ಆತ ನ್ಯಾಯವಾಗಿದ್ದರೆ ಯಾಕೆ ಜೈಲಿಗೆ ಹೋಗುತ್ತಿದ್ದ?: ಡಿಕೆ ಶಿವಕುಮಾರ್ ವಿರುದ್ಧ ರಾಯಚೂರು ಗುತ್ತಿಗೆದಾರರ ಆಕ್ರೋಶ

ಬಿಬಿಎಂಪಿ ಕಾಮಗಾರಿ ಬಾಕಿ ಬಿಲ್ ಬಿಡುಗಡೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಕೇಳಿಬಂದಿದೆ. ಇದೀಗ ಡಿಸಿಎಂ ವಿರುದ್ಧ ರಾಯಚೂರು ಜಿಲ್ಲಾ ಗುತ್ತಿಗೆದಾರರು ಆಕ್ರೋಶ ಹೊರಹಾಕಿದ್ದಾರೆ.

ಆತ ನ್ಯಾಯವಾಗಿದ್ದರೆ ಯಾಕೆ ಜೈಲಿಗೆ ಹೋಗುತ್ತಿದ್ದ?: ಡಿಕೆ ಶಿವಕುಮಾರ್ ವಿರುದ್ಧ ರಾಯಚೂರು ಗುತ್ತಿಗೆದಾರರ ಆಕ್ರೋಶ
ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ ರಾಯಚೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗಪ್ಪ ಗಿರಿಣಿ
Follow us
| Updated By: Rakesh Nayak Manchi

Updated on: Aug 11, 2023 | 2:42 PM

ರಾಯಚೂರು, ಆಗಸ್ಟ್ 11: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D. K. Shivakumar) ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಿಲ್ ಬಾಕಿ ಇರಿಸಿ ಕಮಿಷನ್​ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಶಿವಕುಮಾರ್ ವಿರುದ್ಧ ರಾಯಚೂರು (Raichur) ಜಿಲ್ಲಾ ಗುತ್ತಿಗೆದಾರರು ಸಿಡಿದೆದ್ದಿದ್ದಾರೆ.

ಆತ ನ್ಯಾಯವಾಗಿದ್ದರೆ ಆತ ಯಾಕೆ ಜೈಲಿಗೆ ಹೋಗುತ್ತಿದ್ದ? ಆತ ಎಲ್ಲ ದಾಖಲೆ ಕೊಟ್ಟಿದ್ದಿದ್ದರೆ ಆತ ಯಾಕೆ ಒಂಬತ್ತು ತಿಂಗಳು ಜೈಲಿನಲ್ಲಿ ಇರುತ್ತಿದ್ದ ಎಂದು ರಾಯಚೂರು ಜಿಲ್ಲೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗಪ್ಪ ಗಿರಿಣಿ ಅವರು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇವು ಎಲ್ಲಾ ಕರ್ನಾಟಕ ರಾಜ್ಯದಲ್ಲಿ ನಡೆಯಲ್ಲ. ನೀನು ದುರಹಂಕಾರ ಇವೆಲ್ಲಾ ಬಿಟ್ಟು ಬಿಡು. ಗುತ್ತಿಗೆದಾರರಿಗೆ ಸರ್ಕಾರ ತರುವುದು ಗೊತ್ತು ಬೀಳಿಸುವುದು‌ ಗೊತ್ತು. ಹಿಂದೆ ಬಿಜೆಪಿ ಸರ್ಕಾರ ಬೀಳಿಸಿದ್ದೆವು, ನೀವು ಹೀಗೆ ಮಾಡಿದರೆ ಲೋಕಸಭೆಯಲ್ಲಿ ನಿಮ್ಮನ್ನ ಹಾಳು ಮಾಡುತ್ತೇವೆ ಎಂದು ನಾಗಪ್ಪ ಗಿರಿಣಿ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸರ್ಕಾರದ ಕುತ್ತಿಗೆಗೆ ಗುತ್ತಿಗೆ ಕುಣಿಕೆ! ಬೊಮ್ಮಾಯಿ, ಅಶೋಕ್ ಜತೆ ಗುತ್ತಿಗೆದಾರರ ಸಮಾಲೋಚನೆ, ಪಟ್ಟು ಬಿಡದ ಡಿಕೆ ಶಿವಕುಮಾರ್

ಕಾಮಗಾರಿಯ 46 ಸಾವಿರ ಕೋಟಿ ಬಾಕಿಬಿದೆ. 25-30 ಸಾವಿರ ಕೋಟಿ ಕೊಟ್ಟರೆ ಗುತ್ತಿಗೆದಾರರು ಬದುಕುತ್ತೇವೆ. ಜನವರಿಯಿಂದ ಹಣ ಬಂದಿಲ್ಲ. ಎಂಟು ತಿಂಗಳಾಯ್ತು. ಬಡ್ಡಿ ಕಟ್ಟಿ ಕೆಲಸ ಮಾಡಿಸಿದ್ದೇವೆ. ಇಎಂಐ ಕಟ್ಟಲಾಗದೇ ವಾಹನಗಳು ಸೀಜ್ ಆಗಿವೆ ಎಂದು ಅವರು ಅಸಾಮಾಧನ ಹೊರಹಾಕಿದರು.

ನಮ್ಮ ಜಿಲ್ಲೆಯ ಗುತ್ತಿಗೆದಾರರಿಗೆ 500-600 ಕೋಟಿ ಬರಬೇಕು. ಇದಕ್ಕೆ ದುಡ್ಡು ಕೊರತೆಯಿಲ್ಲ. ಕೆಕೆಆರ್​ಡಿಪಿಗೆ ಹೋಗಿ ನಮ್ಮ ಸಂಘದ ಪ್ರಮುಖರು ಬೇಟಿಯಾಗಿದ್ದಾರೆ. ಅಲ್ಲಿನ ಅಧಿಕಾರಿ 1900 ಕೋಟಿ ರೆಡಿ‌ ಇದೆ, ನಂದೇನು ತಪ್ಪಿಲ್ಲ ಅಂದಿದ್ದಾರೆ. ಆದರೆ ಇದರಲ್ಲೇನು ಇಂಟರೆಸ್ಟ್ ತೋರಿಸುತ್ತೀರಿ ಎಂದು ಕೇಳಿದ್ದಾರೆ. ಹಾಗಾದರೆ ಇದಲ್ಲಿ ನಿಂದೇನಿದೆಯಪ್ಪ ಇಂಟರೆಸ್ಟ್? ನಿಮ್ಮದು, ಸರ್ಕಾರದ್ದು ಇಂಟರೆಸ್ಟ್ ಬೇಡ. ನಮ್ಮ ಹಣ ಕೊಡಿ ಅಂತ ಅಧಿಕಾರಿ ವಿರುದ್ಧ ನಾಗಪ್ಪ ಗಿರಿಣಿ ಆಕ್ರೋಶ ಹೊರಹಾಕಿದರು. ಅಲ್ಲದೆ, ಇಂಟರೆಸ್ಟ್ ಅಂದರೆ ಪರ್ಸೆಂಟೇಜ್‌. ಇದನ್ನು ಬಿಡಿಸಿ ಹೇಳುವ ಹಾಗಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?