ಯಾರು ಸಚಿವರಾಗುತ್ತಾರೆ, ಯಾರು ಡಿಸಿಎಂ ಆಗುತ್ತಾರೆ ಎಂದು ನಾಳೆ ಗೊತ್ತಾಗುತ್ತೆ; ವರಿಷ್ಠರ ತೀರ್ಮಾನ ಅಂತಿಮ: ಬಸವರಾಜ ಬೊಮ್ಮಾಯಿ

ಯಾರು ಸಚಿವರಾಗುತ್ತಾರೆ, ಯಾರು ಡಿಸಿಎಂ ಆಗುತ್ತಾರೆ ಎಂದು ನಾಳೆ ಗೊತ್ತಾಗುತ್ತೆ; ವರಿಷ್ಠರ ತೀರ್ಮಾನ ಅಂತಿಮ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

Basavaraj Bommai Cabinet: ಸಂಪುಟ ರಚನೆ ಬಗ್ಗೆ ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜತೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ನಡ್ಡಾ ಭೇಟಿಯಾಗಿದ್ದಾರೆ.

TV9kannada Web Team

| Edited By: ganapathi bhat

Aug 02, 2021 | 11:09 PM

ದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಸಂಪೂರ್ಣವಾಗಿ ಚರ್ಚೆ ನಡೆಸಿದ್ದೇವೆ. ಬಿಜೆಪಿ ಅಧ್ಯಕ್ಷರು ಕೆಲವೊಂದು ಸಲಹೆ ನೀಡಿದ್ದಾರೆ. ಹೈಕಮಾಂಡ್‌ ಒಳ್ಳೆಯ ತೀರ್ಮಾನ ಮಾಡುವ ವಿಶ್ವಾಸವಿದೆ. ನಾಳೆ (ಆಗಸ್ಟ್ 3) ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 2) ದೆಹಲಿ ಜೆಪಿ ನಡ್ಡಾ ನಿವಾಸದ ಬಳಿ ಹೇಳಿಕೆ ನೀಡಿದ್ದಾರೆ. ಯಾರು, ಎಷ್ಟು ಜನ ಸಚಿವರಾಗುತ್ತಾರೆಂದು ನಾಳೆ ಗೊತ್ತಾಗುತ್ತೆ. ಡಿಸಿಎಂ ಸ್ಥಾನಗಳ ಬಗ್ಗೆಯೂ ನಾಳೆಯೇ ಅಂತಿಮವಾಗುತ್ತೆ. 2-3 ಪಟ್ಟಿ ಕೊಟ್ಟಿದ್ದೇವೆ, ವರಿಷ್ಠರಿಂದ ಅಂತಿಮ ತೀರ್ಮಾನ ಎಂದು ನಡ್ಡಾ ಭೇಟಿ ನಂತರ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ಧಾರೆ.

ನಾಳೆ ಸಂಸತ್ ಅಧಿವೇಶನ ಬಳಿಕ ವರಿಷ್ಠರು ಸಭೆ ಸೇರುತ್ತಾರೆ. ಸಭೆ ನಡೆಸಿ ವರಿಷ್ಠರು ಸಚಿವರ ಪಟ್ಟಿ ಫೈನಲ್ ಮಾಡುತ್ತಾರೆ. ಬಳಿಕ ನಾಳೆ ಸಂಜೆ ವರಿಷ್ಠರು ಸಚಿವರ ಪಟ್ಟಿ ಪ್ರಕಟಿಸ್ತಾರೆ. ನಂತರ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಸುತ್ತೇವೆ. ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಪ್ರಮಾಣವಚನ ಸಮಯ ನಿಗದಿಪಡಿಸುತ್ತೇವೆ. ಸಚಿವರ ಪ್ರಮಾಣವಚನ ದಿನಾಂಕ, ಸಮಯ ಪ್ರಕಟಿಸುತ್ತೇವೆ. ಎಲ್ಲಾ ಪ್ರಶ್ನೆಗಳಿಗೂ ನಾಳೆ ಸಂಜೆ ಬಳಿಕ ಉತ್ತರ ಸಿಗುತ್ತೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜೆ.ಪಿ.ನಡ್ಡಾ ಜತೆ ಸಂಪೂರ್ಣವಾಗಿ ಚರ್ಚೆ ನಡೆಸಿದ್ದೇವೆ. ಹೈಕಮಾಂಡ್‌ ಒಳ್ಳೆಯ ತೀರ್ಮಾನ ಮಾಡುವ ವಿಶ್ವಾಸವಿದೆ ಎಂದು ದೆಹಲಿಯ ನಡ್ಡಾ ನಿವಾಸದ ಬಳಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ದೆಹಲಿಯ ಮೋತಿಲಾಲ್​ ನೆಹರು ಮಾರ್ಗ್​ನಲ್ಲಿರುವ ಜೆ.ಪಿ.ನಡ್ಡಾ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಂಪುಟ ರಚನೆ ಬಗ್ಗೆ ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜತೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ನಡ್ಡಾ ಭೇಟಿಯಾಗಿದ್ದಾರೆ.

ನಮ್ಮ ಪೊಲೀಸರು ಬಹಳ ತಾಳ್ಮೆಯಿಂದ ವರ್ತಿಸಿದ್ದಾರೆ ಜೆ.ಸಿ.ನಗರ ಠಾಣೆ ಬಳಿ ಆಫ್ರಿಕಾ ಪ್ರಜೆಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಡ್ರಗ್ಸ್​ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದೊಡ್ಡಮಟ್ಟದಲ್ಲಿ ಪೊಲೀಸರು ಡ್ರಗ್ಸ್​ ಜಪ್ತಿ ಮಾಡಿದ್ದರು. ಡ್ರಗ್ಸ್​ ಧಂದೆ ಪ್ರಕರಣದಲ್ಲಿ ಆಫ್ರಿಕಾ ಪ್ರಜೆ ಬಂಧಿಸಿದ್ದರು ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಪೊಲೀಸರ ವಶದಲ್ಲಿದ್ದ ವ್ಯಕ್ತಿ ಮೃತಪಟ್ಟ ಬಗ್ಗೆ ಸಿಐಡಿ ತನಿಖೆ ನಡೆಯಲಿದೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ. ಆಫ್ರಿಕನ್ ಪ್ರಜೆಗಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ವಿಟ್​ ಎನ್​ಡಿಪಿಎಸ್ ಕಾಯ್ದೆಯಡಿ ಹಲವರನ್ನು ಬಂಧಿಸಿದ್ದೆವು. ಠಾಣೆ ಎದುರು ಬಹಳ ಅಮಾನವೀಯವಾಗಿ ವರ್ತಿಸಿದ್ದಾರೆ. ನಮ್ಮ ಪೊಲೀಸರು ಬಹಳ ತಾಳ್ಮೆಯಿಂದ ವರ್ತಿಸಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದರಿಂದ ಲಘುಲಾಠಿ ಪ್ರಹಾರ ಮಾಡಲಾಗಿದೆ. ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: Cabinet Expansion: ಎಲ್ಲಾ ಶಾಸಕರೂ ಸಚಿವರಾಗಲು ಸಾಧ್ಯವಿಲ್ಲ, ಪ್ರಾದೇಶಿಕವಾಗಿ ಸಂಪುಟ ರಚಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ

ಸಂಪುಟ ರಚನೆಗೆ ಸಿಕ್ತಾ ಗ್ರೀನ್ ಸಿಗ್ನಲ್? ದೆಹಲಿಯಿಂದ ಸಿಎಂ ಹೊತ್ತು ತರುವ ಹೊಸ ಸಚಿವರ ಲಿಸ್ಟ್​ನಲ್ಲಿ ಯಾರಿದ್ದಾರೆ ?

(Basavaraj Bommai on Karnataka Cabinet Karnataka Politics says on August 3 Minister list will finalized after meeting with JP Nadda)

Follow us on

Related Stories

Most Read Stories

Click on your DTH Provider to Add TV9 Kannada