ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್: ಕೇಂದ್ರ ಸಚಿವಗೆ ಮಂಡ್ಯ ಉಸ್ತುವಾರಿ

ದಳಪತಿಗಳ ಭದ್ರ ಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಕೇಂದ್ರ ಸಚಿವ ಗುರ್ಜರ್ ರನ್ನ ಮಂಡ್ಯದ ಉಸ್ತುವಾರಿ ನೀಡಲಾಗಿದ್ದು, ಭರ್ಜರಿ ಗ್ರೌಂಡ್ ವರ್ಕ್ ನಡೆಸುತ್ತಿದೆ. ಈ ಕುರಿತಾದ ಒಂದು ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್: ಕೇಂದ್ರ ಸಚಿವಗೆ ಮಂಡ್ಯ ಉಸ್ತುವಾರಿ
ಸಂಗ್ರಹ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 01, 2022 | 5:15 PM

ಮಂಡ್ಯ: ಹಳೆ ಮೈಸೂರಿನತ್ತ ಮೂರು ರಾಜಕೀಯ ಪಕ್ಷಗಳು ದೃಷ್ಠಿ ನೆಟ್ಟಿವೆ. ಅದರಲ್ಲೂ ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದ್ದು, ತನ್ನ ಪ್ರಾಬಲ್ಯ ಸಾಧಿಸಲು ಬೇಕಾದ ತಂತ್ರಗಳನ್ನು ಈಗಿನಿಂದಲೇ ಆರಂಭಿಸಿದೆ. ಮುಂಬರುವ ವಿಧಾನಸಭೆ ಚುನಾವಣೆ ಜೊತೆ 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಸದೃಢಗೊಳಿಸಬೇಕು ಎಂಬ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಸೂಚನೆಯನ್ನು ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ.

ಹೌದು… ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಶತಾಯ ಗತಾಯ ಕಮಲವನ್ನ ಅರಳಿಸಲೇ ಬೇಕೆಂದು ಬಿಜೆಪಿ ಹೈ ಕಮಾಂಡ್ ತೀರ್ಮಾನಿಸಿದೆ. ಈ ಹಿನ್ನಲೆ ಈಗಿನಿಂದಲೇ ಬೂತ್ ಮಟ್ಟದಲ್ಲಿ ಗ್ರೌಂಡ್ ವರ್ಕ್ ಮಾಡಲು ಬಿಜೆಪಿ ಸಿದ್ದತೆಯನ್ನ ನಡೆಸಿದೆ. ಮುಂಬರುವ ವಿಧಾನಸಭೆ ಚುನಾವಣೆ 2024ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್​ ಆಗಿದ್ದು, ಸೆಮಿಸ್​ನಲ್ಲಿ ಜಯಯಿಸಿದರೆ ಫೈನಲ್ ಸರಳವಾಗುತ್ತಿದೆ ಎಂದು ಬಿಜೆಪಿ ಅಣಿಯಾಗುತ್ತಿದೆ. ಇದಕ್ಕೆ ಕೇಂದ್ರ ಸಚಿವ ಕ್ರಿಷನ್ ಪಾಲ್ ಗುರ್ಜರ್ ಗೆ ಮಂಡ್ಯ ಜಿಲ್ಲೆಯ ಹೊಣೆಯನ್ನ ನೀಡಲಾಗಿದೆ. ಬಿಜೆಪಿ ಮಂಡ್ಯ ಜಿಲ್ಲಾದ್ಯಕ್ಷ ಉಮೇಶ್ ಅವರ ಮೇಲೆ ಪಕ್ಷ ಸಂಘಟನೆಯ ಹೊಣೆಯನ್ನ ಹೊರಿಸಲಾಗಿದೆ.

ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಕೆ ಸಿದ್ಧರಾದ ಜನಾರ್ದನ ರೆಡ್ಡಿ: ರೆಡ್ಡಿಗಾರು ಮುಂದೆ 2 ಕ್ಷೇತ್ರಗಳು..!

ಮಂಡ್ಯದಲ್ಲಿ ಮಹಿಳಾ ಮತದಾರರೇ ಹೆಚ್ಚು ಇರುವುದರಿಂದ ಮಹಿಳೆಯರ ಮತದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ಹಿನ್ನಲೆ ಮೂರು ದಿನಗಳ ಕಾಲ ಮದ್ದೂರು ಪ್ರವಾಸ ಕೈ ಗೊಂಡಿದ್ದ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಇಂಧನ ಖಾತೆಯ ರಾಜ್ಯ ಸಚಿವ ಮಹಿಳಾ ಪಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರದಲ್ಲಿ ಭಾಗಿಯಾದ್ರು. ಜೊತೆಗೆ ಮಂಡ್ಯ ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರದ ಪ್ರಮುಖ ನಾಯಕರು ಮಂಡ್ಯ ಜಿಲ್ಲಾ ಅಧ್ಯಕ್ಷ ಉಮೇಶ್ ಜೊತೆ ಮುಂದಿನ ರೂಪರೇಷಗಳ ಕುರಿತು ಚರ್ಚಿಸಿ ಹೊಸ ಟಾಸ್ಕ್ ವೊಂದನ್ನ ನೀಡಲಾಗಿದೆ. ತಳ ಮಟ್ಟದಲ್ಲಿ ಬಿಜೆಪಿಯನ್ನ ಸಂಘಟನೆ ನಡೆಸುವುದಕ್ಕೆ ಸೂಚಿಸಲಾಗಿದೆ.

ಬೇರೆ ಪಕ್ಷಗಳ ನಾಯಕರಿಗೆ ಗಾಳ ಹೇಗಾದರೂ ಮಾಡಿ ಈ ಭಾಗದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಬೇಕೆನ್ನುವ ಬಯಕೆಯನ್ನಿಟ್ಟುಕೊಂಡೇ ಇಲ್ಲಿಯತನಕ ಬಂದಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದರೂ ಪ್ರಭಾವಿ ಸಮುದಾಯದ ಅಥವಾ ಪ್ರಭಾವಿ ನಾಯಕರನ್ನು ಹುಟ್ಟು ಹಾಕವುದು ಬಿಜೆಪಿಗೆ ಕಷ್ಟಕರವಾಗಿದೆ. ಈಗಾಗಲೇ ಕೆಲವೊಂದಿಷ್ಟು ನಾಯಕರಿದ್ದರೂ ತಮ್ಮೊಂದಿಗೆ ಇತರೆ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಷ್ಟರ ಮಟ್ಟಿಗೆ ಏನು ಇಲ್ಲ. ಈ ಹಿನ್ನೆಲೆಯಲ್ಲಿ ಇತರೆ ಅಂದ್ರೆ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಸ್ಥಳೀಯ ಪ್ರಭಾವಿ ನಾಯಕರ ಮೊರೆ ಹೋಗಿದ್ದು, ಅವರನ್ನು ಬಿಜೆಒಇ ಕರೆತರುವ ಕಸರತ್ತು ನಡೆಸಿದೆ.

ಸದ್ಯ ಮುಂಬರುವ ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಬಿಜೆಪಿ ಹೈ ಕಮಾಂಡ್.. ದಳಪತಿಗಳ ಭದ್ರ ಕೋಟೆಯಲ್ಲಿ ಕಮಲ ಅರಳಿಸಿಯೇ ತೀರೊದಕ್ಕೆ ಪಣ ತೊಟ್ಟಿದ್ದು, ಈಗಿನಿಂದಲೇ ಗ್ರೌಂಡ್ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಯಾವ ರೀತಿ ವರ್ಕೌಟ್ ಆಗುತ್ತೋ ಎನ್ನುವುದನ್ನು ಕಾದು ನೋಡ್ಬೇಕಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Tue, 1 November 22