ಬಿಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಸಿಡಿಮಿಡಿ
ಜನವರಿ 22ರಂದು ಅಯೋಧ್ಯೆಗೆ ತೆರಳುವ ಯಾತ್ರಿಗಳಿಗೆ ರಕ್ಷಣೆ ನೀಡಬೇಕು. ಗೋಧ್ರಾ ರೀತಿ ದುರಂತ ಸಂಭವಿಸುವ ಮಾಹಿತಿ ಇದೆ ಎಂಬ ಎಂಎಲ್ಸಿ ಬಿಕೆ ಹರಿಪ್ರಸಾದ್ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹಿತಕರ ಘಟನೆಗಳು ನಡೆದರೇ ಅದಕ್ಕೆ ಬಿ.ಕೆ.ಹರಿಪ್ರಸಾದ್ ಕಾರಣ. ಕೂಡಲೇ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಬಂಧನ ಆಗಬೇಕು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಆಗ್ರಹಿಸಿದರು.
ಬೆಂಗಳೂರು, ಜನವರಿ 03: ಜನವರಿ 22ರಂದು ಅಯೋಧ್ಯೆಗೆ ತೆರಳುವ ಯಾತ್ರಿಗಳಿಗೆ ರಕ್ಷಣೆ ನೀಡಬೇಕು. ಗೋಧ್ರಾ ರೀತಿ ದುರಂತ ಸಂಭವಿಸುವ ಮಾಹಿತಿ ಇದೆ ಎಂಬ ಎಂಎಲ್ಸಿ ಬಿಕೆ ಹರಿಪ್ರಸಾದ್ (BK Hariprasad) ಹೇಳಿಕೆಗೆ ರಾಜ್ಯ ಬಿಜೆಪಿ (BJP) ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹಿತಕರ ಘಟನೆಗಳು ನಡೆದರೇ ಅದಕ್ಕೆ ಬಿ.ಕೆ.ಹರಿಪ್ರಸಾದ್ ಕಾರಣ. ಕೂಡಲೇ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಬಂಧನ ಆಗಬೇಕು ಎಂದು ಪೊಲೀಸ್ ಆಯುಕ್ತರಿಗೆ ಆಗ್ರಹಿಸುತ್ತೇನೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿ.ಕೆ.ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ (Sadananda Gowda) ಆಗ್ರಹಿಸಿದರು.
ಕರ್ನಾಟಕದ ಹಿಂದೂಗಳಿಗೆ ಹೆದರಿಸುತ್ತಿದ್ದೀರಾ: ಅರವಿಂದ ಬೆಲ್ಲದ
ಗೋಧ್ರಾದಲ್ಲಿ ಮುಸ್ಲಿಮರು ಹಿಂದೂಗಳನ್ನು ಸುಟ್ಟರು. ಸರ್ಕಾರದ ಜವಾಬ್ದಾರಿ ಹಿಂದೂಗಳ ರಕ್ಷಣೆ ಮಾಡುವುದು. ಹರಿಪ್ರಸಾದ ಹೀಗೆ ಹೇಳುತ್ತಾರೆಂದರೇ ಸರ್ಕಾರ ಏನು ಮಾಡುತ್ತಿದೆ? ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಗೋಧ್ರಾದಲ್ಲಿ ಹಿಂದೂಗಳನ್ನು ಸುಟ್ಟವರು ಮುಸ್ಲಿಂರು ಅಲ್ವಾ?ಕರ್ನಾಟಕದಲ್ಲಿಯೂ ಹಿಂದೂಗಳನ್ನೂ ಹಾಗೆ ಹೆದರಿಸುತ್ತಿದ್ದೀರಾ? ಗೋಧ್ರಾ ದಂಗೆ ಅಂದ್ರೆ ಏನು? ಹಿಂದೂಗಳನ್ನು ಸುಡ್ತೀರಾ ನೀವು? ಜವಾಬ್ಧಾರಿ ಇಲ್ಲವಾ ನಿಮಗೆ? ಗೋಧ್ರಾ ಹೆದರಿಕೆ ಹಾಕುತ್ತೀರಾ ನಮಗೆ? ಬೆದರಿಕೆ ಹಾಕಿ ನೋಡುವಾ? ಎಂದು ಶಾಸಕ ಅರವಿಂದ ಬೆಲ್ಲದ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 22 ರಂದು ಗೋಧ್ರಾ ರೀತಿಯ ಅಪಾಯ ಸಂಭವಿಸುವ ಮಾಹಿತಿ ಇದೆ, ಅಯೋಧ್ಯ ಯಾತ್ರಿಗಳಿಗೆ ಸರ್ಕಾರ ರಕ್ಷಣೆ ನೀಡಲಿ: ಬಿಕೆ ಹರಿಪ್ರಸಾದ್
ಹರಿಪ್ರಸಾದ್ಗೆ ಮಂಪರು ಪರೀಕ್ಷೆ ಮಾಡಿಸಬೇಕು: ಸಂಗಣ್ಣ ಕರಡಿ
ಕಾಂಗ್ರೆಸ್ ಎಂಎಲ್ಸಿ ಹರಿಪ್ರಸಾದ್ಗೆ ಮಂಪರು ಪರೀಕ್ಷೆ ಮಾಡಿಸಬೇಕು. ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಜ.22ರಂದು ಏನಾದರೂ ಘಟನೆಗಳಾದರೇ ಅದಕ್ಕೆ ಹರಿಪ್ರಸಾದ್ ಕಾರಣರಾಗುತ್ತಾರೆ. ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರಸೇವಕರನ್ನು ಬಂಧನ ಮಾಡುತ್ತಿದೆ. ಸರ್ಕಾರ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣವನ್ನು ಓಪನ್ ಮಾಡಲಿ ನೋಡೋಣ. ನಿಮಗೆ ಕಾನೂನು ಬಗ್ಗೆ ಕಾಳಜಿ ಇದ್ದರೇ ಆ ಪ್ರಕರಣಗಳನ್ನ ರೀಓಪನ್ ಮಾಡಿ ಎಂದು ಬಿಕೆ ಹರಿಪ್ರಸಾದ್ ವಿರುದ್ಧ ಸಂಸದ ಸಂಗಣ್ಣ ಕರಡಿ ವಾಗ್ದಾಳಿ ಮಾಡಿದರು.c
ಧಾರ್ಮಿಕ ಕಾರ್ಯಕ್ರಮ ಅಲ್ಲ ಅಂತ ಅವರಿಗೇಕೆ ಅನ್ನಿಸಿತು: ಸಿಟಿ ರವಿ
ಅನ್ಯಾಯ, ಸುಳ್ಳು, ಮೋಸ ಇದು ಧರ್ಮವಲ್ಲ. ಅದು ಧಾರ್ಮಿಕ ಕಾರ್ಯಕ್ರಮ ಅಲ್ಲ ಅಂತ ಅವರಿಗೇಕೆ ಅನ್ನಿಸಿತು. ದೇವರು ಅವಕಾಶ ನೀಡಿದಾಗ ಇವರು ಸತ್ಯ ಎತ್ತಿ ಹಿಡಿಯುವ ಕೆಲಸ ಮಾಡ್ಲಿಲ್ಲ. ಈಗ ಅವರಿಗೆ ಹೊಟ್ಟೆ ಉರಿಯಾಗುತ್ತಿದೆ. ಅವರೇ ಈ ಕೆಲಸ ಮಾಡಿದ್ದರೇ ಇತಿಹಾಸದಲ್ಲಿ ಅವರೇ ಅಜರಾಮರರಾಗಿ ಉಳಿಯುತ್ತಿದ್ದರು. ಅಂಬೇಡ್ಕರ್ ಅವರ ಪಂಚನಾಮಗಳನ್ನು ಅವರೇ ಅಭಿವೃದ್ಧಿ ಮಾಡಬೇಕಿತ್ತು. ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ 50 ಎಕರೆ ಜಾಗ ನೀಡಿದ್ದರೇ, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ನವರು ಅಪಮಾನ ಮಾಡಿದ್ದಾರೆ ಎಂತ ಹೇಳಿಸಿಕೊಳ್ಳುತ್ತಿರಲಿಲ್ಲ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದರು.
ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಿಸಿದ್ದರೇ ಕರಸೇವೆ ಅಗತ್ಯವೇ ಇರುತ್ತಿರಲಿಲ್ಲ. ಕಾಶಿ ಕಾರಿಡಾರ್ ಅವರೇ ಮಾಡಿ ಗಂಗಾರತಿ ಮಾಡಬೇಕಿತ್ತು. ಮೋದಿ ಹಿಂದೂ ಹೃದಯ ಸಾಮ್ರಾಟ್ ಅಂತ ಕರೆಸಿಕೊಳ್ಳುತ್ತಿರಲ್ಲ. ನೆಹರೂ ಅವರೇ ಹಿಂದೂ ಹೃದಯ ಸಮ್ರಾಟ್ ಆಗಬಹುದಿತ್ತು, ಅವರು ಮಾಡ್ಲಿಲ್ಲ. ತಪ್ಪು ಮಾಡಿದವರಿಗೆ ಬಿಡಲು ಆಗುತ್ತಾ ಅಂತ ಸಿದ್ದಾರಾಮಯ್ಯ ಎಂದಿದ್ದಾರೆ. ಡಿಜೆಹಳ್ಳಿ-ಕೆಜೆಹಳ್ಳಿಗೆ ಬೆಂಕಿ ಹಾಕಿದವರ ಬಿಡಿ ಎಂದು ನಿಮ್ಮ ಮಂತ್ರಿಯೇ ಶಿಫಾರಸ್ಸು ಮಾಡಿದ್ರಲ್ಲಾ? ಮೈಸೂರಿನಲ್ಲಿ ಕೋಮು ಗಲಭೆ ಮಾಡಿದ ಎಸ್.ಡಿ.ಪಿ.ಐ. ಹಾಗೂ ಪಿ.ಎಫ್.ಐ ಕೇಸ್ಗಳನ್ನ ನಿಮ್ಮ ಸರ್ಕಾರವೇ ವಿಥ್ ಡ್ರಾ ಮಾಡಿತಲ್ಲ ಅವರು ತಪ್ಪು ಮಾಡಿದವರು ಎಂದು ಅನ್ನಿಸಲಿಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Wed, 3 January 24