ಬಿಜೆಪಿಯವರದ್ದು ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ; ಕಿಡಿಕಾರಿದ ಸಚಿವ ಹೆಚ್​ಸಿ ಮಹದೇವಪ್ಪ

ನಾವು ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳು ಮಾತ್ರ ಆಗಿದೆ. ಹೀಗಾಗಿ ಜನರ ಮುಂದೆ ಹೇಳಿಕೊಳ್ಳಲು ಅವರಿಗೆ ಏನೂ ಇಲ್ಲ. ಇದರಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಅಪನಂಬಿಕೆ ಬರುವಂತೆ ಮಾಡುತ್ತಿದ್ದಾರೆಂದು ಎಂದು ಬಿಜೆಪಿ ಆರೋಪಗಳಿಗೆ ಸಚಿವ ಹೆಚ್​ಸಿ ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರದ್ದು ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ; ಕಿಡಿಕಾರಿದ ಸಚಿವ ಹೆಚ್​ಸಿ ಮಹದೇವಪ್ಪ
ಹೆಚ್​ಸಿ ಮಹಾದೇವಪ್ಪ
Follow us
ಪ್ರಸನ್ನ ಗಾಂವ್ಕರ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 11, 2023 | 3:34 PM

ಬೆಂಗಳೂರು, ಆ.11: ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡುವ ಪ್ರಯತ್ನದಲ್ಲಿದ್ದಾರೆ. ಯಾವುದೇ ಸಾಕ್ಷಿ ಆಧಾರ ಇಲ್ಲದೇ ಇರುವ ಆರೋಪವನ್ನು ಮಾಡುತ್ತಿದ್ದಾರೆಂದು ಸಚಿವ ಹೆಚ್​ಸಿ ಮಹದೇವಪ್ಪ(HC Mahadevappa) ಅವರು ತಿರುಗೇಟು (BJP) ಕೊಟ್ಟಿದ್ದಾರೆ. ಸೋಲಿನ ಹತಾಷೆಯಿಂದ ಹೀಗೆ ಮಾತಾಡುತ್ತಿದ್ದಾರೆ. ಇದ್ದಾಗ ಸರಿಯಾಗಿ ಅಧಿಕಾರ ಮಾಡಲಿಲ್ಲ. ಜನರು ಹಿಂದಿನ ನಮ್ಮ ಸಾಧನೆ ನೋಡಿ ಈಗ ನಮಗೆ ಅಧಿಕಾರ ಕೊಟ್ಟಿದ್ದಾರೆ. ಬರೊಬ್ಬರಿ 135 ಜನರನ್ನು ಗೆಲ್ಲಿಸಿದ್ದಾರೆ. ಇದರಿಂದ ಅವರ ವೈಪಲ್ಯ ಗೊತ್ತಾಗುತ್ತಿದೆಯೆಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ನಾವು ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳು ಮಾತ್ರ ಆಗಿದೆ. ಹೀಗಾಗಿ ಜನರ ಮುಂದೆ ಹೇಳಿಕೊಳ್ಳಲು ಅವರಿಗೆ ಏನೂ ಇಲ್ಲ. ಇದರಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಅಪನಂಬಿಕೆ ಬರುವಂತೆ ಮಾಡುತ್ತಿದ್ದು, ಅದು ಆಗಲ್ಲ. ಮೇಲ್ನೋಟಕ್ಕೆ ಅವರಿಗೆ ಹೊಟ್ಟೆ ಹುರಿ ಆಗಿದೆ. ಇನ್ನು ಕೇಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬೇರೆ ಹತ್ತಿರ ಬರುತ್ತಿದೆ. ಅವರಿಗೆ ಮಾತನಾಡಲು ಬೇರೆ ವಿಷಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಗುತ್ತಿಗೆದಾರರ ಸಂಘದಿಂದ ಇಂದು ಸುದ್ದಿಗೋಷ್ಠಿ, ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಈಗ ಏನು ಹೇಳ್ತಾರೆ?

ಇದೆ ವೇಳೆ ಕೆಂಪಣ್ಣ ಡೆಡ್ ಲೈನ್ ವಿಚಾರ ‘ ಡೆಡ್ ಲೈನ್ ಕೊಡಲು ಕೆಂಪಣ್ಣ ಸಂವಿಧಾನಿಕ ಹುದ್ದೆಯಲ್ಲಿ ಇಲ್ಲ. ಬಿಡುಗಡೆ ಮಾಡಿ ಎಂದು ಮನವಿ ಮಾಡಬಹುದು ಅಷ್ಟೆ. ಸಮಸ್ಯೆ ಆಗಿರಬಹುದು. ಆದರೆ, ಸರಿ ಆಗುತ್ತದೆ. ಅಜ್ಜಯ್ಯ ಮಠಕ್ಕೆ ಬರಲಿ ಅಂದರೆ ಅಲ್ಲಿಗೆ ಹೋದರೆ ಸತ್ಯ ಆಚೆಗೆ ಬರುತ್ತದೆಯಾ?. ಅದೆಲ್ಲ ಮೂಡ ನಂಬಿಕೆ ಅಷ್ಟೆ, ಸಂವಿಧಾನದ ಮೇಲೆ ನಂಬಿಕೆ ಇಡಬೇಕು. ಹಿಂದೆ ಆಗಿರುವ ಕೆಲಸ ಸರಿ ಇದೆಯೋ ಇಲ್ಲವೋ ಎನ್ನುವುದು ತಪ್ಪಾ?, ಸಾಕ್ಷಿ ಆಧಾರ ಇದ್ದರೆ ಮಾತಾಡಬೇಕು. ದಾಖಲೆ ಇದ್ದರೆ ಕೊಡಲಿ ತನಿಖಾ ಸಂಸ್ಥೆಗಳಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿಗಳು ದಿವಾಳಿ ಎಂದು ಹೇಳಿರುವ ವಿಚಾರ ‘ಪ್ರಬಲ ಆಗಿರುವ ಆರ್ಥಿಕ ವ್ಯವಸ್ಥೆಯಲ್ಲಿ ಬಡತನ ಎಷ್ಟು ನಿರ್ಮೂಲನೆ ಮಾಡಿದ್ದಾರೆ. 10 ವರ್ಷದಲ್ಲಿ ಎಷ್ಟು ಜನ ಬಡತನದಿಂದ ಮೇಲೆ ಬಂದಿದ್ದಾವೆ. ಆದರೆ, ಗ್ಯಾರಂಟಿಯಿಂದ ಪ್ರತಿ ಕುಟುಂಬಕ್ಕೆ 4ರಿಂದ5 ಸಾವಿರ ಸಿಗಲಿದೆ. ಇದು ಆರ್ಥಿಕ ಸ್ವಾವಲಂಬನೆ ತರುವಂತದ್ದು. ಇದಕ್ಕೆ ಬೇರೆ ಸಂಪನ್ಮೂಲಗಳ ಮೂಲಕ ಆದಾಯ ಸಂಗ್ರಹ ಮಾಡಬೇಕು. ಅದಾನಿ, ಅಂಬಾನಿಗೆ ಕೊಟ್ಟಾಗ ಅಭಿವೃದ್ಧಿ ಆಗೋಯ್ತಾ?, ಪೇ ಸಿಎಸ್ ಅಭಿಯಾನ ಬಿಜೆಪಿ ಅವರು ಯಾವಾಗ ಸತ್ಯ ಹೇಳಿದ್ದಾರೆ. ಯಾವಾಗಲೂ ಸುಳ್ಳು ಹೇಳ್ತಾನೆ ಇರ್ತಾರೆ. ಯಾವಾಗ ಅಧಿಕಾರ ಇರೋದಿಲ್ವೋ ಅವಾಗೆಲ್ಲ ಹೀಗೆ ಮಾಡುವುದು ಎಂದಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್