ಬಿಜೆಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್​ಗೆ ನಡುಕ ಶುರು ಎಂದ ಹೆಚ್​ಡಿ ಕುಮಾರಸ್ವಾಮಿ

ಲೋಕಸಭೆ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಇದು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗುತ್ತಿದ್ದು, ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಸೂಚಿಸಿದ್ದಾರೆ. ಹೀಗಾಗಿ ನಾಳೆ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯುವ ಸಾಧ್ಯತೆ ಇದೆ.

ಬಿಜೆಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್​ಗೆ ನಡುಕ ಶುರು ಎಂದ ಹೆಚ್​ಡಿ ಕುಮಾರಸ್ವಾಮಿ
ಹೆಚ್​​ಡಿ ಕುಮಾರಸ್ವಾಮಿ
Edited By: Rakesh Nayak Manchi

Updated on: Sep 09, 2023 | 2:38 PM

ಬೆಂಗಳೂರು, ಸೆ.9: ಲೋಕಸಭೆ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ (BJP-JDS Alliance) ಮಾತುಕತೆ ನಡೆಯುತ್ತಿದ್ದು, ಇದು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (H.D.Kumaraswamy), ಪ್ರಸಕ್ತ ಬೆಳವಣಿಗೆ ಪ್ರಾಥಮಿಕ ಹಂತದಲ್ಲಿದೆ ಇದೆ ಅಷ್ಟೇ. ನಾಳೆ ಕಾರ್ಯಕರ್ತರ ಸಭೆ ಮಾಡಲು ದೇವೇಗೌಡರು ಹೇಳಿದ್ದರು. ಹೀಗಾಗಿ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕು ಅಲ್ವಾ? ಎಂದು ಪ್ರಶ್ನಿಸಿದರು.

ಇಲ್ಲಿ ಕೊಟ್ಟು ತೆಗೆದುಕೊಳ್ಳುವುದು ಅಲ್ಲ, ವಿಶ್ವಾಸ, ಗೌರವ ಮುಖ್ಯ. ಗೌರವ, ವಿಶ್ವಾಸವನ್ನು ಮೊದಲು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ ಕುಮಾರಸ್ವಾಮಿ, ಮೈತ್ರಿ ವಿಚಾರವಾಗಿ ಉತ್ತರ ನೀಡುವ ಕಾಲ ಇನ್ನೂ ದೂರ ಇದೆ. ಯಾವುದೇ ರಾಜಕಾರಣಿಗೂ ಹತಾಶೆ ಎಂಬುದು ಬರಲ್ಲ. ಇಲ್ಲಿ ಹತಾಶೆ ಆಗುತ್ತಿರುವುದು, ನಡುಕ ಆಗಿರುವುದು ಕಾಂಗ್ರೆಸ್​ ಪಕ್ಷಕ್ಕೆ ಮಾತ್ರ ಎಂದರು.

ಇದನ್ನೂ ಓದಿ: ಮಿಷನ್ 28: ಬಿಜೆಪಿ, ಜೆಡಿಎಸ್ ನಡುವೆ​ ಮೈತ್ರಿ ಮಾತುಕತೆ; ಯಾರು ಏನಂದ್ರು?

ಮೈತ್ರಿ ವಿಚಾರವಾಗಿ ದೆಹಲಿಗೆ ಹೋಗುವ ಬಗ್ಗೆ ಇನ್ನೂ ನಿಗದಿಯಾಗಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೆಲವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಮೈತ್ರಿ ಬಗ್ಗೆ ನನಗೆ ಯಾವುದೇ ಆತುರ ಇಲ್ಲ ಎದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಹೇಳಿದರು.

ಲೂಟಿ ಮಾಡಿದ ಹಣದಲ್ಲಿ ಮತ್ತೆ ಜನರನ್ನು ಕೊಂಡುಕೊಳ್ಳಲು ಯೋಚಿಸಿದ್ದಾರೆ. ನಾನು ಇಂದು ದೊಡ್ಡವರ ಜೊತೆ ರಾಜಕೀಯ ಮಾತಾಡಲು ಬಂದಿಲ್ಲ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಸಾದ ತೆಗೆದುಕೊಂಡು ಹೋಗಲು ತಂಗಿ ಕರೆದಿದ್ದಳು ಅದಕ್ಕೆ ಬಂದಿದ್ದೆ. ದೆಹಲಿಗೆ ಹೋಗುವುದು ಇನ್ನೂ ಸಮಯ ನಿಗದಿಯಾಗಿಲ್ಲ. ದೇವೇಗೌಡರು ಒಪ್ಪಿದ್ದಾರೋ ಒಪ್ಪಿಲ್ಲವೋ ಮುಂದೆ ಗೊತ್ತಾಗುತ್ತದೆ. ಜನ ಬೇಸತ್ತಿರುವುದರಿಂದ ಕೆಲವು ನಿರ್ಣಯ ಮಾಡಬೇಕಾಗುತ್ತದೆ, ಮಾಡೋಣ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us