Next CM of Karnataka 2021: ಸಂತೋಷ್​, ಕಾಗೇರಿ, ಉದಾಸಿ, ನಿರಾಣಿ, ಬೊಮ್ಮಾಯಿ, ಬೆಲ್ಲದ್; ಯಾರಾಗ್ತಾರೆ ಕರ್ನಾಟಕದ ನೂತನ ಮುಖ್ಯಮಂತ್ರಿ?

New Chief Minister of Karnataka: ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಬಿ.ಎಲ್‌.ಸಂತೋಷ್, ಪ್ರಲ್ಹಾದ್‌ ಜೋಶಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ್‌ ನಿರಾಣಿ, ಬಸವರಾಜ್‌ ಬೊಮ್ಮಾಯಿ, ಶಿವಕುಮಾರ್‌ ಉದಾಸಿ, ಅರವಿಂದ ಬೆಲ್ಲದ್ ಹೆಸರುಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ.

Next CM of Karnataka 2021: ಸಂತೋಷ್​, ಕಾಗೇರಿ, ಉದಾಸಿ, ನಿರಾಣಿ, ಬೊಮ್ಮಾಯಿ, ಬೆಲ್ಲದ್; ಯಾರಾಗ್ತಾರೆ ಕರ್ನಾಟಕದ ನೂತನ ಮುಖ್ಯಮಂತ್ರಿ?
ಬಿ ಎಸ್​ ಯಡಿಯೂರಪ್ಪ - ಬಿ ಎಲ್​ ಸಂತೋಷ್
Follow us
TV9 Web
| Updated By: Skanda

Updated on:Jul 27, 2021 | 8:46 AM

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣ ಮಹತ್ತರ ಬದಲಾವಣೆಯೊಂದಕ್ಕೆ ಮೈಯೊಡ್ಡಿದೆ. ಬಿ.ಎಸ್.ಯಡಿಯೂರಪ್ಪ (BS Yediyurappa) ಇಲ್ಲದಿದ್ದರೆ ರಾಜ್ಯ ಬಿಜೆಪಿಗೆ ಅಸ್ತಿತ್ವವೇ ಇಲ್ಲ ಎಂಬ ಆತಂಕವಾದದ ನಡುವೆಯೂ ಯಡಿಯೂರಪ್ಪ ಸಿಎಂ (Karnataka Chief Minister) ಗಾದಿಯಿಂದ ನಿರ್ಗಮಿಸಿದ್ದಾರೆ. ಹೈಕಮಾಂಡ್ ಒತ್ತಡಕ್ಕೆ ಮಣಿದು ಯಡಿಯೂರಪ್ಪ ರಾಜೀನಾಮೆ (Resign) ನೀಡಲಿದ್ದಾರೆ ಎಂಬ ಮಾತು ಅನೇಕ ದಿನಗಳಿಂದ ಚಾಲ್ತಿಯಲ್ಲಿ ಇತ್ತಾದರೂ ವಿದಾಯ ಭಾಷಣದಲ್ಲಿ ಬಿಎಸ್​ವೈ (BSY) ಇದು ಸ್ವ ಇಚ್ಛೆಯ ರಾಜೀನಾಮೆ ಎಂದು ಘೋಷಿಸಿಕೊಂಡಿದ್ದಾರೆ. ಅದರ ಒಳಲೆಕ್ಕಾಚಾರಗಳು ಏನೇ ಇದ್ದರೂ ಯಡಿಯೂರಪ್ಪ ಎಂಬ ದೈತ್ಯ ನಾಯಕನೋರ್ವ ರಾಜ್ಯ ರಾಜಕಾರಣದ ಜಗುಲಿಯಿಂದ ಎದ್ದು ಹೊರಟಿದ್ದಂತೂ ಸತ್ಯ. ಇದೀಗ ಅವರ ರಾಜೀನಾಮೆ ಬೆನ್ನಲ್ಲೇ ಮುಂದಿನ ಸಿಎಂ (Next CM) ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಬಿಎಸ್‌ವೈ ರಾಜೀನಾಮೆ ಕೊಡುವುದಕ್ಕೂ ಮೊದಲೇ ಮುಂದಿನ ಸಿಎಂ ಯಾರು ಎನ್ನುವ ಲೆಕ್ಕಾಚಾರಗಳು ಶುರುವಾಗಿದ್ದವಾದರೂ ರಾಜೀನಾಮೆ ನಂತರ ಅದು ಮತ್ತಷ್ಟು ಕಳೆಗಟ್ಟಿದೆ.

ಕರ್ನಾಟಕ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಭಾರೀ ಪೈಪೋಟಿ ಇದ್ದಂತೆ ಕಾಣಿಸುತ್ತಿದ್ದರೂ ಅಂತಿಮ ನಿರ್ಧಾರ ಹೈಕಮಾಂಡ್​ ಬಯಸಿದಂತೆಯೇ ಆಗುವ ಸಾಧ್ಯತೆ ಹೆಚ್ಚಿದೆ. ಯಡಿಯೂರಪ್ಪನವರ ಆಪ್ತರೇ ಸಿಎಂ ಆಗುತ್ತಾರಾ? ಬಿಎಸ್‌ವೈ ಉತ್ತರಾಧಿಕಾರಿಯಾಗಿ ಲಿಂಗಾಯತ ಸಮುದಾಯದವರೇ ಸಿಎಂ ಪಟ್ಟಕ್ಕೇರಲಿದ್ದಾರಾ? ಸಿಎಂ ಪಟ್ಟ ಉತ್ತರ ಕರ್ನಾಟಕಕ್ಕೋ ಅಥವಾ ಕರಾವಳಿ ಪ್ರದೇಶಕ್ಕೋ ಅಥವಾ ಹಳೇ ಮೈಸೂರು ಭಾಗಕ್ಕೋ ಎಂಬ ಕುತೂಹಲವೀಗ ಹೆಚ್ಚಾಗುತ್ತಿದೆ.

ಯಡಿಯೂರಪ್ಪ ದಶಕಗಳಿಂದ ಕರ್ನಾಟಕ ಬಿಜೆಪಿಯ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ರೇಸ್‌ನಲ್ಲಿ ಇರೋತನಕ ಅದು ಅವರೊಬ್ಬರೇ ಇರುವ ರೇಸ್ ಆಗಿರುತ್ತಿತ್ತು. ಆದರೀಗ ಯಡಿಯೂರಪ್ಪ ಸಿಎಂ ಪಟ್ಟದಿಂದ ಕೆಳಗಿಳಿದಿದ್ದು, ಸಿಎಂ ಸ್ಥಾನಕ್ಕೇರಲು ಭರ್ಜರಿ ಪೈಪೋಟಿ ಶುರುವಾಗಿದೆ. ಭಾರಿ ಲೆಕ್ಕಾಚಾರಗಳೂ ಚಾಲ್ತಿಯಲ್ಲಿವೆ.

ಸಂತೋಷ್‌, ಕಾಗೇರಿ, ಉದಾಸಿ, ನಿರಾಣಿ, ಬೊಮ್ಮಾಯಿ, ಬೆಲ್ಲದ್? ಮುಖ್ಯಮಂತ್ರಿ ಹುದ್ದೆಗೇರಿ 2 ವರ್ಷ ರಾಜ್ಯಭಾರ ಮಾಡಿದ್ದ ಬಿಎಸ್‌ವೈ ನಿರ್ಗಮನದ ಬೆನ್ನಲ್ಲೇ ಅನೇಕರ ಹೆಸರು ನೂತನ ಮುಖ್ಯಮಂತ್ರಿ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಬಿಜೆಪಿ ಹೈಕಮಾಂಡ್‌ ಹೊಸ ನಾಯಕನ ಆಯ್ಕೆಗೆ ಕಸರತ್ತು ಆರಂಭಿಸುತ್ತಿದ್ದಂತೆ ಸಿಎಂ ಹುದ್ದೆಗೆ ಹಲವರ ಹೆಸರು ತೇಲಿಬರುತ್ತಿವೆ. ಅದರಲ್ಲೂ ಹೊಸ ಮುಖಗಳಿಗೆ ದೆಹಲಿ ನಾಯಕರು ಮಣೆ ಹಾಕಬಹುದು ಎಂಬ ಮಾತಿದ್ದು, ಗುರುವಾರದೊಳಗೆ ನೂತನ ನಾಯಕನ ಆಯ್ಕೆಯಾಗುವ ಸಾಧ್ಯತೆಯಿದೆ. ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಬಿ.ಎಲ್‌.ಸಂತೋಷ್, ಪ್ರಲ್ಹಾದ್‌ ಜೋಶಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ್‌ ನಿರಾಣಿ, ಬಸವರಾಜ್‌ ಬೊಮ್ಮಾಯಿ, ಶಿವಕುಮಾರ್‌ ಉದಾಸಿ, ಅರವಿಂದ ಬೆಲ್ಲದ್ ಹೆಸರುಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವ ಬಿ.ಎಲ್‌ ಸಂತೋಷ್‌, ಕೇಂದ್ರ ಸಚಿವರಾಗಿರುವ ಸಂಸದ ಪ್ರಲ್ಹಾದ್‌ ಜೋಶಿ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಹೊಸಮುಖಗಳು ಹಾಗೂ ದೆಹಲಿ ಪ್ರಭಾವದಿಂದ ಆಗುವವರು ಎಂಬ ಕೋಟಾದಲ್ಲಿ ಕೇಳಿಬಂದರೆ, ಲಿಂಗಾಯತರಿಗೆ ಸಿಎಂ ಸ್ಥಾನ ಎಂಬ ಲೆಕ್ಕಾಚಾರದಲ್ಲಿ ಮಾಜಿ ಸಚಿವ ಮುರುಗೇಶ್‌ ನಿರಾಣಿ, ಬಸವರಾಜ್‌ ಬೊಮ್ಮಾಯಿ ಹೆಸರು ಚಾಲ್ತಿಯಲ್ಲಿವೆ. ಇದರ ಜತೆ ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ಹಾಗೂ ಅರವಿಂದ್ ಬೆಲ್ಲದ್ ಅವರ ಹೆಸರೂ ಸೇರ್ಪಡೆಯಾಗಿದೆ.

ಸಿಎಂ ಆಯ್ಕೆ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, 2-3 ದಿನಗಳಲ್ಲಿ ವರಿಷ್ಠರು ಸಿಎಂ ಅಭ್ಯರ್ಥಿ ಯಾರು ಅನ್ನೋದನ್ನ ತೀರ್ಮಾನಿಸ್ತಾರೆ ಅಂದಿದ್ದಾರೆ. ಬಿಎಸ್‌ವೈ ಅವರನ್ನ ಅಧಿಕಾರದಿಂದ ಕೆಳಗಿಳಿಸಿ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರೋ ಬಿಜೆಪಿ ಹೈಕಮಾಂಡ್‌, ಸದ್ಯ ಎಚ್ಚರಿಕೆಯ ಹೆಜ್ಜೆ ಇಡುವಂತೆ ಕಾಣುತ್ತಿದೆ. ಬಿಎಸ್‌ವೈ ನೇತೃತ್ವದಲ್ಲೇ ಹೊಸ ಸಿಎಂ ಆಯ್ಕೆಗೆ ಸಿದ್ಧತೆ ಮಾಡಿಕೊಂಡಂತಿದೆ. ಶಾಸಕಾಂಗ ಸಭೆಯಲ್ಲಿ ಬಿಎಸ್‌ವೈ ಅವರೇ ನೂತನ ಸಿಎಂ ಹೆಸರು ಪ್ರಸ್ತಾವನೆ ಮಾಡುವ ಸಾಧ್ಯತೆ ಇದೆ. ಯಾವ ಸಮುದಾಯಕ್ಕೆ ಸಿಎಂ ಸ್ಥಾನ ಸಿಗುತ್ತೋ ಅದರ ಹೊರತಾದ 4 ಪ್ರಮುಖ ಸಮುದಾಯದವರನ್ನ ಡಿಸಿಎಂ ಸ್ಥಾನಕ್ಕೇರಿಸಲು ಬಿಜೆಪಿ ತಯಾರಿ ಮಾಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದರೆ ಬಿಎಸ್‌ವೈ ಮಾತ್ರ ನಾನು ಯಾರ ಹೆಸರನ್ನೂ ಸೂಚಿಸೋದಿಲ್ಲ ಎಂದು ಬಹಿರಂಗವಾಗಿ ಹೇಳಿಬಿಟ್ಟಿದ್ದಾರೆ.

ಸದ್ಯ ಎಷ್ಟೇ ಜನರ ಹೆಸರು ಸಿಎಂ ರೇಸ್‌ನಲ್ಲಿದ್ದರೂ ಅಂತಿಮ ನಿರ್ಧಾರ ಹೈಕಮಾಂಡ್‌ನದ್ದೇ ಆಗಿರುತ್ತೆ. ಹೀಗಾಗಿ ಹೈಕಮಾಂಡ್‌ ಸಹ ಬೇರೆ ಬೇರೆ ಲೆಕ್ಕಾಚಾರದಲ್ಲಿ ತೊಡಗಿದೆ. ಸಮುದಾಯಗಳ ಸಮೀಕರಣ ಮಾಡಿ ಸಿಎಂ, ಡಿಸಿಎಂ ಹುದ್ದೆಗೆ ನೇಮಕ ಮಾಡೋ ಸಾಧ್ಯತೆಯಿದೆ. ಒಟ್ಟಾರೆ ಬಿಎಸ್‌ವೈ ಬಳಿಕ ಸಿಎಂ ಪಟ್ಟಕ್ಕೇರಲು ರಾಜ್ಯ ಬಿಜೆಪಿ ನಾಯಕರು ತಮ್ಮದೇ ಆದ ಪ್ರಯತ್ನ ನಡೆಸಿದ್ದಾರೆ. ಲಾಬಿ ಮಾಡುತ್ತಿದ್ದಾರೆ. ಆದರೆ ಕರ್ನಾಟಕದ ಮುಂದಿನ ಸಿಎಂ ಯಾರು ಎಂದು ನಿರ್ಧರಿಸೋದು ಮೋದಿ, ಅಮಿತ್‌ ಶಾ ಮತ್ತು ಜೆಪಿ ನಡ್ಡಾ ಎನ್ನುವ ವಿಷಯ ಎದ್ದು ಕಾಣುತ್ತಿದೆ. ಹೀಗಾಗಿ ಸಿಎಂ ರೇಸ್‌ನಲ್ಲಿ ಈಗ ಕೇಳಿಬರುತ್ತಿರುವ ಹೆಸರುಗಳನ್ನ ಬಿಟ್ಟು ಬೇರೆಯವರಿಗೂ ಮುಖ್ಯಮಂತ್ರಿ ಸ್ಥಾನ ಒಲಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್ 

ಬ್ರಾಹ್ಮಣ ಮುಖ್ಯಮಂತ್ರಿ, ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯದಿಂದ 4 ಉಪಮುಖ್ಯಮಂತ್ರಿ; ಏನಿದು ಲೆಕ್ಕಾಚಾರ?

(Next CM of Karnataka 2021 Who will be the successor of BS Yediyurappa here is the names of new faces)

Published On - 7:39 am, Tue, 27 July 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್