ಜೆಡಿಎಸ್ ಕಾರ್ಯಕರ್ತರು ಶ್ರಮ ಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್‌ಗೆ ಟಿಕೆಟ್ ನೀಡಲಾಗಿದೆ: ಬಿಜೆಪಿ ವ್ಯಂಗ್ಯ

| Updated By: ganapathi bhat

Updated on: Nov 19, 2021 | 3:39 PM

ಜೆಡಿಎಸ್ ಕಾರ್ಯಕರ್ತರು ಶ್ರಮ ಪಡದ ಕಾರಣ ಟಿಕೆಟ್ ನೀಡಿಲ್ಲ. ಪಕ್ಷಕ್ಕಾಗಿ ದುಡಿದ ಸೂರಜ್‌ಗೆ ಈಗ ಟಿಕೆಟ್ ನೀಡಲಾಗಿದೆ ಎಂದು ದೇವೇಗೌಡ ಕುಟುಂಬದ ವಿರುದ್ಧ ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಜೆಡಿಎಸ್ ಕಾರ್ಯಕರ್ತರು ಶ್ರಮ ಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್‌ಗೆ ಟಿಕೆಟ್ ನೀಡಲಾಗಿದೆ: ಬಿಜೆಪಿ ವ್ಯಂಗ್ಯ
ಬಿಜೆಪಿ ಮತ್ತು ಜೆಡಿಎಸ್ ಚಿಹ್ನೆ
Follow us on

ಬೆಂಗಳೂರು: ಕುಟುಂಬ ರಾಜಕಾರಣದಲ್ಲೂ ಮಾನದಂಡ ಹುಡುಕಿದರೆ ಅಲ್ಲಿಯೂ ದೇವೇಗೌಡರದ್ದು ಒಂದು ಆದರ್ಶ ಕುಟುಂಬ. ಒಂದೇ ಕುಟುಂಬದ 8 ಜನರು ಸ್ಥಾನಮಾನ ಪಡೆದ ಪಕ್ಷ. ರಾಜಕಾರಣದಲ್ಲಿ ಸ್ಥಾನಮಾನ ಪಡೆದ ರಾಜ್ಯದ ಏಕೈಕ ಪಕ್ಷ ಜೆಡಿಎಸ್. ಈ ಹೆಗ್ಗಳಿಕೆ ಪಡೆಯಲು ಕಾರಣವಾದ ಯತ್ನಕ್ಕೆ ಅಭಿನಂದನೆ ಎಂದು ಹೆಚ್​.ಡಿ. ದೇವೇಗೌಡ ಕುಟುಂಬದ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

ಹೆಚ್.ಡಿ. ದೇವೇಗೌಡ ಕುಟುಂಬದ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಜೆಡಿ ಎಸ್​ನಲ್ಲಿ ದೇವೇಗೌಡರ ಕುಟುಂಬದ ಎಲ್ಲ ಕವಲುಗಳೂ ರಾಜಕೀಯ ಸ್ಥಾನಮಾನ ಪಡೆಯುತ್ತಿದೆ. ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಹೆಚ್‌ಡಿಕೆ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಎಲ್ಲರೂ ರಾಜಕೀಯ ಸ್ಥಾನಮಾನ ಪಡೆಯುತ್ತಿದ್ದಾರೆ. ಕುಟುಂಬದ ಉಳಿವಿಗಾಗಿ ಕಾರ್ಯಕರ್ತರ ತ್ಯಾಗ ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಘಟಕ ಟೀಕಾಪ್ರಹಾರ ಮಾಡಿದೆ.

ಪಕ್ಷಕ್ಕೋಸ್ಕರ ದುಡಿಮೆ ಮಾಡಿ, ಅಧಿಕಾರ ನಿಮ್ಮದೇ ಆಗಿರುತ್ತೆ ಎಂದು ಈ ಹಿಂದೆ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಜೆಡಿಎಸ್ ಕಾರ್ಯಕರ್ತರು ಶ್ರಮ ಪಡದ ಕಾರಣ ಟಿಕೆಟ್ ನೀಡಿಲ್ಲ. ಪಕ್ಷಕ್ಕಾಗಿ ದುಡಿದ ಸೂರಜ್‌ಗೆ ಈಗ ಟಿಕೆಟ್ ನೀಡಲಾಗಿದೆ ಎಂದು ದೇವೇಗೌಡ ಕುಟುಂಬದ ವಿರುದ್ಧ ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಡಾ. ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ; ಜೆಡಿಎಸ್​ನಲ್ಲಿ ದೇವೇಗೌಡರ ಕುಟುಂಬದ್ದೇ ದರ್ಬಾರ್

ಇದನ್ನೂ ಓದಿ: ಹಾಸನದಲ್ಲಿ ಸೂರಜ್ ರೇವಣ್ಣ ಜೆಡಿಎಸ್​ನ ಎಂಎಲ್​ಸಿ ಅಭ್ಯರ್ಥಿ: ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕಾರಣ ಪ್ರವೇಶ

Published On - 3:35 pm, Fri, 19 November 21