ಸಂಪುಟದಲ್ಲಿ ಮಂತ್ರಿಗಿರಿ ಸಿಗ್ಲಿ ಸಿಗದಿರಲಿ; ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದ ಖುಷಿಯಿದೆ: ರಮೇಶ್ ಜಾರಕಿಹೊಳಿ
Ramesh Jarkiholi: ನಾನು ಸಚಿವ ಸ್ಥಾನ ಸಿಗುತ್ತೆ ಎಂಬ ಆಶಾಭಾವನೆ ಇಟ್ಟುಕೊಳ್ಳುವುದಿಲ್ಲ. ಬಿಜೆಪಿ ಹೈಕಮಾಂಡ್, ಸಿಎಂ ಬಸವರಾಜ ಬೊಮ್ಮಾಯಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ. ಈಗ ಎಲ್ಲವೂ ಮುಗಿದ ಅಧ್ಯಾಯ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ: ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದು (ಆಗಸ್ಟ್ 14) ಪ್ರತಿಕ್ರಿಯೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಮಗೆ ಮಂತ್ರಿಗಿರಿ ಸಿಗ್ಲಿ ಸಿಗದಿರಲಿ. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದ ಖುಷಿಯಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದಕ್ಕೆ ನಾವು ಹ್ಯಾಪಿಯಾಗಿದ್ದೇವೆ. ಸಮ್ಮಿಶ್ರ ಸರ್ಕಾರ ತೆಗೆಯದಿದ್ದರೆ ಅಲ್ಲೋಲ ಕಲ್ಲೋಲವಾಗ್ತಿತ್ತು. ಈ ಸರ್ಕಾರದಲ್ಲಿ ನಾವು ಸಚಿವರಾಗ್ತೇವೋ ಬಿಡ್ತೇವೋ ಬೇರೆ ಪ್ರಶ್ನೆ. ಆದರೆ, ನಾನೀಗಲೂ ಮಂತ್ರಿಗಿಂತ ಹೆಚ್ಚಾಗಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವರಾಗಬೇಕೆಂದು ಜಾರಕಿಹೊಳಿ ಕುಟುಂಬಕ್ಕೆ ಆಸೆಯಿಲ್ಲ ಎಂದು ತಿಳಿಸಿದ ಅವರು ಬೊಮ್ಮಾಯಿ ಸಂಪುಟದಿಂದ ಲಕ್ಷ್ಮಣ ಸವದಿ ಕೈಬಿಟ್ಟ ವಿಚಾರವಾಗಿ ಮಾತನಾಡಿದ್ದಾರೆ. ಸವದಿ ಡಿಸಿಎಂ ಮಾಡಿದಾಗ ಏಕೆ ಮಾಡಿದ್ದೀರೆಂದು ಕೇಳಲಿಲ್ಲ. ಈಗ ಸಂಪುಟದಿಂದ ಲಕ್ಷ್ಮಣ ಸವದಿ ಕೈಬಿಟ್ಟಿದ್ದನ್ನೂ ಕೇಳಲ್ಲ. ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮುಂದಿನ ಅವಧಿಗೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕೆಲಸ 2023ಕ್ಕೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲು ಕೆಲಸ ಮಾಡುತ್ತೇವೆ. ತ್ಯಾಗದ ಮನೋಭಾವದಿಂದ ಕೆಲಸ ಮಾಡಲು ಆರಂಭಿಸ್ತೇವೆ ಎಂದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದು (ಆಗಸ್ಟ್ 14) ಹೇಳಿಕೆ ನೀಡಿದ್ದಾರೆ. ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈತಪ್ಪಿರುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಅವರು ಒಳ್ಳೆಯವರು, ತ್ಯಾಗ ಮಾಡ್ತಾರೆ ಅಂದುಕೊಂಡು ನೀಡಿರಲಿಕ್ಕಿಲ್ಲ. ಪಕ್ಷಕ್ಕಾಗಿ ತ್ಯಾಗ ಮಾಡ್ತಾರೆಂದು ಕುಮಟಳ್ಳಿ ಕೈಬಿಟ್ಟಿರಬಹುದು. ಮುಂದಿನ ದಿನಗಳಲ್ಲಿ ಮಹೇಶ್ ಕುಮಟಳ್ಳಿಗೆ ಒಳ್ಳೆಯ ಸ್ಥಾನ ನೀಡುತ್ತಾರೆ. ನಾನು ಜಲಸಂಪನ್ಮೂಲ ಸಚಿವನಾಗಲು ಕುಮಟಳ್ಳಿ ಕಾರಣ. ನೀವು ಸಚಿವರಾದರೆ ಈ ಭಾಗ ಅಭಿವೃದ್ಧಿಯಾಗುತ್ತೆ ಅಂದಿದ್ರು ಎಂದು ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸಚಿವ ಸ್ಥಾನ ಸಿಗುತ್ತೆ ಎಂಬ ಆಶಾಭಾವನೆ ಇಟ್ಟುಕೊಳ್ಳುವುದಿಲ್ಲ. ಬಿಜೆಪಿ ಹೈಕಮಾಂಡ್, ಸಿಎಂ ಬಸವರಾಜ ಬೊಮ್ಮಾಯಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ. ಈಗ ಎಲ್ಲವೂ ಮುಗಿದ ಅಧ್ಯಾಯ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕಾಂಗ್ರೆಸ್ 20 ವರ್ಷ ನಡೆಸಿಕೊಂಡಷ್ಟು, ಬಿಜೆಪಿ 1 ವರ್ಷದಲ್ಲಿ ನಡೆಸಿಕೊಂಡಿದೆ ಶಾಸಕ ಸ್ಥಾನದಿಂದ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದಿದ್ದು ನಿಜ. ಆದರೆ, ಸುತ್ತೂರು ಶ್ರೀಗಳು ಕೆಲವೊಂದು ಸಲಹೆ ಸೂಚನೆ ಕೊಟ್ಟರು. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದೆ. ಕಾಂಗ್ರೆಸ್ನವರು ಇಪ್ಪತ್ತು ವರ್ಷ ನಡೆಸಿಕೊಂಡಷ್ಟು, ಬಿಜೆಪಿ ಹೈಕಮಾಂಡ್ 1 ವರ್ಷದಲ್ಲಿ ನಮ್ಮನ್ನ ನಡೆಸಿಕೊಂಡಿದೆ. ಅವರ ಪ್ರೀತಿ ವಿಶ್ವಾಸದಿಂದ ಬಿಜೆಪಿಯಲ್ಲಿ ಮುಂದುವರಿದಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಾನೇ ಮಂತ್ರಿ ಆಗಬೇಕೆಂದು ಆಸೆ ಇಲ್ಲ; ನನ್ನ ತಮ್ಮ, ಮಹೇಶ್ ಕುಮಟಳ್ಳಿ ಇದ್ದಾರೆ ಸಿಡಿ ಕೇಸ್‌ನ ತನಿಖೆಯ ರಿಪೋರ್ಟ್ ಸಲ್ಲಿಕೆಯಾಗದ ವಿಚಾರವಾಗಿಯೂ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ಪ್ರಕರಣವನ್ನು ಇನ್ನೂ 1 ವರ್ಷ ಹಾಗೇ ಇಟ್ಟಿರಲಿ ನನಗೇನೂ ಅವಸರ ಇಲ್ಲ. ನನ್ನ ತಮ್ಮ ಇದ್ದಾನೆ, ಮಹೇಶ್ ಕುಮಟಳ್ಳಿ ಇದ್ದಾರೆ. ನಾನೇ ಮಂತ್ರಿಯಾಗಬೇಕು ಅನ್ನುವ ಆಸೆ ನನಗೆ ಇಲ್ಲ. ಈ ಅವಧಿಯಲ್ಲಿ ನಾವು ಸಚಿವರಾಗದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.
ಸಿಡಿ ಕೇಸ್ ಷಡ್ಯಂತ್ರದ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಡಿ ಕೇಸ್ ಕೋರ್ಟ್ನಲ್ಲಿದ್ದು ಅದರ ಬಗ್ಗೆ ಚರ್ಚಿಸುವುದಿಲ್ಲ ಎಂದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಎಸ್ಐಟಿ ಮುಖ್ಯಸ್ಥರಿಲ್ಲದೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಹೇಗೆ ನಡೆದಿದೆ? ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ: ಚೆಕ್ ಬೌನ್ಸ್ ಕೇಸ್ಗೆ ಮರುಜೀವ
(BJP MLA Ramesh Jarkiholi on BJP Govt Basavaraj Bommai Cabinet CD Case Congress JDS at Belagavi)