕ ಬ್ಯಾಟ್ಸ್‌ಮನ್ ಸಿಕಂದರ್ ರಜಾ ಅವರಿಗೂ ಕ್ಯಾಲೆಂಡರ್ ವರ್ಷ ಅದ್ಭುತವಾಗಿತ್ತು. ಈ ವರ್ಷ ರಾಝಾ ಆಡಿದ 24 ಪಂದ್ಯಗಳಲ್ಲಿ 573 ರನ್ ಕಲೆಹಾಕಿದ್ದಾರೆ. ಇದರಲ್ಲಿ ಔಟಾಗದೆ 133 ರನ್ ಗಳಿಸಿರುವುದು ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಇದಲ್ಲದೇ ಬೌಲಿಂಗ್​ನಲ್ಲೂ ಮ್ಯಾಜಿಕ್ ಮಾಡಿರುವ ರಾಝಾ 24 ವಿಕೆಟ್ ಕಬಳಿಸಿದ್ದಾರೆ.

4 / 5
ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಂ ಈ ವರ್ಷದಲ್ಲಿ ಆಡಿರುವ 24 ಅಂತಾರಾಷ್ಟ್ರೀಯ ಟಿ20  ಪಂದ್ಯಗಳಲ್ಲಿ ಒಟ್ಟು 738 ರನ್‌ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಬಾಬರ್ ಅವರ ಅತ್ಯುತ್ತಮ ಇನ್ನಿಂಗ್ಸ್ ಅಜೇಯ 75 ರನ್ ಆಗಿದೆ.

5 / 5

Published On - 3:02 pm, Sun, 29 December 24

Follow us