Sign In

By signing in or creating an account, you agree with Associated Broadcasting Company's Terms & Conditions and Privacy Policy.

AICC President Poll: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಸ್ಪರ್ಧೆ, ಸ್ಪರ್ಧೆಯಿಂದ ಹೊರಗುಳಿದ ದಿಗ್ವಿಜಯ ಸಿಂಗ್

ಖರ್ಗೆ ಅವರು ಪಕ್ಷದ ಹೈಕಮಾಂಡ್ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ತನ್ನ ನಿಮಯದಲ್ಲಿ ಈ ಮೊದಲು ಮಾಡಿರುವಂತೆ ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ನಿಯಮದ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ

AICC President Poll: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಸ್ಪರ್ಧೆ, ಸ್ಪರ್ಧೆಯಿಂದ ಹೊರಗುಳಿದ ದಿಗ್ವಿಜಯ ಸಿಂಗ್
Kharge and Digvijaya Singh
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 30, 2022 | 11:10 AM

ದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಹೈಕಮಾಂಡ್ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ತನ್ನ ನಿಮಯದಲ್ಲಿ ಈ ಮೊದಲು ಮಾಡಿರುವಂತೆ ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ನಿಯಮದ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್​ನಲ್ಲಿ ನಡೆದ ಇತ್ತೀಚಿನ ಬೆಳವಣಿಗಳು 

  1. ಅಕ್ಟೋಬರ್ 17ರಂದು ನಡೆಯಲಿರುವ ಚುನಾವಣೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಖರ್ಗೆ ಅವರು ಶಶಿ ತರೂರ್ ಅವರೊಂದಿಗೆ ಎರಡನೇ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ನಾಮಪತ್ರ ಸಲ್ಲಿಸಿದ ದಿಗ್ವಿಜಯ ಸಿಂಗ್ ಅವರು ಇಂದು ಬೆಳಗ್ಗೆ ಖರ್ಗೆ ಅವರ ನಿವಾಸದಲ್ಲಿ ಭೇಟಿಯಾದ ನಂತರ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
  2. ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ತರೂರ್ ಕೂಡ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ. ಅರ್ಜಿ ಸಲ್ಲಿಕೆಗೆ ಮಧ್ಯಾಹ್ನ 3 ಗಂಟೆ ಕಾಲಾವಕಾಶ ಇದೆ.
  3. ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಅವರು ನಿನ್ನೆ ರಾತ್ರಿ ಖರ್ಗೆಯವರಿಗೆ ಈ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಥಿಸುವಂತೆ ಎಂದು ಸೋನಿಯಾ ಗಾಂಧಿ ಅವರು ಹೇಳಿದ್ದಾರೆ. ಇದು ಹೈಕಮಾಂಡ್ ನಿರ್ಧಾರವನ್ನು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
  4. ಈ ವರ್ಷದ ಆರಂಭದಲ್ಲಿ ಪಕ್ಷವು ನಿರ್ಧರಿಸಿದ ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮದ ಪ್ರಕಾರ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
  5. ನಿನ್ನೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ರೇಸ್‌ನಿಂದ ಹೊರಗುಳಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಅದೇ ನಿಯಮ ಅನ್ವಯಿಸುತ್ತದೆ. ತಮ್ಮ ಶಾಸಕರಿಗೆ ಸಾರ್ವಜನಿಕ ಬಂಡಾಯಕ್ಕೆ ನೈತಿಕ ಹೊಣೆ ಹೊತ್ತು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
  6. ಪಕ್ಷದಲ್ಲಿನ ಸಾಂಸ್ಥಿಕ ಬದಲಾವಣೆಗಳ ಕುರಿತು 2020 ರಲ್ಲಿ ಸೋನಿಯಾ ಗಾಂಧಿ ಅವರಿಗೆ ಸ್ಫೋಟಕ ಪತ್ರವನ್ನು ಬರೆದಿದ್ದರು , “G-23” ಭಿನ್ನಮತೀಯರ ಗುಂಪಿನ ಪ್ರಮುಖ ಸದಸ್ಯ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಖರ್ಗೆ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
  7. ಕಾಂಗ್ರೆಸ್ ನಾಯಕರ ಒಂದು ವಿಭಾಗವು ಕಿರಿಯ ನಾಯಕನನ್ನು ಚುನಾವಣೆಯಲ್ಲಿ ಭಾಗವಹಿಸುವಂತೆ ಹೇಳಿತ್ತು. ನಿನ್ನೆ ರಾತ್ರಿಯವರೆಗೂ ಇನ್ನೊಬ್ಬ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರನ್ನು ಸ್ಪರ್ಧೆಗೆ ಹೆಸರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. “ಜಿ-23” ನಾಯಕರಲ್ಲಿ ಒಬ್ಬರಾದ ಮುಕುಲ್ ವಾಸ್ನಿಕ್ ಕೂಡ ಈ ಚುನಾವಣೆಯಲ್ಲಿ ಭಾಗವಾಗಬಹುದು ಎಂದು ಅವರು ಸೂಚಿಸಿದ್ದಾರೆ.
  8. 2020ರಲ್ಲಿ ತನ್ನ ವಿರುದ್ಧ ಬಂಡಾಯವೆದ್ದಿದ್ದ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿಯಾಗಿ ಸ್ವೀಕರಿಸುವುದಿಲ್ಲ ಎಂದು ಹೇಳಿದ ಗೆಹ್ಲೋಟ್‌ ಬಣದ ಶಾಸಕರು ಇದರಿಂದ ಬೇಸರಗೊಂಡ ಕಾಂಗ್ರೆಸ್ ಹೈಕಮಾಂಡ್ ಗೆಹ್ಲೋಟ್ಅ ವರಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ಇದೀಗ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಮುಂದಾಗಿದ್ದಾರೆ.
  9. ಈಗಾಗಲೇ ಅಶಿಸ್ತಿನ ಆರೋಪ ಹೊತ್ತಿರುವ ರಾಜಸ್ಥಾನದ ಗೆಹ್ಲೋಟ್ ಅವರ ನಿಷ್ಠಾವಂತರಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಪಕ್ಷದ ಆಂತರಿಕ ವಿಷಯಗಳು ಮತ್ತು ಇತರ ನಾಯಕರ ವಿರುದ್ಧ ಹೇಳಿಕೆಗಳಿಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೇಣುಗೋಪಾಲ್ ಹೇಳಿದರು
  10. 20 ವರ್ಷಗಳ ನಂತರ ಇದು ಮೊದಲ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಾಗಿದೆ. ಇತರ ಹಿರಿಯ ನಾಯಕರಿಗೆ ಪಕ್ಷದ ಮುಖ್ಯಸ್ಥರಾಗಲು ಅವಕಾಶ ಮಾಡಿಕೊಡಲು ಗಾಂಧಿ ಕುಟುಂಬ ಸದಸ್ಯರು ಸ್ಪರ್ಧಿಸಲು ನಿರಾಕರಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 am, Fri, 30 September 22

ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ನಡೆದ ಹಲ್ಲೆಯಿಂದ ಅಹಿತಕರ ಘಟನೆಗಳ ಸೃಷ್ಟಿ
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ನಡೆದ ಹಲ್ಲೆಯಿಂದ ಅಹಿತಕರ ಘಟನೆಗಳ ಸೃಷ್ಟಿ
ಡಿಕೆ ಶಿವಕುಮಾರ್ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ: ಈಶ್ವರಪ್ಪ
ಡಿಕೆ ಶಿವಕುಮಾರ್ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ: ಈಶ್ವರಪ್ಪ
ಹಿಮಪಾತದಿಂದ ಮುಚ್ಚಿಹೋದ ಉತ್ತರಾಖಂಡದ ಚಮೋಲಿ
ಹಿಮಪಾತದಿಂದ ಮುಚ್ಚಿಹೋದ ಉತ್ತರಾಖಂಡದ ಚಮೋಲಿ
ಅಭ್ಯಾಸದಲ್ಲಿ ಸಿಕ್ಸರ್​ಗಳ ಮಳೆಗರೆದ ಧೋನಿ
ಅಭ್ಯಾಸದಲ್ಲಿ ಸಿಕ್ಸರ್​ಗಳ ಮಳೆಗರೆದ ಧೋನಿ
ಹಣ್ಣನ್ನು ಲ್ಯಾಬ್​ಗೆ ಕಳಿಸುವುದಾದರೆ ಪುಗ್ಸಟ್ಟೆ ತೆಗೆದುಕೊಳ್ಳೋದು ಬೇಡ!
ಹಣ್ಣನ್ನು ಲ್ಯಾಬ್​ಗೆ ಕಳಿಸುವುದಾದರೆ ಪುಗ್ಸಟ್ಟೆ ತೆಗೆದುಕೊಳ್ಳೋದು ಬೇಡ!
ಬೆಂಗಳೂರು ದೇಶದ ಅತ್ಯಂತ ಸುಂದರ ನಗರಗಳಲ್ಲಿ ಒಂದು: ಮೋಹನದಾಸ್ ಪೈ
ಬೆಂಗಳೂರು ದೇಶದ ಅತ್ಯಂತ ಸುಂದರ ನಗರಗಳಲ್ಲಿ ಒಂದು: ಮೋಹನದಾಸ್ ಪೈ
ಭಕ್ತರ ಒತ್ತಾಯಕ್ಕೆ ಉಯ್ಯಾಲೆಯಲ್ಲಿ ಕೂತು ಸಂತಸಪಟ್ಟ ಪೇಜಾವರ ಶ್ರೀಗಳು
ಭಕ್ತರ ಒತ್ತಾಯಕ್ಕೆ ಉಯ್ಯಾಲೆಯಲ್ಲಿ ಕೂತು ಸಂತಸಪಟ್ಟ ಪೇಜಾವರ ಶ್ರೀಗಳು
ಕಾರ್ಮಿಕರ ಜತೆ ನೆಲದಲ್ಲಿ ಕುಳಿತ ರೈಲ್ವೆ ಸಚಿವ ಅಶ್ವಿನಿ
ಕಾರ್ಮಿಕರ ಜತೆ ನೆಲದಲ್ಲಿ ಕುಳಿತ ರೈಲ್ವೆ ಸಚಿವ ಅಶ್ವಿನಿ
ರಾಜಕೀಯದಲ್ಲಿ ನಂಬಿಕೆ ಬಹಳ ಮುಖ್ಯ, ಅದನ್ನು ಕಳೆದುಕೊಳ್ಳಬಾರದು: ಸುರೇಶ್
ರಾಜಕೀಯದಲ್ಲಿ ನಂಬಿಕೆ ಬಹಳ ಮುಖ್ಯ, ಅದನ್ನು ಕಳೆದುಕೊಳ್ಳಬಾರದು: ಸುರೇಶ್
ಹುಲಿ ಕಾರ್ತಿಕ್ ಈಗ ಬನ್ನೂರು ಕುರಿ; ರಚಿತಾ ಎದುರು ಬಯಲಾಯ್ತು ಅಸಲಿ ವಿಚಾರ
ಹುಲಿ ಕಾರ್ತಿಕ್ ಈಗ ಬನ್ನೂರು ಕುರಿ; ರಚಿತಾ ಎದುರು ಬಯಲಾಯ್ತು ಅಸಲಿ ವಿಚಾರ