ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಅದನ್ನು ಖಚಿತಪಡಿಸಿದ್ದಾರೆ. ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಅದನ್ನೇ ಹೇಳಿದ್ದಾರೆ. ಈ ಎಲ್ಲಾ ಹೇಳಿಕೆ, ಗಾಳಿಸುದ್ದಿಗಳಿಂದ ರಾಜಕೀಯ ಅಸ್ಥಿರತೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕ. ಅವರು ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ, ಮುಖ್ಯಮಂತ್ರಿ ಬದಲಾವಣೆ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಅವರು ಮಾಡಿದ್ದಾರೆ.
ಮುಖ್ಯಮಂತ್ರಿ ಆಗಿ ಆಗಿ ಬಿ.ಎಸ್. ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಚರ್ಚೆ ಅನಗತ್ಯ. ಈ ಬಗ್ಗೆ ಪಕ್ಷದ ಅಧ್ಯಕ್ಷರು, ಪ್ರಭಾರಿಗಳು ಏನೂ ಹೇಳಿಲ್ಲ. ವರಿಷ್ಠರು, ರಾಜ್ಯ ಉಸ್ತುವಾರಿ ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ಎಂಎಲ್ಸಿ ರವಿಕುಮಾರ್ ಕೂಡ ಹೇಳಿಕೆ ನೀಡಿದ್ದಾರೆ.
CM is going to continue, he himself has said it. Our incharge Arun Singh had also said it. Through all these speculations & rumours they’re trying to create political instability. CM is very strong, he is our leader & he will continue to be the CM: Karnataka HM
Basavaraj Bommai pic.twitter.com/u0dcbhXChd— ANI (@ANI) July 21, 2021
ಜುಲೈ 24ರಂದು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಚಿತ್ರದುರ್ಗ ನಗರದ ವಿದ್ಯಾದಾನ ಸೌಧ ಶಾಲಾ ಆವರಣದಲ್ಲಿ ರಾಜ್ಯದ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಸಿಎಂ ಬದಲಾವಣೆ ವಿಚಾರ ಪತ್ರಿಕೆ, ಟಿವಿಯಲ್ಲಿ ನೋಡ್ತಿದ್ದೇವೆ. ಪಕ್ಷದ ಅದ್ಯಕ್ಷರು, ಪ್ರಭಾರಿಗಳು ಏನೂ ಹೇಳಿಲ್ಲ. ಹಾಗಾಗಿ ಸಿಎಂ ಬಿಎಸ್ ವೈ ಬದಲಾವಣೆ ಚರ್ಚೆ ಅನಗತ್ಯ ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ. ದೆಹಲಿಯ ನಾಯಕರು, ರಾಜ್ಯ ಉಸ್ತುವಾರಿ ಈ ಬಗ್ಗೆ ಪ್ರತಿಕ್ರಿಯಿಸಲಿದ್ದಾರೆ. 2ವರ್ಷ ಪೂರೈಸಿದ ಹಿನ್ನೆಲೆ ಜುಲೈ 25ರಂದು ಶಾಸಕಾಂಗ ಸಭೆ ಕರೆಯಲಾಗಿತ್ತು. ಸಿಎಂ ಬದಲಾವಣೆ ವಿಚಾರ ಹಬ್ಬಿದ ಹಿನ್ನೆಲೆ ಅದನ್ನು ರದ್ದು ಮಾಡಲಾಯಿತು. ಜುಲೈ 25ರ ಸಂಜೆ ಎಮ್ಎಲ್ಎ, ಎಮ್ಎಲ್ಸಿಗಳ ಸಭೆ ನಡೆಯಲಿದೆ. ಊಟ ಮತ್ತು ಚರ್ಚೆ ಔಪಚಾರಿಕವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರಲ್ಲಿ ಫೇಕ್ ಆಡಿಯೋ ವೈರಲ್ ಆಗಿದೆ. ಕಟೀಲ್ ಹೆಸರಿಗೆ ಕಳಂಕ ತರಲು ನಡೆಸಿದ ಷಡ್ಯಂತ್ರ ಅದಾಗಿದೆ. ಪಕ್ಷ, ಸಿಎಂ ವಿರುದ್ಧ ಮಾತಾಡಿದ ಯತ್ನಾಳ್ ಮತ್ತಿತರರಿಗೆ ನೋಟಿಸ್ ಕೊಟ್ಟಿದೆ. ಪಕ್ಷಕ್ಕೆ ಧಕ್ಕೆ ತರುವವರ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ ಖಚಿತ. ಹಿರಿಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿಗೆ ಸಚಿವ ಸ್ಥಾನದ ಬಗ್ಗೆ ರಾಜ್ಯದ ಪ್ರಮುಖರಿಂದ ನಿರ್ಧಾರ ಎಂದು ರವಿಕುಮಾರ್ ತಿಳಿಸಿದ್ದಾರೆ.
ನನಗೆ ಇನ್ನೂ ರಾಜೀನಾಮೆ ಕೊಡಿ ಎಂದು ಸೂಚನೆ ನೀಡಿಲ್ಲ
ಸ್ವಾಮೀಜಿಗಳ ಜತೆಗಿನ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನಗೆ ಇನ್ನೂ ರಾಜೀನಾಮೆ ಕೊಡಿ ಎಂದು ಸೂಚನೆ ನೀಡಿಲ್ಲ ಎಂದು ಹೇಳಿರುವುದು ತಿಳಿದುಬಂದಿದೆ. ನಿಮ್ಮೆಲ್ಲರ ಆಶೀರ್ವಾದ ಇರುವುದರಿಂದ ನಾನು ಪುಣ್ಯಶಾಲಿ. ನನಗೆ ಇನ್ನೂ ರಾಜೀನಾಮೆ ಕೊಡಿ ಎಂದು ಸೂಚನೆ ನೀಡಿಲ್ಲ. ಯಾವ ಕಾರಣವನ್ನೂ ಕೊಟ್ಟಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಆದರೂ ಈ ರೀತಿ ಎಲ್ಲಾ ನಡೆಯುತ್ತಿದೆ. 2 ಬಾರಿ ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದೇನೆ. ಆದರೆ, ವರಿಷ್ಠರು ಸೂಚಿಸಿದಂತೆ ನಾನು ನಡೆದುಕೊಳ್ಳಬೇಕಾಗುತ್ತದೆ. ಪಕ್ಷದ ಆದೇಶದ ವಿರುದ್ಧ ನಡೆದ್ರೆ ದ್ರೋಹ ಬಗೆದಂತಾಗುತ್ತೆ ಎಂದು ಸ್ವಾಮೀಜಿಗಳ ಜತೆಗಿನ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ವಿಚಾರ: ಕರ್ನಾಟಕ ರಾಜಕೀಯ ವಿಪ್ಲವದ ಬಗ್ಗೆ ಕೋಡಿಮಠದ ಶ್ರೀ ಭವಿಷ್ಯ
(BS Yediyurappa will continue as CM of Karnataka says Basavaraj Bommai Ravikumar)
Published On - 4:31 pm, Wed, 21 July 21