
practice these habbits to prevent the heart attack in winter

ವಿಟಮಿನ್ ಬಿ-1, ಪ್ರೋಟೀನ್, ತಾಮ್ರ, ಮ್ಯಾಂಗನೀಸ್, ಒಮೆಗಾ-3 ಆಮ್ಲ, ಲಿಗ್ನಾನ್ಸ್ ಸೇರಿದಂತೆ ಅನೇಕ ಸೂಕ್ಷ್ಮ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಫೈಬರ್ ಮತ್ತು ಒಮೆಗಾ-3 ಆಮ್ಲಗಳು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಮಲಗುವ ವೇಳೆಗೆ ಒಂದು ಟೀ ಚಮಚ ಅಗಸೆ ಬೀಜವನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ.

ಸಾಂದರ್ಭಿಕ ಚಿತ್ರ

ಅಗಸೆ ಬೀಜವು ಸಂಧಿವಾತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಸಂಧಿವಾತ ರೋಗಿಗಳು ಪ್ರತಿದಿನ ಅಗಸೆ ಬೀಜದ ಸೇವನೆಯಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಪ್ರತಿದಿನ ಹುರಿದ ಅಗಸೆ ಬೀಜವನ್ನು ತಿನ್ನಬಹುದು ಅಥವಾ ಅದನ್ನು ಪುಡಿಮಾಡಿ ಹಾಲಿನೊಂದಿಗೆ ಸೇವಿಸಬಹುದು. ಇದಲ್ಲದೇ ಅಗಸೆ ಬೀಜದ ಲಡ್ಡೂಗಳನ್ನು ಚಳಿಗಾಲದಲ್ಲಿ ತಿನ್ನಬಹುದು.

ಪ್ರಾತಿನಿಧಿಕ ಚಿತ್ರ