Khushbu Sundar: ಮೋದಿ ಅಂದರೆ ಭ್ರಷ್ಟಾಚಾರ ಎಂದು ಟ್ವೀಟ್ ಮಾಡಿದ್ದ ಖುಷ್ಬೂ ಸುಂದರ್; ಈ ಬಗ್ಗೆ ಏನಂತೀರಿ ಎಂದು ಕೇಳಿದ ಕಾಂಗ್ರೆಸ್
ಮೋದಿ ಎಲ್ಲೆಡೆ ಇದ್ದಾರೆ, ಆದರೆ ಇದು ಏನು? ಮೋದಿ ಸರ್ ನೇಮ್ ಭ್ರಷ್ಟಾಚಾರದೊಂದಿಗೆ ತಳುಕು ಹಾಕಿದೆ" ಎಂದು ಅವರು ಟ್ವೀಟ್ ಮಾಡಿದ್ದರು.ಇಲ್ಲಿಯೂ ಮೋದಿ,ಅಲ್ಲಿಯೂ ಮೋದಿ ಎಲ್ಲೆ ನೋಡಿದರೂ ಮೋದಿ. ಆದರೆ ಇದು ಏನು?
ದೆಹಲಿ: ಬಿಜೆಪಿ ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರು 2018 ರಲ್ಲಿ ಮಾಡಿದ ಟ್ವೀಟ್ ಈಗ ಮತ್ತೆ ಚರ್ಚೆಯಾಗುತ್ತಿದೆ. ಆಗ ಕಾಂಗ್ರೆಸ್ ಸದಸ್ಯರಾಗಿದ್ದ ಖುಷ್ಬೂ ಸುಂದರ್ ಅವರು ಮೋದಿ ಎಂಬುದರ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಬೇಕು ಎಂದು ಹೇಳಿದ್ದರು. “ಮೋದಿ ಎಲ್ಲೆಡೆ ಇದ್ದಾರೆ, ಆದರೆ ಇದು ಏನು? ಮೋದಿ ಸರ್ನೇಮ್ (Modi Surname) ಭ್ರಷ್ಟಾಚಾರದೊಂದಿಗೆ ತಳುಕು ಹಾಕಿದೆ” ಎಂದು ಅವರು ಟ್ವೀಟ್ ಮಾಡಿದ್ದರು.ಇಲ್ಲಿಯೂ ಮೋದಿ,ಅಲ್ಲಿಯೂ ಮೋದಿ ಎಲ್ಲೆ ನೋಡಿದರೂ ಮೋದಿ. ಆದರೆ ಇದು ಏನು? ಪ್ರತಿ ಮೋದಿ ಮುಂದೆ ಭ್ರಷ್ಟಾಚಾರ ಸರ್ನೇಮ್ ಇದೆ. ಹಾಗಾದರೆ ಅರ್ಥ ಮಾಡಿಕೊಳ್ಳಿ. ಮೋದಿ ಅಂದರೆ ಭ್ರಷ್ಟಾಚಾರ (Corruption). ಮೋದಿಯ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಿಸೋಣ.ಅದೇ ಸರಿ ಹೊಂದುತ್ತದೆ. ನೀರವ್, ಲಲಿತ್, ನಮೋ ಅಂದರೆ ಭ್ರಷ್ಟಾಚಾರ ಎಂದು ಖುಷ್ಬೂ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.
Yahan #Modi wahan #Modi jahan dekho #Modi..lekin yeh kya?? Har #Modi ke aage #bhrashtachaar surname laga hua hai..toh baat ko no samjho..#Modi mutlab #bhrashtachaar..let’s change the meaning of #Modi to corruption..suits better..#Nirav #Lalit #Namo = corruption..????
— KhushbuSundar (@khushsundar) February 15, 2018
ತಮ್ಮ ಹಳೆಯ ಟ್ವೀಟ್‌ಗಳನ್ನು ಹೊರತರಲು ಕಾಂಗ್ರೆಸ್ ಹತಾಶವಾಗಿದೆ ಎಂದು ಖುಷ್ಬೂ ಸುಂದರ್ ಹೇಳಿದ್ದಾರೆ. “ಕಾಂಗ್ರೆಸ್ ಪಕ್ಷವು ನನ್ನ ಹಳೆಯ ಟ್ವೀಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರು ಎಷ್ಟು ಹತಾಶರಾಗಿದ್ದಾರೆಂದು ತೋರಿಸುತ್ತದೆ” ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
“ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಪೋಸ್ಟ್ ಮಾಡಿದ ‘ಮೋದಿ’ ಟ್ವೀಟ್‌ಗೆ ನಾನು ನಾಚಿಕೆಪಡುವುದಿಲ್ಲ. ನಾನು ನಾಯಕನನ್ನು ಅನುಸರಿಸುತ್ತಿದ್ದೆ ಮತ್ತು ಪಕ್ಷದ ಭಾಷೆಯಲ್ಲಿ ಮಾತನಾಡುತ್ತಿದ್ದೆ” ಎಂದು ಅವರು ಹೇಳಿದರು.
ನಟಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸದಸ್ಯರೂ ಆಗಿರುವ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದ ನಂತರ 2020 ರಲ್ಲಿ ಬಿಜೆಪಿಗೆ ಸೇರಿದರು. ಗುಜರಾತ್‌ನ ನ್ಯಾಯಾಲಯವು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಅವರನ್ನು ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಗುರುವಾರ ತೀರ್ಪು ನೀಡಿದೆ. ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ಅದರ ಪರಿಣಾಮವಾಗಿ, ಮರುದಿನ ಅವರನ್ನು ಸಂಸದರಾಗಿ ಅನರ್ಹಗೊಳಿಸಲಾಯಿತು. ಈ ತೀರ್ಪಿನ ವಿರುದ್ಧ ಅವರು ಇನ್ನೂ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕಾಗಿದೆ.
ಇದನ್ನೂ ಓದಿ:Assembly Polls: ಸಿದ್ದರಾಮಯ್ಯ ಅಂತಿಮವಾಗಿ ವರುಣಾದಿಂದಲೇ ಸ್ಪರ್ಧಿಸೋದು ಅಂತ ಮೊದಲೇ ಹೇಳಿದ್ದೆವು: ಸಿಟಿ ರವಿ
ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಿರುವ ಗುಜರಾತ್ ಸಚಿವ ಪೂರ್ಣೇಶ್ ಮೋದಿ, ಖುಷ್ಬೂ ಸುಂದರ್ ವಿರುದ್ಧ ಕೇಸ್ ಹಾಕುತ್ತಾರಾ ಎಂದು ಕಾಂಗ್ರೆಸ್ ಬೆಂಬಲಿಗರು ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 2019 ರ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಎಲ್ಲಾ ಕಳ್ಳರ ಸರ್ ನೇಮ್ ಮೋದಿ ಎಂದು ಯಾಕಿದೆ? ಎಂದು ಹೇಳಿದ್ದು ಇದರ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Sat, 25 March 23