Banana Disadvantages: ಅತಿ ಹೆಚ್ಚು ಬಾಳೆಹಣ್ಣು ಸೇವಿಸುತ್ತಿದ್ದೀರಾ? ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ನಿಮ್ಮ ಗಮನ

| Updated By: preethi shettigar

Updated on: Mar 17, 2022 | 7:30 AM

ನೀವು ಹೆಚ್ಚಾಗಿ ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಇದರಿಂದ ಉಂಟಾಗುವ ಹಾನಿಯನ್ನು ತಿಳಿಯುವುದು ಕೂಡ ಮುಖ್ಯ.

1 / 5
ಮಲಬದ್ಧತೆ: ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣಿನ ಅತಿಯಾದ ಸೇವನೆಯು ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಜ್ಞರ ಪ್ರಕಾರ, ಇದರಿಂದಾಗಿ ಹೆಚ್ಚಿನ ಜನರು ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಆದ್ದರಿಂದ ಒಂದು ದಿನದಲ್ಲಿ ಒಂದು ಅಥವಾ ಎರಡು ಬಾಳೆಹಣ್ಣುಗಳನ್ನು ತಿನ್ನಬೇಕು.

2 / 5
ಸ್ಥೂಲಕಾಯತೆ: ಬಾಳೆಹಣ್ಣಿನ ಅತಿಯಾದ ಸೇವನೆಯಿಂದ ಸ್ಥೂಲಕಾಯಕ್ಕೆ ಬಲಿಯಾಗಬಹುದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ಇದರಲ್ಲಿರುವ ನೈಸರ್ಗಿಕ ಸಕ್ಕರೆ ನಮ್ಮನ್ನು ದಪ್ಪವಾಗಿಸುತ್ತದೆ. ಸಾಮಾನ್ಯವಾಗಿ ಜನರು ಬಾಳೆಹಣ್ಣು ಮತ್ತು ಹಾಲನ್ನು ಸೇವಿಸುತ್ತಾರೆ. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

3 / 5
ಅಸಿಡಿಟಿ: ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವಿಸುತ್ತಾರೆ. ಆದರೆ ಇದು ತಪ್ಪು. ಇದರಿಂದಾಗಿ ಗ್ಯಾಸ್ ಅಥವಾ ಅಸಿಡಿಟಿ ಸಮಸ್ಯೆ ಕಾಡಬಹುದು. ನೀವು ಬಾಳೆಹಣ್ಣು ತಿನ್ನಲು ಬಯಸಿದರೆ, ಅದಕ್ಕಾಗಿ ಮಧ್ಯಾಹ್ನದ ಸಮಯವನ್ನು ಆರಿಸಿಕೊಳ್ಳಿ.

4 / 5
ಹಲ್ಲಿನ ಸಮಸ್ಯೆಗಳು: ಬಾಳೆಹಣ್ಣನ್ನು ಅತಿಯಾಗಿ ಸೇವಿಸಿದರೆ ಅದು ಹಲ್ಲು ಹುಳುಕಿಗೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಬಾಳೆಗಹಣ್ಣು ಆರೋಗ್ಯಕರ ಎಂದು ಪೋಷಕರು ಯಾವುದೇ ಸಮಯದಲ್ಲಿ ಮಗುವಿಗೆ ತಿನ್ನಲು ಕೊಡುತ್ತಾರೆ ಅದು ಅವರ ಹಲ್ಲುಗಳಿಗೆ ಒಳ್ಳೆಯದಲ್ಲ ಎಚ್ಚರ.

5 / 5
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ: ಮಧುಮೇಹ ಸಮಸ್ಯೆ ಇರುವವರು ಬಾಳೆಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ಸೇವಿಸಿದರೆ, ಅದು ಅವರ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.