AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಆರೋಪ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ಆದೇಶ ಕಾಯ್ದಿರಿಸಿದ ಕೋರ್ಟ್

ಕೆಎಸ್​ಡಿಎಲ್ ಟೆಂಡರ್​ಗಾಗಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಾಡಾಳ್​ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​​ನಲ್ಲಿ ವಿಚಾರಣೆ ಮಾಡಲಾಗಿದೆ.

ಲಂಚ ಆರೋಪ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ಆದೇಶ ಕಾಯ್ದಿರಿಸಿದ ಕೋರ್ಟ್
ಮಾಡಾಳ್ ವಿರೂಪಾಕ್ಷಪ್ಪ
ಗಂಗಾಧರ​ ಬ. ಸಾಬೋಜಿ
|

Updated on:Apr 10, 2023 | 8:39 PM

Share

ಬೆಂಗಳೂರು: ಕೆಎಸ್​ಡಿಎಲ್ ಟೆಂಡರ್​ಗಾಗಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಾಡಾಳ್​ ವಿರೂಪಾಕ್ಷಪ್ಪ (Madal virupakshappa) ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​​ನಲ್ಲಿ ವಿಚಾರಣೆ ಮಾಡಲಾಗಿದೆ. ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕೋರ್ಟ್​ ಆದೇಶ ಕಾಯ್ದಿರಿಸಿದ್ದು, ಏ.15 ರಂದು ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಇತ್ತೀಚೆಗೆ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಏಕ ಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ, ಮಾಡಾಳ್ ಪರ ವಕೀಲರು ಹಾಗೂ ಲೋಕಾಯಕ್ತ ವಕೀಲರು ವಾದ ಮಂಡನೆ ಮಾಡಿಸಿದ್ದರು. ಉಭಯ ವಕೀಲರ ವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ. ನಟರಾಜನ್, ಆದೇಶವನ್ನು ಕಾಯ್ದಿರಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆರಂಭಿಸಿದ ಕೂಡಲೇ ಅದಕ್ಕೆ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದರು.

ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು. ಈ ಮಧ್ಯೆ, ಮಾಡಾಳ್ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದ್ದರು. ಆದರೆ ಅವರ ಮನವಿಯನ್ನು ಹೈಕೋರ್ಟ್ ನಿರಾಕರಿಸಿ, ಕೂಡಲೇ ವಾದಮಂಡನೆ ಆರಂಭಿಸುವಂತೆ ಸೂಚಿಸಿತ್ತು.

ಇದನ್ನೂ ಓದಿ: Madal virupakshappa: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಶಾಸಕರ ಪುತ್ರ ಮಾಡಾಳ್‌ ಪ್ರಶಾಂತ್ ಜಾಮೀನು ಅರ್ಜಿ ವಜಾ

ಶಾಸಕರ ಪುತ್ರ ಮಾಡಾಳ್‌ ಪ್ರಶಾಂತ್ ಜಾಮೀನು ಅರ್ಜಿವನ್ನು ಸಹ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಕೆಎಸ್​ಡಿಎಲ್​ ಟೆಂಡರ್​ಗಾಗಿ ಲಂಚ ಪಡೆದ 3ನೇ ಆರೋಪಿ ಸುರೇಂದ್ರಗೆ  ಕೋರ್ಟ್ ಜಾಮೀನು ಮಂಜೂರು ಮಾಡಿದೆ. BWSSB ಅಧಿಕಾರಿಯಾಗಿದ್ದ ಮಾಡಾಳ್​ ಪ್ರಶಾಂತ್​ ಬಿಲ್ಡರ್​ ಕಚೇರಿಗೆ ಹೋಗಿದ್ದೇಕೆ ಎಂಬ ವಿಚಾರಗಳಿಗೆ ಮಾಡಾಳ್​ ಪ್ರಶಾಂತ್ ತನಿಖೆಗೆ ಸಹಕರಿಸದೇ ಸಾಕ್ಷ್ಯ ಬಚ್ಚಿಟ್ಟಿದ್ದಾರೆ.

ತನಿಖೆಗೆ ಸಹಕರಿಸದ ಮಾಡಾಳ್ ಪ್ರಶಾಂತ್ 

ಲೋಕಾಯುಕ್ತ ದಾಳಿ ವೇಳೆ ಮಾಡಾಳ್ ಪ್ರಶಾಂತ್ ಚೀಟಿಯೊಂದನ್ನು ನುಂಗಲು ಯತ್ನಿಸಿದ್ದು, ಚೀಟಿ ಕಕ್ಕಿಸಿ ವಶಕ್ಕೆ ಪಡೆಯಲಾಗಿದೆ. ಕಸ್ಟಡಿಯಲ್ಲಿದ್ದಾಗಲೇ ತನಿಖೆಗೆ ಮಾಡಾಳ್ ಪ್ರಶಾಂತ್ ಸಹಕರಿಸಿಲ್ಲ. ಪ್ರಶಾಂತ್​ಗೆ ಜಾಮೀನು ನೀಡಿದಾಗ ಸಹಕರಿಸುವ ಗ್ಯಾರಂಟಿ ಏನು ಎಂದು ಲೋಕಾಯುಕ್ತ ಎಸ್​ಪಿಪಿ ಸಂತೋಷ್ ಎಸ್.ನಾಗರಾಳೆ ವಾದಮಾಡಿದ್ದಾರೆ. ಹಾಗಾಗಿ ಮಾಡಾಳ್ ಪ್ರಶಾಂತ್​ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾ.ಬಿ.ಜಯಂತ್ ಕುಮಾರ್ ಆದೇಶ ಹೋರಡಿಸಿದ್ದಾರೆ.

ಇದನ್ನೂ ಓದಿ: Karnataka Assembly Election 2023: ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 100 ಕೋಟಿ ರೂ. ಮೌಲ್ಯದ ನಗದು, ಉಡುಗೊರೆ ವಶಕ್ಕೆ: ಚುನಾವಣಾ ಆಯೋಗ

ಪ್ರಕರಣ ಹಿನ್ನೆಲೆ

ಮಾರ್ಚ್ 2ರಂದು ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಪುತ್ರ ಬೆಂಗಳೂರು ಜಲಮಂಡಳಿಯ ಚೀಫ್‌ ಅಕೌಂಟಿಂಗ್‌ ಆಫೀಸರ್‌ ಮಾಡಾಳ್‌ ಪ್ರಶಾಂತ್‌ ಅವರು 40 ಲಕ್ಷ ರೂ. ಹಣವನ್ನು ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಈ ವೇಳೆ ಪ್ರಶಾಂತ್‌ ಅವರಿಗೆ ಹಣ ಕೊಡಲು ಬಂದ ವ್ಯಕ್ತಿಗಳು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಮಾಡಾಳ್‌ ವಿರುಪಾಕ್ಷಪ್ಪ ಅವರಿಗೆ ಸಂಬಂಧಪಟ್ಟ ಹಣವಾಗಿದೆ ಎಂದು ಹೇಳಿದ್ದರು. ಬಳಿಕ ಲೋಕಾಯುಕ್ತ ಅಧಿಕಾರಿಗಳು ವಿರುಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್​ ನಿವಾಸದ ಮೇಲೆ ದಾಳಿ ಮಾಡಿತ್ತು. ಬೆಂಗಳೂರಿನ ಮನೆ, ಕಚೇರಿ, ಚನ್ನೇಶಪುರ ಗ್ರಾಮದ ಮನೆಯಲ್ಲಿ ಕಾರ್ಯಚರಣೆ ನಡೆಸಿತ್ತು, ಈ ವೇಳೆ ಕೋಟಿ ಕೋಟಿ ಹಣ, ಚಿನ್ನ, ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿದ್ದವು.

ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ 6 ದಿನಗಳ ಕಾಲ ಸಿಗದೇ ಕಣ್ಮರೆಸಿಕೊಮಡಿದ್ದ ಮಾಡಾಳ್‌ ವಿರುಪಾಕ್ಷಪ್ಪ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿದ್ದರು. ಆದರೆ ಲೋಯುಕ್ತರ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿಲ್ಲ ಎಂದು ತಿಳಿದುಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:39 pm, Mon, 10 April 23