B.L. Santhosh: ಮುಂದಿನ ಮುಖ್ಯಮಂತ್ರಿ ಎಂದೇ ಜನ ಪರಿಚಿತರಾದ ಬಿ.ಎಲ್.ಸಂತೋಷ್ ಕರ್ನಾಟಕದತ್ತ ಮುಖ ಮಾಡಿಲ್ಲ! ಈಗೆಲ್ಲಿದ್ದಾರೆ?

| Updated By: preethi shettigar

Updated on: Jul 27, 2021 | 12:36 PM

ನಾಳೆ‌ ಜಾರ್ಕಾಂಡ್ ಪ್ರವಾಸಕ್ಕೆ ತೆರಳಲಿರುವ ಬಿ.ಎಲ್‌. ಸಂತೋಷ್, ಕರ್ನಾಟಕದತ್ತ ಮಾತ್ರ ಬಂದಿಲ್ಲ. ಆದರೆ ಈಗಲೂ ಕೂಡ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಬಿ.ಎಲ್‌.ಸಂತೋಷ್ ಅಲಂಕರಿಸುತ್ತಾರೆ ಎಂಬ ಬಲವಾದ ಮಾತು ಕೇಳಿ ಬರುತ್ತಿದೆ ಎನ್ನುವುದು ಮಾತ್ರ ಸತ್ಯ.

B.L. Santhosh: ಮುಂದಿನ ಮುಖ್ಯಮಂತ್ರಿ ಎಂದೇ ಜನ ಪರಿಚಿತರಾದ  ಬಿ.ಎಲ್.ಸಂತೋಷ್ ಕರ್ನಾಟಕದತ್ತ ಮುಖ ಮಾಡಿಲ್ಲ! ಈಗೆಲ್ಲಿದ್ದಾರೆ?
ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್
Follow us on

ದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್​. ಯಡಿಯೂರಪ್ಪ ರಾಜಿನಾಮೆ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದ ಕಾಲದಿಂದ ಹಿಡಿದು, ನಿನ್ನೆ ( ಜುಲೈ 26, ಸೋಮವಾರ) ಸಿಎಂ ಸ್ಥಾನಕ್ಕೆ ಬಿ.ಎಸ್​.ಯಡಿಯೂರಪ್ಪ ರಾಜಿನಾಮೆ ಕೊಟ್ಟ ನಂತರವೂ ಮುಖ್ಯಮಂತ್ರಿ (Karnataka Chief Minister) ಸ್ಥಾನ ಯಾರಿಗೆ ಎಂಬ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ಅಂತೆಯೇ ಸಿಎಂ ಯಾರಾಗುತ್ತಾರೆ ಎಂಬ ಊಹಾ ಪಟ್ಟಿಯೂ ಜೋರಾಗಿದೆ. ಹೀಗಿರುವಾಗ ಈ ಮುಖ್ಯಮಂತ್ರಿ ಸ್ಥಾನದ ನಿರೀಕ್ಷಣಾ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೆಸರು ಬಹುಮುಖ್ಯವಾಗಿ ಕೇಳಿಬರುತ್ತಿದೆ. ಆದರೆ ಮುಂದಿನ ಮುಖ್ಯಮಂತ್ರಿ ಎಂದೇ ಜನ ಪರಿಚಿತರಾದ ಬಿ.ಎಲ್.ಸಂತೋಷ್ ಕರ್ನಾಟಕದತ್ತ ಮುಖ ಮಾಡಿಲ್ಲ.

ದೆಹಲಿಯಲ್ಲಿಯೇ ವಾಸ್ತವ್ಯ ಹೂಡಿರುವ ಬಿ.ಎಲ್ ಸಂತೋಷ್. ದೆಹಲಿ ಬಿಜೆಪಿ ಕಚೇರಿಯಿಂದಲೇ ಕೊರೊನಾ ಸಂಬಂಧಿತ ವಿಡಿಯೋ ಕಾನ್ಪರೆನ್ಸ್​ನಲ್ಲಿ ಇಂದು ಭಾಗಿಯಾಗಿದ್ದಾರೆ. ನಾಳೆ‌ ಜಾರ್ಕಾಂಡ್ ಪ್ರವಾಸಕ್ಕೆ ತೆರಳಲಿರುವ ಬಿ.ಎಲ್‌. ಸಂತೋಷ್, ಕರ್ನಾಟಕದತ್ತ ಮಾತ್ರ ಬಂದಿಲ್ಲ. ಆದರೆ ಈಗಲೂ ಕೂಡ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಬಿ.ಎಲ್‌.ಸಂತೋಷ್ ಅಲಂಕರಿಸುತ್ತಾರೆ ಎಂಬ ಬಲವಾದ ಮಾತು ಕೇಳಿ ಬರುತ್ತಿದೆ ಎನ್ನುವುದು ಮಾತ್ರ ಸತ್ಯ.

ಕೆಲ ಹೊತ್ತಿನಲ್ಲೇ ಬೆಂಗಳೂರಿಗೆ ಆಗಮಿಸಲಿರುವ ಅರುಣ್​ ಸಿಂಗ್
ರಾಜ್ಯಕ್ಕೆ ಕೆಲ ಹೊತ್ತಿನಲ್ಲೇ ಬಿಜೆಪಿ‌ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ಇವರ ಜತೆಗೆ ಸಹ ಉಸ್ತುವಾರಿ ಅರುಣಾದೇವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಾರಸ್ ಜೈನ್, ಕೆಲ ಹೊತ್ತಿನಲ್ಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 12 ಗಂಟೆಯ ಏರ್ ಇಂಡಿಯಾ ವಿಮಾನದಲ್ಲಿ ನಾಯಕರು ಬೆಂಗಳೂರಿಗೆ ಬರುತ್ತಿದ್ದಾರೆ.

ಬೆಂಗಳೂರಿಗೆ ಆಗಮಿಸುತ್ತಿರುವ ಬಿಜೆಪಿ ನಾಯಕ ಸಿ.ಟಿ.ರವಿ
ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇರುವ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕ ಸಿ.ಟಿ.ರವಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.ಈಗಾಗಲೇ ದೆಹಲಿಯ ಕೇಂದ್ರ ಬಿಜೆಪಿ ಕಚೇರಿಯಿಂದ ಸಿ.ಟಿ.ರವಿ
ಬೆಂಗಳೂರಿಗೆ ಹೊರಟಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಕಿಶನ್ ರೆಡ್ಡಿ ಪ್ರಯಾಣ
ಕೇಂದ್ರದ ವೀಕ್ಷಕರಾಗಿ ಕಿಶನ್ ರೆಡ್ಡಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 2 ಗಂಟೆಗೆ ದೆಹಲಿಯಿಂದ ಪ್ರಯಾಣ ಬೆಳೆಸಲಿರುವ ಕಿಶನ್ ರೆಡ್ಡಿ, ಸಂಜೆ 5 ಗಂಟೆಗೆ ಬೆಂಗಳೂರು ತಲುಪಲಿದ್ದಾರೆ. ಧರ್ಮೇಂದ್ರ ಪ್ರಧಾನ್ ಕೂಡ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.

ಕೆಲವೇ ಗಂಟೆಗಳಲ್ಲಿ ಸಿಎಂ ಯಾರೆಂಬುದು ಗೊತ್ತಾಗುತ್ತದೆ: ಶಾಸಕ ರಾಜ್​ಕುಮಾರ್ ಪಾಟೀಲ್
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಸಕ ರಾಜ್​ಕುಮಾರ್ ಪಾಟೀಲ್, ದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯುತ್ತಿದೆ. ಸಭೆ ಬಳಿಕ ವೀಕ್ಷಕರು ಯಾರು ಬರುತ್ತಾರೆಂದು ತಿಳಿಯುತ್ತದೆ. ಹೈಕಮಾಂಡ್ ಉತ್ತಮ ಸಚಿವ ಸಂಪುಟವನ್ನು ಮಾಡಲಿದೆ. ಅವಕಾಶ ಕೊಟ್ಟರೆ ಸಚಿವ ಸ್ಥಾನದ ಜವಾಬ್ದಾರಿ ನಿಭಾಯಿಸುವೆ. ಕೆಲವೇ ಗಂಟೆಗಳಲ್ಲಿ ಸಿಎಂ ಯಾರೆಂಬುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ಬರಲಿದೆ. ಪಾರ್ಟಿಯಲ್ಲಿ ಯಾರೆಲ್ಲಾ ಜವಾಬ್ದಾರಿ ತೆಗೆದುಕೊಳ್ಳಬೇಕೆನ್ನುವ ತೀರ್ಮಾನ ಕೇಂದ್ರ ತೆಗೆದುಕೊಳ್ಳಲಿದೆ. ಹೊಸ ಸಿಎಂ ನಂತರ ಬಿಎಸ್​ವೈ ಪಾತ್ರ, ನಮ್ಮೆಲ್ಲರ ಸರ್ವೋಚ್ಛ ನಾಯಕ. ಅವರ ಮಾರ್ಗದರ್ಶನ ಸದಾ ನಮ್ಮೊಂದಿಗೆ ಮತ್ತು ನಮ್ಮ ಪಾರ್ಟಿಗೆ ಇರುತ್ತದೆ. ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ ಎಂದು ಶಾಸಕ ರಾಜ್​ಕುಮಾರ್ ಪಾಟೀಲ್ ಹೇಳಿದ್ದಾರೆ.

ಜಾತಿ ಆಧಾರಿತ ಸಿಎಂ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಜಾತಿ ಮೀರಿ ಸಿಎಂ ಆಗುವ ಸಾಧ್ಯತೆಯಿದೆ.
ಇಲ್ಲಿ ಯಾವುದೇ ಜಾತಿ ಸಮೀಕರಣವಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಯಾರು ಕಟ್ಟಿ ಬೆಳಿಸಿ, ಉತ್ತಮ ಸರ್ಕಾರ ನೀಡಲಿದ್ದಾರೆ ಎಂಬುವುದೇ ಸಿಎಂ ಮಾನದಂಡ ಎಂದು ಶಾಸಕ ರಾಜ್​ಕುಮಾರ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ:
Next CM of Karnataka 2021: ಸಂತೋಷ್​, ಕಾಗೇರಿ, ಉದಾಸಿ, ನಿರಾಣಿ, ಬೊಮ್ಮಾಯಿ, ಬೆಲ್ಲದ್; ಯಾರಾಗ್ತಾರೆ ಕರ್ನಾಟಕದ ನೂತನ ಮುಖ್ಯಮಂತ್ರಿ?

Karnataka Politics: ನಾಳೆ ಬಿಜೆಪಿ ಸಂಸದೀಯ ಮಂಡಳಿ ಸಭೆ; ಈ 9 ನಾಯಕರಲ್ಲಿ ಯಾರಾಗ್ತಾರೆ ಕರ್ನಾಟಕದ ಹೊಸ ಮುಖ್ಯಮಂತ್ರಿ?

Published On - 12:00 pm, Tue, 27 July 21