ರಾಷ್ಟ್ರಪತಿ ಹುದ್ದೆಗಾಗಿ ಕಣದಲ್ಲಿರುವ ಎನ್ಡಿಎ (NDA) ಅಭ್ಯರ್ಥಿ ದ್ರೌಪದಿ ಮುರ್ಮು (Droupadi Murmu) ಅವರು ದೇಶದ ಕೆಟ್ಟ ತತ್ವಶಾಸ್ತ್ರವನ್ನು ಪ್ರತಿನಿಧಿಕರಿಸುತ್ತಾರೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್(Ajoy Kumar), ಮುರ್ಮು ಅವರು ಒಳ್ಳೆಯ ಮಹಿಳೆ ಎಂದು ಬುಧವಾರ ಹೇಳಿದ್ದಾರೆ. ಎನ್ಡಿಎ ನಿಲುವಿನಲ್ಲಿ ಸಮಸ್ಯೆ ಇದೆ. ನಾನು ಅದರ ಬಗ್ಗೆ ಹೇಳಿದ್ದೇವೆ ಎಂದು ಜಾರ್ಖಂಡ್ನ ಮಾಜಿ ಲೋಕಸಭಾ ಸಂಸದ ಅಜೋಯ್ ಕುಮಾರ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ದ್ರೌಪದಿ ಮುರ್ಮು ಬಗ್ಗೆ ತಾನು ನೀಡಿರುವ ಹೇಳಿಕೆಯ ತಿರುಚಿದ ವಿಡಿಯೊವನ್ನು ಅಮಿತ್ ಮಾಳವೀಯ ಹಂಚಿಕೊಂಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ತಿರುಚಿದ ವಿಡಿಯೊ ಶೇರ್ ಮಾಡಿದ್ದಾರೆ. ಒಂದು ನಿಮಿಷದ ವಿಡಿಯೊವನ್ನು 17 ಸೆಕೆಂಡ್ ಗೆ ಇಳಿಸಿ ತಿರುಚಲಾಗಿದೆ. ಇದನ್ನು ನಾವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮುರ್ಮು ಅವರು ಭಾರತದ ದುಷ್ಟ ತತ್ವಶಾಸ್ತ್ರವನ್ನು ಪ್ರತಿನಿಧಿಕರಿಸುತ್ತಿದ್ದಾರೆ ಎಂದು ಕುಮಾರ್ ಹೇಳಿದ್ದರು. ಅವರು ಹೀಗೆ ಹೇಳಿರುವ 57 ಸೆಕಂಡ್ ಅವಧಿಯ ವಿಡಿಯೊವನ್ನು ಎಎನ್ಐ ಶೇರ್ ಮಾಡಿತ್ತು.
ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಮುರ್ಮು ಮತ್ತು ಯಶವಂತ ಸಿನ್ಹಾ ಇಬ್ಬರೂ ಒಳ್ಳೆಯವರೇ. ಆದರೆ ಮುರ್ಮು ಪ್ರತಿನಿಧೀಕರಿಸುತ್ತಿರುವುದರ ಬಗ್ಗೆ ಎಚ್ಚರಿಕೆ ಬೇಕು. ದ್ರೌಪದಿ ಮುರ್ಮು ಅವರನ್ನು ನಾವು ಆದಿವಾಸಿಗಳ ಗುರುತಾಗಿ ಮಾಡಬಾರದು. ನಮ್ಮಲ್ಲಿ ರಾಮನಾಥ ಕೋವಿಂದ್ (ಹಾಲಿ ರಾಷ್ಟ್ರಪತಿ) ಇದಾರೆ. ಕೋವಿಂದ್ ರಾಷ್ಟ್ರಪತಿ ಆಗಿರುವಾಗಲೇ ದಲಿತ ಮಹಿಳೆಯ ಮೇಲೆ ಹಾಥರಸ್ ನಲ್ಲಿ ಅತ್ಯಾಚಾರ ನಡೆಯಿತು. ಅವರೇನಾದರೂ ಪ್ರತಿಕ್ರಿಯಿಸಿದ್ದಾರೆಯೇ?
यह शर्म की बात है कि बीजेपी आईटी सेल मुझे बदनाम करने के लिए एक मनगढ़ंत वीडियो फैला रहा है। मुझे परवाह नहीं है कि ये ट्रोलर्स क्या बोलते हैं या क्या फैलाते हैं, मैं चाहता हूँ कि बीजेपी हमारे दलित भाइयों और बहनों को जवाब दे कि उन्होंने दलित लोगों के लिए क्या किया है। pic.twitter.com/7cAfvs7jZw
— Dr. Ajoy Kumar (@drajoykumar) July 13, 2022
ಗುರುತೊಂದನ್ನು ರಚಿಸಿ ಭಾರತದ ಜನರನ್ನು ಮೋಸ ಮಾಡುವುದು ಮೋದಿ ಸರ್ಕಾರ ಮಾಡುತ್ತಾ ಬಂದಿರುವ ಕೆಲಸ. ಇದು ದೇಶದ ಆತ್ಮಕ್ಕಾಗಿರುವ ಹೋರಾಟ. ಹಾಗಾಗಿ ಸಮಾನ ಮನಸ್ಕ ಪಕ್ಷಗಳು ಯಶವಂತ್ ಸಿನ್ಹಾ ಅವರಿಗೆ ಮತ ನೀಡಬೇಕು ಎಂದಿದ್ದಾರೆ ಕುಮಾರ್. ಕುಮಾರ್ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.