ಮತ್ತೆ ಮುನ್ನಲೆಗೆ ಬಂದ ಸಿಡಿ ಕೇಸ್: ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿಎಂ ಜಾರಕಿಹೊಳಿ ಪತ್ರ

| Updated By: ರಮೇಶ್ ಬಿ. ಜವಳಗೇರಾ

Updated on: Oct 31, 2023 | 3:29 PM

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿನ ಅವರ ಸಿಡಿ ಪ್ರಕರಣ ಮತ್ತೆ ರಾಜ್ಯ ರಾಜಕಾರಣದಲ್ಲಿ ಸ್ಫೋಟವಾಗಿದೆ. ಈ ಪ್ರಕರದ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಜಾರಕಿಹೊಳಿ ಆರೋಪಿಸಿದ್ದು, ಇದನ್ನು ಸಿಬಿಐ ತನಿಖೆ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಮತ್ತೆ ಮುನ್ನಲೆಗೆ ಬಂದ ಸಿಡಿ ಕೇಸ್: ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿಎಂ ಜಾರಕಿಹೊಳಿ ಪತ್ರ
ರಮೇಶ್ ಜಾರಕಿಹೊಳಿ
Follow us on

ಬೆಂಗಳೂರು, (ಅಕ್ಟೋಬರ್ 31): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ರಮೇಶ್ ಜಾರಿಕಹೊಳಿ ಸೈಲೆಂಟ್ ಆಗಿದ್ದವರು ಇದೀಗ ಮತ್ತೆ ಏಕಾಏಕಿ ಆ್ಯಕ್ಟೀವ್ ಆಗಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಗೋಕಾಕ್ ಸಾಹುಕಾರ ಮತ್ತು ಕನಕಪುರ ಬಂಡೆ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗಿದೆ. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಿಡಿ ಕೇಸ್​ ಮುನ್ನಲೆಗೆ ಬಂದಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಮೇಶ್ ಜಾರಕಿಹೊಳಿ ಪತ್ರ ಬರೆದಿದ್ದಾರೆ.

ಪ್ಯಾಕ್ಸ್ ಮೂಲಕ ಪತ್ರ ರವಾನಿಸಿರುವ ರಮೇಶ್ ಜಾರಕಿಹೊಳಿ, ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ದಾವೆ ನ‌.0021/2021 ದಿ.13-3-2021 ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಬೆಂಗಳೂರಿನ ಮತ್ತಿಕೇರಿ ಪ್ರದೇಶದಲ್ಲಿ ಸಿಡಿ ಡೌನ್‌ಲೋಡ್ ಮಾಡಿ. ಸರ್ವರ್ ಮುಖಾಂತರ ರಷ್ಯಾ, ದುಬೈ, ಮತ್ತು ಇಂಗ್ಲೆಂಡ್ ನಲ್ಲಿ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿರುತ್ತಾರೆ. ಇದರ‌ ಹಿಂದೆ ಪ್ರಭಾವಿ ನಾಯಕರ ಕೈವಾಡವಿದ್ದು, ಅದನ್ನ ಪತ್ತೆ ಹಚ್ಚಲು ಸಿಬಿಐ ಮುಖಾಂತರ ಮಾತ್ರ ಸಾಧ್ಯ. ಆದ್ದರಿಂದ ಸದರೀ ದಾವೆಯನ್ನು ಕೂಡಲೇ ಸಿಬಿಐಗೆ ವಹಿಸಲು ವಿನಂತಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ವಪಕ್ಷದ ವಿರುದ್ಧವೇ ಪರೋಕ್ಷ ಅಸಮಾಧಾನ

ಸಿಡಿ ಕೇಸ್​ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿಲ್ಲ. ಕಾರು ಚಾಲಕ ಪರಶಿವಮೂರ್ತಿರನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್? ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಾಕೆ ವಿಚಾರಣೆ ಮಾಡಲಿಲ್ಲ. ಅಲ್ಲೇ ಇರೋದು ಟ್ವಿಸ್ಟ್ . ನನ್ನ ಮಾತಿನಿಂದ ಬಿಜೆಪಿಗೆ ಮುಜುಗರ ಆಗುವುದು ಬೇಡ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರು ಸಿಡಿ ಕೇಸ್ ನಲ್ಲಿ ಇದ್ದಾರೆ ಎನ್ನುವ ಅರ್ಥದಲ್ಲಿ ಹೇಳಿದರು.

ನಾಲ್ಕು ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ನಾನು ದಾಖಲೆ ಕೊಡದೇ ಇದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಡಿಕೆ ಶಿವಕುಮಾರ್ ಅಂತ್ಯವಾದ್ರೆ ರಾಜಕಾರಣದಲ್ಲಿ ಒಳ್ಳೆಯದು. ಡಿಕೆ ಶಿವಕುಮಾರ್ ಸಿಡಿ ಪ್ಯಾಕ್ಟರಿ ಬಂದ್ ಆಗಬೇಕು ಅಂದ್ರೆ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದರು.

ಸಿಬಿಐಗೆ ವಹಿಸದಿದ್ದಲ್ಲಿ ಹೈಕೋರ್ಟ್ ಇಲ್ಲ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ. ಡಿಕೆ ಶಿವಕುಮಾರ್ ಬಹಳ ವೀಕ್ ಮನುಷ್ಯ, ಕೇವಲ ಬ್ಲ್ಯಾಕ್ ಮಾಡುವುದೇ ಅವನ ಕೆಲಸ. ಇಲ್ಲವಾದ್ರೇ ಮುಂದೆ ಅವರ ಶಾಸಕರಿಗೂ ತೊಂದರೆ ಇದೆ. ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ್ದು ಆಡಿಯೋ ಇದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ