
ಝೈದ್ ಖಾನ್ ಅವರಿಗೆ ‘ಬನಾರಸ್’ ಮೊದಲ ಸಿನಿಮಾ. ಈ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಝೈದ್ ಖಾನ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಈ ವರ್ಷ ಝೈದ್ ಖಾನ್ ಅವರು ಗಣೇಶ ಚತುರ್ಥಿ ಆಚರಿಸಿದ್ದು ಕೂಡ ಸುದ್ದಿ ಆಗಿತ್ತು. ಈಗ ಅವರು ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಗಮನ ಸೆಳೆಯುತ್ತಿದ್ದಾರೆ.

ಮಹಾಲಯ ಅಮವಾಸ್ಯೆ ಪ್ರಯುಕ್ತ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಝೈದ್ ಖಾನ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದರಲ್ಲಿ ಝೈದ್ ಖಾನ್ ಭಾಗಿಯಾದರು.

ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಝೈದ್ ಖಾನ್ ಬಂದಾಗ ಅವರ ಜೊತೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡರು. ಭಕ್ತಿಪೂರ್ವಕ ವಾತಾವರಣದ ನಡುವೆಯೇ ಅಭಿಮಾನಿಗಳ ಜೊತೆ ಫೋಟೋಗೆ ಝೈದ್ ಖಾನ್ ಪೋಸ್ ನೀಡಿದರು.

‘ಬನಾರಸ್’ ಸಿನಿಮಾಗೆ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಝೈದ್ ಖಾನ್ ಅವರಿಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ‘ಮಾಯಗಂಗೆ..’ ಹಾಡು ಸೂಪರ್ ಹಿಟ್ ಆಗಿದೆ.
Published On - 7:52 pm, Sun, 25 September 22