ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಬಾಲಿವುಡ್ ನಟಿ ಪೂಜಾ ಭಟ್
ಭಾರತ್ ಜೋಡೊ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ವಾರ ಯಾತ್ರೆ ತೆಲಂಗಾಣ ತಲುಪಿದ್ದು ಅದಕ್ಕಿಂತ ಮೊದಲು ರಾಹುಲ್ ಗಾಂಧಿ ಅವರು ತಮಿಳುನಾಡು...
ಹೈದರಾಬಾದ್: ನಟಿ, ಸಿನಿಮಾ ನಿರ್ಮಾಪಕಿ ಪೂಜಾ ಭಟ್(Pooja Bhatt) ಬುಧವಾರ ರಾಹುಲ್ ಗಾಂಧಿ (Rahul Gandhi)ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ(Bharat Jodo Yatra) ಜತೆಗೆ ಹೆಜ್ಜೆ ಹಾಕಿದ್ದಾರೆ. ಭಾರತ್ ಜೋಡೊ ಯಾತ್ರೆಗೆ ಸೇರಿದ ಮೊದಲ ಬಾಲಿವುಡ್ ಸೆಲೆಬ್ರಿಟಿಯಾಗಿದ್ದಾರೆ ಪೂಜಾ ಭಟ್. ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡುತ್ತಾ ಪೂಜಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ಅವರನ್ನು ಕಂಡ ಕೂಡಲೇ ಜನರು ಹರ್ಷೋದ್ಗಾರ ಮಾಡಿದರು. ನಟ-ನಿರ್ದೇಶಕ-ನಿರ್ಮಾಪಕರಾಗಿರುವ ಪೂಜಾ, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಅವರು 1989 ರ ಚಲನಚಿತ್ರ “ಡ್ಯಾಡಿ” ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಹಿರಿಯ ಚಿತ್ರನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿ ಆಗಿರುವ ಪೂಜಾ”ದಿಲ್ ಹೈ ಕಿ ಮಾನ್ತಾ ನಹೀ”, “ಸಡಕ್”, “ಫಿರ್ ತೇರಿ ಕಹಾನಿ ಯಾದ್ ಆಯೀ”, ಸರ್ ಮತ್ತು “ಝಕ್ಮ್” ಮೊದಲಾದ ಸಿನಿಮಾಗಳಲ್ಲಿ ಮಿಂಚಿದ್ದರು. ತಮನ್ನಾ, ಸುರ್, ಪಾಪ್ ಮತ್ತು ಹಾಲೀಡೇ ಇವರು ನಿರ್ದೇಶಿಸಿದ ಚಿತ್ರಗಳು. ಹೈದರಾಬಾದ್ ಸಿಟಿಯ ಬಾಲನಗರ ಮುಖ್ಯ ರಸ್ತೆಯ ಎಂಜಿಬಿ ಬಜಾಜ್ ಶೋರೂಮ್‌ನಿಂದ ಯಾತ್ರೆ ಪುನರಾರಂಭವಾಯಿತು. ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು.
Noted Actress-filmmaker Pooja Bhatt joins the #BharatJodoYatra.
The Bharat Jodo Yatra resumed from Hyderabad city in Telangana this morning . pic.twitter.com/8Z01BgLDUf
— Congress, Minority Department (@INCMinority) November 2, 2022
ಭಾರತ್ ಜೋಡೊ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ವಾರ ಯಾತ್ರೆ ತೆಲಂಗಾಣ ತಲುಪಿದ್ದು ಅದಕ್ಕಿಂತ ಮೊದಲು ರಾಹುಲ್ ಗಾಂಧಿ ಅವರು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಭಾರತ್ ಜೋಡೊ ಯಾತ್ರೆ ಪೂರ್ಣಗೊಳಿಸಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಯಾತ್ರೆಯನ್ನು ಸಂಘಟಿಸಲು 10 ವಿಶೇಷ ಸಮಿತಿಗಳನ್ನು ರಚಿಸಿದೆ.
Published On - 5:08 pm, Wed, 2 November 22