Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಂಡಾಗಿರಿ ಬದಲು ಅಭಿವೃದ್ಧಿ ಮಾಡಿದ್ದರೆ ಕುಕ್ಕರ್ ಹಂಚುವ ಪ್ರಮೇಯ ಬರುತ್ತಿರಲಿಲ್ಲ: ಡಿಕೆ ಸುರೇಶ್ ವಿರುದ್ಧ ಬಿಜೆಪಿ ವಾಗ್ದಾಳಿ

ದೇಶ ವಿಭಜನೆಯ ಹೇಳಿಕೆ ನೀಡಿ ವಿವಾದಾತ್ಮಕವಾಗಿ ಸುದ್ದಿಯಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಇದೀಗ ಲೋಕಸಭೆ ಚುನಾವಣೆ ಸಮೀಪದಲ್ಲಿ ಮತದಾರರನ್ನು ಸೆಳೆಯಲು ಕುಕ್ಕರ್ ವಿತರಿಸಿ ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮೂಲಕ ಕ್ರಮಕ್ಕೆ ಒತ್ತಾಯಿಸಿದೆ.

ಗೂಂಡಾಗಿರಿ ಬದಲು ಅಭಿವೃದ್ಧಿ ಮಾಡಿದ್ದರೆ ಕುಕ್ಕರ್ ಹಂಚುವ ಪ್ರಮೇಯ ಬರುತ್ತಿರಲಿಲ್ಲ: ಡಿಕೆ ಸುರೇಶ್ ವಿರುದ್ಧ ಬಿಜೆಪಿ ವಾಗ್ದಾಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುಕ್ಕರ್ ಹಂಚಿಕೆ; ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ವಾಗ್ದಾಳಿ
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on: Feb 23, 2024 | 2:31 PM

ಬೆಂಗಳೂರು, ಫೆ.23: ದೇಶ ವಿಭಜನೆಯ ಹೇಳಿಕೆ ನೀಡಿ ವಿವಾದಾತ್ಮಕವಾಗಿ ಸುದ್ದಿಯಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಅವರು ಇದೀಗ ಲೋಕಸಭೆ ಚುನಾವಣೆ ಸಮೀಪದಲ್ಲಿ ಮತದಾರರನ್ನು ಸೆಳೆಯಲು ಕುಕ್ಕರ್ (Cooker) ವಿತರಿಸಿ ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ (BJP) ಟ್ವೀಟ್ ಮೂಲಕ ಕ್ರಮಕ್ಕೆ ಒತ್ತಾಯಿಸಿದೆ.

ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌‌ರಿಂದ ಕುಕ್ಕರ್‌ ಹಂಚಿಕೆ! ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ. ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ, ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್‌ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ ಮಾನ್ಯ ಡಿ .ಕೆ. ಸುರೇಶ್‌ ಅವರೇ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬಿಜೆಪಿ ಪೋಸ್ಟ್ ಮಾಡಿದೆ.

ಬಿಜೆಪಿ ಕರ್ನಾಟಕ ಟ್ವೀಟ್

ಅಂದ ಹಾಗೆ ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು, ಆದರೆ ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್‌ ವಿಶಲ್‌ ಸಹ ಇದೆ ಎಂಬುದು ಇಂದು ಜಗಜ್ಜಾಹೀರಾಗಿದೆ. ಮತದಾರರಿಗೆ ಕುಕ್ಕರ್‌ ಆಮಿಷ ಒಡ್ಡುತ್ತಿರುವ ಸಂಸದ ಡಿಕೆ ಸುರೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಟ್ವೀಟ್ ಮೂಲಕ ಬಿಜೆಪಿ ಒತ್ತಾಯಿಸಿದೆ. ಅಲ್ಲದೆ, ಕುಕ್ಕರ್​ ಬಾಕ್ಸ್​ಗಳ ಫೋಟೋಗಳನ್ನು ಹಂಚಿಕೊಂಡಿದೆ.

ಕುಕ್ಕರ್ ಹಂಚಿಕೆ ಬಗ್ಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸಿಟಿ ರವಿ, ಕುಕ್ಕರ್, ಸೀರೆ, ಬಾಟಲಿ ಕೊಡುವುದೇ ಅವರ ತಂತ್ರಗಾರಿಕೆ. ಅವರಿಗೆ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸ ಇಲ್ಲ. ಕನಕಪುರ ರಿಪಬ್ಲಿಕ್ ಅವರ ಕೆಲಸ ಮೊದಲಿಂದಲೇ ನಡೆಯುತ್ತಾ ಬಂದಿರುವು ಇದು ಎಂದರು.

ಇದನ್ನೂ ಓದಿ: ಸಂಸದೆ ಸುಮಲತಾ ಅಂಬರೀಶ್​ ಬಿಜೆಪಿಯಲ್ಲೇ ಇರುತ್ತಾರೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭೆ ಚುನಾವಣೆಯಲ್ಲಿ ಡಾ. ಮಂಜುನಾಥ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಡಾ.ಮಂಜುನಾಥ್ ಅವರ ಕಾರ್ಯಕ್ಷೇತ್ರದಲ್ಲಿ ಕೆಲಸ‌ ಮಾಡಿದ್ದಾರೆ. ಅವರಂತಹವರು ಬಂದು ಚುನಾವಣೆಗೆ ನಿಂತರೆ ಒಳ್ಳೆಯದೇ ಎಂದರು. ಮಂಜುನಾಥ್ ಅವಧಿಯ ಜಯದೇವ ಆಸ್ಪತ್ರೆ ಕಾಮಗಾರಿ ತನಿಖೆ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಅವರ ಕೆಲಸ ಎಲ್ಲರೂ ಮೆಚ್ಚಿದ್ದಾರೆ. ಎಲ್ಲಾ ಸರ್ಕಾರ ಬಂದಾಗ ಅವರನ್ನು ಮುಂದುವರೆಸಿದ್ದಾರೆ. ಇವರು ಚುನಾವಣೆಗೆ ನಿಂತರೆ ನಾವು ಸೋಲಬಹುದು ಎಂಬ ಅಳಕು ಇರಬಹುದು. ಹಾಗಾಗಿ ತನಿಖೆ ಹಾದಿ ಹಿಡಿದಿರಬಹುದು ಎಂದರು.

ತುಘಲಕ್​ನಿಂದ ಪ್ರೇರಣೆ ಪಡೆದ ರಾಜ್ಯ ಸರ್ಕಾರ: ಸಿಟಿ ರವಿ ವಾಗ್ದಾಳಿ

ಹಿಂದೆ ತುಘಲಕ್ ಈ ಸರ್ಕಾರದ ರೀತಿಯೇ ಇದ್ದ. ಬೆಳಗ್ಗೆ ಒಂದು ಆದೇಶ ಮಾಡುತ್ತಿದ್ದನಂತೆ, ಸಂಜೆ ಮತ್ತೊಂದು ಆದೇಶ ಮಾಡುತ್ತಿದ್ದನಂತೆ. ಈ ಸರ್ಕಾರವೂ ತುಘಲಕ್​ನಿಂದ ಪ್ರೇರಣೆ ಪಡೆದಿರಬಹುದು. ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಿಸಬೇಕು ಅನ್ನೋ ಆದೇಶ ಮಾಡಿ ನಂತರ ವಾಪಸ್ ತೆಗೆದುಕೊಂಡರು. ವಸತಿ ಶಾಲೆಗಳಲ್ಲಿ ಕೈಮುಗಿದು ಒಳಗೆ ಬಾ, ಧೈರ್ಯವಾಗಿ ಪ್ರಶ್ನಿಸಿ ಅಂತ ಆದೇಶ ಮಾಡಿ ಮತ್ತೆ ಅದನ್ನೂ ಜನವಿರೋಧ ಬಂತು ಅಂತ ವಾಪಸ್ ತೆಗೆದುಕೊಂಡರು. ನಾಡಗೀತೆ ವಿವಾದವೂ ಹೀಗೆಯೇ ಆಯಿತು ಎಂದರು.

ಕಾಂಗ್ರೆಸ್​ನವರ ಮನಸ್ಥಿತಿಯನ್ನು ಹ್ಯಾಕರ್​ಗಳು ಹ್ಯಾಕ್ ಮಾಡಿರಬಹುದು. ಅರ್ಬನ್ ನಕ್ಸಲರು ಕಾಂಗ್ರೆಸ್​ನವರ ಮನಸ್ಥಿತಿ ಹ್ಯಾಕ್ ಮಾಡಿದ್ದಾರೆ. ಈ ಕಾಂಗ್ರೆಸ್​​ನವರಿಗೆ ಆಧುನಿಕ ತುಘಲಕರು ಅಂತ ಕರೆಸಿಕೊಳ್ಳುವ ಆಸೆ ಇರಬಹುದು. ಇಡೀ ಸರ್ಕಾರವನ್ನು ಅರ್ಬನ್ ನಕ್ಸಲರು ಬೌದ್ಧಿಕವಾಗಿ ಹೈಜಾಕ್ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಂಡಿದೆ. ಅವರ ನಡೆಯಲ್ಲಿ ರಾಷ್ಟ್ರೀಯ ಹಿತ ಕಾಣೆಯಾಗಿದೆ. ತೆರಿಗೆಯಲ್ಲಿ ಅನ್ಯಾಯ ಅಂತ ರಾಷ್ಟ್ರ ವಿರೋಧಿಯಂತೆ ಸಿದ್ಧರಾಮಯ್ಯ ಮಾತಾಡುತ್ತಾರೆ. ಮನಮೊಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಅನ್ಯಾಯ ಆಗುತ್ತಿದೆ ಅಂತ ಇವರು ಯಾರೂ ದನಿ ಎತ್ತಲೇ ಇಲ್ಲ. ಮೋದಿ ಬಂದ ಮೇಲೆ ಅನುದಾನದಲ್ಲಿ ಪ್ರತಿಶತ 10 ರಷ್ಟು ಹೆಚ್ಚಾಗಿದೆ ಎಂದರು.

ಕಾಂಗ್ರೆಸ್​ನವರಿಗೆ ಚುನಾವಣೆಗೆ ಅಜೆಂಡಾ ಇಲ್ಲ. ಮೋದಿ ವಿರುದ್ಧ ಟೂಲ್ ಕಿಟ್ ರಾಜಕಾರಣದ ಭಾಗವಾಗಿ ಈ ರೀತಿ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಮೋದಿ ಕಳೆದ ಒಂಬತ್ತು ವರ್ಷಗಳಲ್ಲಿ ಎಷ್ಟು ಕೋಟಿ ಅನುದಾನ, ತೆರಿಗೆ ಪಾಲು ಕೊಟ್ಟಿದ್ದಾರೆ ಅಂತ ಹೇಳಲಿ. ಹಾಗೆಯೇ ಮನಮೋಹನ ಸಿಂಗ್ ಅವಧಿಯ ಲೆಕ್ಕವೂ ಹೇಳಲಿ. ಸಿದ್ದರಾಮಯ್ಯ ಸದಾ ಸಂಘರ್ಷದ ಮನಸ್ಥಿತಿಯಲ್ಲಿರುತ್ತಾರೆ. ಅಳಿದುಳಿದ ರಾಜ್ಯಗಳಲ್ಲಿ ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಜಹಗೀರುದಾರರ‌ ಮನಸ್ಥಿತಿ ಇವರದ್ದು ಎಂದು ವಾಗ್ದಾಳಿ ನಡೆಸಿದರು.

ಟಿಕೆಟ್ ಕೊಟ್ಟರೆ ಲೋಕಸಭೆ ಚನಾವಣೆಗೆ ಸ್ಪರ್ಧೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪತ್ರ ಸಮರ ವಿಚಾರವಾಗಿ ಮಾತನಾಡಿದ ಸಿಟಿ ರವಿ, ನಾನು ಲೋಕಸಭೆ ಆಕಾಂಕ್ಷಿ ಅಲ್ಲ. ಇದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕಾರ್ಯಕರ್ತರ ಮೂಲಕ ಒತ್ತಾಯ ಮಾಡಿಸುವ ಕೆಲಸ ನಾನು ಮಾಡಲ್ಲ. ನಾನು ಬೇರೆ ಬೇರೆ ರಾಜ್ಯಗಳಲ್ಲಿ ಉಸ್ತಿವಾರಿಯಾಗಿ ಕೆಲಸ‌ ಮಾಡಿರುವವನು. ಟಿಕೆಟ್ ಹೇಗೆ ಕೊಡುತ್ತಾರೆ ಅನ್ನೋದು ನನಗೂ ಗೊತ್ತಿದೆ. ಒತ್ತಾಯ, ಒತ್ತಡಗಳು ಪರಿಗಣನೆ ಆಗಲ್ಲ ಅನ್ನೋದೂ ಗೊತ್ತಿದೆ. ನಾನು ಟಿಕೆಟ್ ಕೇಳಿ ಪಡೆದಿರುವುದು ಕಡಿಮೆ. ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ, ಇಲ್ಲದಿದ್ದರೆ ಪಕ್ಷದ ಕೆಲಸ ಮಾಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಸಿಟಿ ರವಿ ಹೇಳಿದರು.

ಎನ್​ಡಿಎ ಸಭೆಯಲ್ಲಿ ಸೀಟು ಹಂಚಿಕೆ ಚರ್ಚೆ

ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಚುನಾವಣೆ ಸಂಬಂಧ ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಸಭೆ ನಡೆದಿಲ್ಲ. ಹಾಗಾಗಿ ಯಾವುದೇ ಟಿಕೆಟ್ ಹಂಚಿಕೆ ವಿಚಾರ ಚರ್ಚೆಯಾಗಿಲ್ಲ. ಎನ್‌ಡಿಎ ಸಭೆಯಲ್ಲಿ ಯಾವ ಪಕ್ಷದ ಜೊತೆ ಎಷ್ಟು ಸೀಟು ಅಂತ ನಿರ್ಧಾರ ಆಗಲಿದೆ. ಇಲ್ಲಿಯೂ ಕೂಡ ಜೆಡಿಎಸ್‌ ಜೊತೆ ಚರ್ಚೆ ಆಗಬೇಕಿದೆ. ಮಾಧ್ಯಮದ ಸುದ್ದಿ ಹೊರತುಪಡಿಸಿದರೆ ಯಾವುದೇ ತೀರ್ಮಾನ ಆಗಿಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ