ಭ್ರಷ್ಟ ಡಿಕೆಶಿ ಎಂಬ ಚಿತ್ರಕ್ಕೆ ಕಾಂಗ್ರೆಸ್ ಪಕ್ಷದ ನಾಯಕರೇ ಮುಹೂರ್ತ ಮಾಡಿದ್ದಾರೆ: ಬಿಜೆಪಿ ಟ್ವೀಟ್

BJP Karnataka: ಸಿದ್ದರಾಮಯ್ಯ ಅವರು ಹೆಣೆದ ಡಿಕೆಶಿಪದಚ್ಯುತಿ ಎಂಬ ಆಟ ಈಗ ಅಂತಿಮ ಹಂತಕ್ಕೆ ಬಂದಿದೆ ಎಂದು ಬಿಜೆಪಿ, ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಗ್ಗೆ ಆರೋಪ ಮಾಡಿದ್ದಾರೆ.

ಭ್ರಷ್ಟ ಡಿಕೆಶಿ ಎಂಬ ಚಿತ್ರಕ್ಕೆ ಕಾಂಗ್ರೆಸ್ ಪಕ್ಷದ ನಾಯಕರೇ ಮುಹೂರ್ತ ಮಾಡಿದ್ದಾರೆ: ಬಿಜೆಪಿ ಟ್ವೀಟ್
ಡಿ ಕೆ ಶಿವಕುಮಾರ್


ಬೆಂಗಳೂರು: ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷದವರೇ ಆದ ವಿ.ಎಸ್. ಉಗ್ರಪ್ಪ, ಸಲೀಂ ಕಾಂಗ್ರೆಸ್ ಕಚೇರಿಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ಕರ್ನಾಟಕ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಡಿಕೆಶಿ ಅವರೇ, ಭ್ರಷ್ಟಡಿಕೆಶಿ ಎಂಬ ಬಹುಭಾಷಾ, ಬಹುಕೋಟಿ, ಬಹುತಾರಾಂಗಣದ ಚಿತ್ರಕ್ಕೆ ಕಾಂಗ್ರೆಸ್ ಕರ್ನಾಟಕ ಪಕ್ಷದ ನಾಯಕರೇ, ಪಕ್ಷದ ಕಚೇರಿಯಲ್ಲೇ ಮುಹೂರ್ತ ಮಾಡಿದ್ದಾರೆ. ನಿಮ್ಮ ಹೊಸ 27 ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬಹುದು ಎಂದು ಟ್ವೀಟ್ ಮಾಡಿದೆ.

ಸಿದ್ದರಾಮಯ್ಯ ಅವರು ಹೆಣೆದ ಡಿಕೆಶಿಪದಚ್ಯುತಿ ಎಂಬ ಆಟ ಈಗ ಅಂತಿಮ ಹಂತಕ್ಕೆ ಬಂದಿದೆ ಎಂದು ಬಿಜೆಪಿ, ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಗ್ಗೆ ಆರೋಪ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಆಟ ಎಂದು ಟಾಂಗ್ ಕೊಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಉಗ್ರಪ್ಪ ಹಾಗೂ ಸಲೀಂ, ತಮ್ಮ ಅಧ್ಯಕ್ಷರ ಮೇಲೆ ಭ್ರಷ್ಟಾಚಾರ ಹಾಗೂ ವಿಫಲ ನಾಯಕತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಡಿ.ಕೆ. ಶಿವಕುಮಾರ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಇದೀಗ ಒಟ್ಟಾರೆ ಘಟನೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಘಟನೆಯ ಬಳಿಕ ಸಲೀಂ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ. 6 ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಘಟನೆಗೂ ಬಿಜೆಪಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ. ಸಲೀಂ ಅವರನ್ನು ಅಮಾನತುಗೊಳಿಸಿ ಪ್ರಯೋಜನವೇನು? ಅವರು ಹೇಳಿದ್ದು ಸತ್ಯ. ಅದಕ್ಕಾಗಿಯೇ ಡಿ.ಕೆ. ಶಿವಕುಮಾರ್ ಈ ಹಿಂದೆ ತೆರಿಗೆ ಸಂಸ್ಥೆಗಳು ದಾಳಿ ಮಾಡಿದ್ದು. ಅಕ್ರಮ ಸಂಪಾದನೆಯ ಕಾರಣದಿಂದ ತಿಹಾರ್‌ ಜೈಲು ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ. ಈ ಬಗ್ಗೆ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡುವಿರಾ ಡಿಕೆಶಿ? ಎಂದು ಬಿಜೆಪಿ ಕೇಳಿದೆ. ಅಲ್ಪಸಂಖ್ಯಾತರಾದ ಸಲೀಂ ಅವರನ್ನು ಅಮಾನತು ಮಾಡಿದೆ. ಆದರೆ ಉಗ್ರಪ್ಪ ಅವರಿಗೆ ರಾಜಮರ್ಯಾದೆ ನೀಡಿದೆ. ಸಿಎಂ ಇಬ್ರಾಹಿಂ ಹೇಳಿದ ಮಾತುಗಳನ್ನು ಕಾಂಗ್ರೆಸ್ ನಿಜ ಮಾಡಿದೆ ಎಂದೂ ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Congress: ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ: ಸಲೀಂ-ಉಗ್ರಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಇದನ್ನೂ ಓದಿ: ಡಿ.ಕೆ.ಶಿವಕುಮಾರ್​ ರಾಜಕೀಯದಿಂದ ಹಣ ಸಂಪಾದನೆ ಮಾಡಿಲ್ಲ: ವಿ.ಎಸ್.​ಉಗ್ರಪ್ಪ ಸ್ಪಷ್ಟನೆ

Read Full Article

Click on your DTH Provider to Add TV9 Kannada