ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕೈ ಬಿಡುವಂತೆ ಬೊಮ್ಮಾಯಿಗೆ ಬಾಲಚಂದ್ರ ಜಾರಕಿಹೊಳಿ ಮನವಿ‌

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಕೆ ಪಕ್ಷದ ಮುಖಂಡರು ಕೂಡ ಕಾರಣ ಅಂತ ಸ್ವಪಕ್ಷೀಯರೇ ಆರೋಪಿಸುತ್ತಿದ್ದು, ಇಂತಹವರನ್ನು ಪಕ್ಷದಿಂದ ಕೈ ಬಿಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕೈ ಬಿಡುವಂತೆ ಬೊಮ್ಮಾಯಿಗೆ ಬಾಲಚಂದ್ರ ಜಾರಕಿಹೊಳಿ ಮನವಿ‌
ಬಾಲಚಂದ್ರ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ
Follow us
Rakesh Nayak Manchi
|

Updated on: Jun 25, 2023 | 3:13 PM

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಸೋಲಿಕೆ ಪಕ್ಷದ ಕೆಲವು ಮುಖಂಡರು ಕೂಡ ಕಾರಣ ಅಂತ ಸ್ವಪಕ್ಷೀಯರೇ ಆರೋಪಿಸುತ್ತಿದ್ದು, ಆತ್ಮಾವಲಕೋನ ಸಭೆಗಳಲ್ಲಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದೂ ಇದೆ. ಈ ನಡವೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಕೈಬಿಟ್ಟು ಲೋಕಸಭೆ ಚುನಾಚಣೆ ಮಾಡೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಮನವಿ ಮಾಡಿದ್ದಾರೆ.

ಬೆಳಗಾವಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತಿದ್ದಕ್ಕೆ ಶಾಸಕರು ಸೇರಿ ಎಲ್ಲರೂ ಅಧೈರ್ಯರಾಗಿದ್ದರು. ಕಾಂಗ್ರೆಸ್ ನಮಗಿಂತ ಕೇವಲ 12 ಲಕ್ಷ ವೋಟ್​ ಹೆಚ್ಚು ಪಡೆದು ಅಧಿಕಾರಕ್ಕೆ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಆ ವೋಟ್ ನಮ್ಮ ಕಡೆ ತಿರಿಗಿಸಿಕೊಳ್ಳಬಹುದು. ನಮ್ಮ ಜೊತಗೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರಿದ್ದಾರೆ ಎಂದರು.

ಇದನ್ನೂ ಓದಿ: ಅಧಿಕಾರಕ್ಕಾಗಿ ಗ್ಯಾರಂಟಿ ಘೋಷಿಸಿ ಈಗ ಪ್ರಧಾನಿ ಮೋದಿ ಕಡೆ ಬೊಟ್ಟು ತೋರಿಸುತ್ತೀರಾ?: ಸಿದ್ದರಾಮಯ್ಯಗೆ ಯಡಿಯೂರಪ್ಪ ಪ್ರಶ್ನೆ

ಕೆಲವರು ಬಿಜೆಪಿಯಲ್ಲಿದ್ದುಕೊಂಡು ಬಲಿಷ್ಠರಾಗಿ ನಂತರ ನಮ್ಮವರನ್ನೇ ಸೋಲಿಸಿದ್ದಾರೆ. ರಾಮದುರ್ಗ, ಕಿತ್ತೂರಿನಲ್ಲಿ ಈ ರೀತಿ ನಮ್ಮವರನ್ನು ಸೋಲಿಸಿದ್ದಾರೆ. ಟಿಕೆಟ್ ಫೈನಲ್ ಆದ ಮೇಲೆ ಕೆಲವರು ವಿರೋಧ ಮಾಡುವ ಕೆಲಸ ಮಾಡಿದರು. ಕಾರ್ಯಕರ್ತರಿಗೆ ಈ ವಿಚಾರದಲ್ಲಿ ಬಹಳ ನೋವಾಗಿದೆ. ಒಂದು ಸೀಟ್ ಗೆಲ್ಲಿಸದವರನ್ನ ಕೋರ್ ಕಮಿಟಿಯಲ್ಲಿ ಇಟ್ಟುಕೊಳ್ಳಬೇಡಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಕೈ ಬಿಟ್ಟು ಲೋಕಸಭೆ ಚುನಾವಣೆ ಮಾಡೋಣ ಎಂದರು.

ಮುನಿರಾಜು ಹೇಳಿಕೆಗೆ ಕಾರ್ಯಕರ್ತರ ಆಕ್ರೋಶ, ಗದರಿದ ಯಡಿಯೂರಪ್ಪ

ಬೆಂಗಳೂರು: ನಗರದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಮುನಿರಾಜು ನೀಡಿದ ಹೇಳಿಕೆಗೆ ಕಾರ್ಯಕರ್ತರು ಗದ್ದಲ ನಡೆಸಿದ್ದಾರೆ. ಪಕ್ಷಕ್ಕೆ ಚೂರಿ ಹಾಕಿರುವರವನ್ನು ಹೊರ ಹಾಕಬೇಕು ಎಂದು ಮುನಿರಾಜು ಹೇಳುತ್ತಿದ್ದಂತೆ ರೊಚ್ಚಿಗೆದ್ದ ಕಾರ್ಯಕರ್ತರು, ನೀವು ಮಾಡಿದರೆ ನಡೆಯುತ್ತಾ ಎಂದಿದ್ದಾರೆ. ಈ ವೇಳೆ ಎದ್ದು ನಿಂತು ಮೈಕ್ ಕೈಗೆತ್ತಿಕೊಂಡು ಗದರಿದ ಮಾಜಿ ಸಿಎಂ ಯಡಿಯೂರಪ್ಪ, ನೀವು ಸುಮ್ಮನೆ ಇರದಿದ್ದರೆ ನಾನು ಹೋಗುತ್ತೇನೆ. ನಿಮ್ಮ ಅನಿಸಿಕೆ ಇದ್ದರೆ ಬಂದು ಹೇಳಿ ನಾನು ಇಲ್ಲೆ ಇರುತ್ತೇನೆ. ಇದು ಬಿಜೆಪಿ ಸಭೆ. ನಾಳೆ ಮಾಧ್ಯಮದಲ್ಲಿ ಇದೆ ಸುದ್ದಿ ಬರುತ್ತದೆ‌. ಮನವಿ ಮಾಡುತ್ತೇನೆ ಸುಮ್ಮನೆ ಇರಿ ಎಂದರು. ನಾಯಕನ ಮನವಿಗೆ ಕಾರ್ಯಕರ್ತರು ಸುಮ್ಮನಾದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ