ಮೋದಿ ಅಧಿಕಾರಕ್ಕೆ ಬರುವ ಮುನ್ನ ಎಸ್ಟಿ ಪಂಗಡದ ಕಲ್ಯಾಣಕ್ಕೆ ಶ್ರಮಿಸದ ಕಾಂಗ್ರೆಸ್: ಪ್ರಲ್ಹಾದ್ ಜೋಶಿ
ಬೆಂಗಳೂರು ನಗರದಲ್ಲಿ ಬಿಜೆಪಿ ಎಸ್ಟಿ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣಕ್ಕೆ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲ. ಬಿರ್ಸಾ ಮುಂಡಾ ಯಾರು ಅಂತಾ ಮರೆತೇ ಹೋಗಿತ್ತು. ಅವರನ್ನು ಮರೆತು ಹೋಗುವಂತೆ ಮಾಡಿದ್ದ ನೀಚ ಪಾರ್ಟಿ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು, ಜ.19: ನರೇಂದ್ರ ಮೋದಿ (Narendra Modi) ಅಧಿಕಾರಕ್ಕೆ ಬರುವ ಮುನ್ನ ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣಕ್ಕೆ ಕಾಂಗ್ರೆಸ್ (Congress) ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Praldhad Joshi) ಹೇಳಿದರು. ಬಿಜೆಪಿ ಎಸ್ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿರ್ಸಾ ಮುಂಡಾ ಯಾರು ಅಂತಾ ಮರೆತೇ ಹೋಗಿತ್ತು. ಅವರನ್ನು ಮರೆತು ಹೋಗುವಂತೆ ಮಾಡಿದ್ದ ನೀಚ ಪಾರ್ಟಿ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ಎಲ್ಲಿ ತಪ್ಪಿದೆ ಅದನ್ನ ಸರಿಪಡಿಸಿಕೊಂಡು ಹೋಗಿ. ಜನರಿಗೆ ಮಾಹಿತಿ ಕೊಡಲು ನಾವು ಇಲ್ಲಿ ಸೇರಿದ್ದೇವೆ ಎಂದು ಹೇಳಿದ ಪ್ರಲ್ಹಾದ್ ಜೋಶಿ, ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷರ ನಿದ್ದೆಗೆಡಿಸಿದ್ದ ಪರಿಶಿಷ್ಟ ಪಂಗಡದವರು, ಆದಿವಾಸಿಗಳ ನೇತೃತ್ವ ವಹಿಸಿದ್ದರು ಎಂದು ಸ್ಮರಿಸಿದರು.
ಎಲ್ಲಾ ಜನರನ್ನ ಗುರುತಿಸಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಎಸ್ಟಿ ಪಂಗಡಕ್ಕೆ ಸೇರಿದ ಹಿಂದುಳಿದ ಪ್ರದೇಶದಲ್ಲಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ ಎಂದರು. ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರ ಆಶೀರ್ವಾದದಿಂದ ಶೇ.3ರಿಂದ ಶೇ.7ಕ್ಕೆ ಏರಿಸಿದ್ದೇವೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭಾರತೀಯ ಜನತಾ ಪಕ್ಷ ಕರ್ನಾಟಕದ “ಪರಿಶಿಷ್ಟ ಪಂಗಡಗಳ ಮಹಾ ಸಮಾವೇಶ”ದಲ್ಲಿ ಪಾಲ್ಗೊಂಡೆನು. ಸಮಾಜದಲ್ಲಿ ಪ್ರತಿಯೊಂದು ಸಮುದಾಯವನ್ನು ಬಲಪಡಿಸಲು ನಮ್ಮ ಪಕ್ಷ ಮತ್ತು ಸರಕಾರ ಬದ್ಧವಾಗಿದ್ದು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯ ವಾಕ್ಯದೊಂದಿಗೆ ಸರ್ವರ ವಿಕಾಸಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.
ಇಂದಿನ… pic.twitter.com/6ugr4kdTCR
— Pralhad Joshi (@JoshiPralhad) January 19, 2024
ಎಲ್ಲಿ ತಪ್ಪಾಗಿದೆ ಅಂತಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಪಕ್ಷದಲ್ಲಿ ಎಸ್ಟಿ ಸಮುದಾಯದವರು ಯಾರು ಗೆದ್ದಿಲ್ಲ. ಪರಿಶಿಷ್ಟ ಪಂಗಡದ ಆಕ್ಷನ್ ಕಮಿಟಿಗೆ 1.8 ಲಕ್ಷ ಭೂಮಿಯನ್ನ ವಿತರಿಸಿದ್ದೇವೆ. ಮುದ್ರಾ ಯೋಜನೆಯಡಿ ಎಸ್ಟಿ ಎಸ್ಸಿ ಸಮುದಾಯದವರಿಗೆ ಶೇ.50ರಷ್ಟು ಸಾಲ ಸಿಕ್ಕಿದೆ. ಏಕಲವ್ಯ ಶಾಲೆಯನ್ನ ನಿರ್ಲಕ್ಷ್ಯ ಮಾಡಲಾಗಿತ್ತು. 38 ಸಾವಿರ ಶಿಕ್ಷಕರನ್ನು ನೇಮಿಸಿದ್ದು ನರೇಂದ್ರ ಮೋದಿ ಸರ್ಕಾರ ಎಂದರು.
ಪ್ರಧಾನಿ ಜನ್ ಮನ್ ಯೋಜನೆಯಲ್ಲಿ 24 ಸಾವಿರ ಕೊಟ್ಟು ಸ್ಕೂಲ್, ನೀರು ಮೂಲ ಭೂತ ಸೌಕರ್ಯ ಕೊಟ್ಟು ನ್ಯಾಯ ನೀಡಿದ್ದು ಪ್ರಧಾನಿ ಮೋದಿಯವರು. ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ನಡೆಯುವ ಸಮಯದಲ್ಲಿ ಅಪಹಾಸ್ಯ ಮಾಡುವವರಿಗೆ ತಕ್ಕಪಾಠ ಕಲಿಸಬೇಕಿದೆ ಎಂದರು.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ರಾಜಕಾರಣ ಜನರಿಗೆ ಅರ್ಥವಾಗುತ್ತಿದೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ದೇಶದಲ್ಲಿ ಬಹುದೊಡ್ಡ ಬೆಳವಣಿಗೆ ನಡೆಯುತ್ತಿದೆ. ಆರ್ಥಿಕವಾಗಿ ಬಹುದೊಡ್ಡ ಹೆಜ್ಜೆ ಇಡುತ್ತಿದ್ದೇವೆ. ನೂರು ಲಕ್ಷ ಕೋಟಿಯನ್ನ ಇನ್ಫ್ರಾಸ್ಟಕ್ಚರ್ಗೆ ಅನುದಾನ ಕೊಟ್ಟು ಕೆಲಸ ಮಾಡಿದೆ. 10 ವರ್ಷಗಳಲ್ಲಿ ಏನಾಗಿದೆ ಅಂತ ಪ್ರಶ್ನೆ ಕೇಳುವವರಿಗೆ ಇಂತಹ ಸಾಕಷ್ಟು ಉದಾಹರಣೆಗಳು ಇವೆ ಎಂದರು.
ಅಂದು ದುರ್ಬಲ ರಾಷ್ಟ್ರ ಅಂತ ಭಾರತವನ್ನು ಪರಿಗಣಿಸಲಾಗಿತ್ತು. ಆದರೆ, ಇಂದು ಜಗತ್ತಿನ ಪ್ರಬಲ 5ನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದ ಪ್ರಲ್ಹಾದ್ ಜೋಶಿ, 21 ನೇ ಶತಮಾನ ಭಾರತದ ಶತಮಾನವಾಗಲಿದೆ. ವಿಕಸಿತ ಭಾರತ ಆಗಲು ರೋಡ್ ಮ್ಯಾಪ್ ಪ್ರಧಾನಿ ಮೋದಿ ಬಳಿ ಇದೆ. ಜನರಲ್ಲಿ ಕಮ್ಯುನಿಕೇಷನ್ ಗ್ಯಾಪ್ ಆಗಿದೆ. ಅದನ್ನ ಸರಿಪಡಿಸಿಕೊಳ್ಳಬೇಕಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಿದ ವಿಚಾರವಾಗಿ ಮಾತನಾಡಿದ ಜೋಶಿ, ಕಾನೂನು ಸಂವಿಧಾನ ಪ್ರಕಾರವಾಗಿ ಬೊಮ್ಮಾಯಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಿದೆ. ಮುಂದೆ ಏನಾದರೂ ನಮ್ಮದು ಜವಾಬ್ದಾರಿ ಇದ್ದರೆ ಮಾಡುತ್ತೇವೆ. ಸರ್ಕಾರ ಏನು ಪ್ರಸ್ತಾವನೆ ಕೊಟ್ಟಿದೆ ಎಂದು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ