ಬೆಂಗಳೂರು, ಜನವರಿ 24: ಬೆಂಗಳೂರು ಅರಮನೆ ಮೈದಾನದ ಜಾಗ ಬಳಸಿಕೊಳ್ಳುವುದಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ (HK Patil) ಹೇಳಿದ್ದಾರೆ. ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ಯೋಜನೆ ವಿಚಾರವಾಗಿ ಟಿಡಿಆರ್ ವಿಸ್ತರಣೆಗೆ ಸಂಪುಟ ನಕಾರವೆತ್ತಿದ್ದು, ವಾರಸುದಾರರಿಗೆ ಟಿಡಿಆರ್ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
1996ರಲ್ಲಿ ಅರಮನೆ ಮೈದಾನ ವಶಕ್ಕೆ ಪಡೆಯಲು ಕಾನೂನು ಮಾಡಲಾಗಿತ್ತು. ಅದು ರಾಜ್ಯಪಾಲರು, ರಾಷ್ಟ್ರಪತಿಗೆ ಹೋಗಿತ್ತು. ಇದು ಅಲ್ಲಿಂದ ಅಂಗೀಕಾರ ಆಗಿರುವ ಕಾನೂನು. ಈ ಕಾನಿನಂತೆ 472 ಎಕರೆ ಭೂಮಿಯನ್ನು ಗೊತ್ತುಪಡಿಸಲಾಗಿತ್ತು. ಅಂದಿನ ದರ, ವಿವಿಧ ಅಂಶ ಪರಿಗಣಿಸಿ 11ಕೋಟಿ ರೂ. ಮೌಲ್ಯ ನಿರ್ಧರಿಸಿತ್ತು. ಅದಾದ ಮೇಲೆ ಜಾವೇರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿದಿದೆ, 28 ವರ್ಷ ಗತಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಸರ್ಕಾರ vs ರಾಜಭವನ: ವಿಧೇಯಕ ಅನುಮೋದಿಸದೆ ವಾಪಸ್ಸು ಕಳುಹಿಸಿದ ರಾಜ್ಯಪಾಲರು
1996ರ ಭೂಸ್ವಾಧೀನ ಕಾನೂನನ್ನು ಮೈಸೂರು ಮಹಾರಾಜರು ಪ್ರಶ್ನೆ ಮಾಡಿದ್ದರು. ಅದನ್ನ ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಸುಪ್ರೀಂಕೋರ್ಟ್ಗೆ ಸಿವಿಲ್ ಅಪೀಲು ಹೋಗಿದ್ದರು. ಟಿಡಿಆರ್ ವ್ಯವಸ್ಥೆ ಬಂದ ಮೇಲೆ ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ ಅಗಲೀಕಣ ವೇಳೆ ಮತ್ತೆ ಪ್ರಕರಣ ಚರ್ಚೆಗೆ ಬರುತ್ತೆ. ಪ್ರತಿ ಎಕರೆಗೆ 2.30 ಲಕ್ಷ ರೂ. ಪರಿಹಾರ ಕೊಡಬೇಕು ಅಂತಾ ಆಗುತ್ತೆ. ಇಷ್ಟು ವರ್ಷ ವ್ಯಾಜ್ಯ ನಡೆಯುತ್ತಿದ್ದರೂ ತಡೆ ಆದೇಶ ಇಲ್ಲ ಎಂದರು.
2004ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಅಧಿಕಾರಿಗಳ ಮೇಲೆ ಬರುತ್ತೆ. ಅರಮನೆ ಮೈದಾನವನ್ನ ಅಗಲೀಕರಣ ಉದ್ದೇಶಕ್ಕೆ ಮೌಲೀಕರಿಸಿ ವರ್ಗಾವಣೆ ಮಾಡಲು ಕೋರ್ಟ್ ಆದೇಶ ಮಾಡುತ್ತೆ.
15.36 ಎಕರೆ ಭೂಮಿ, ಪ್ರತಿ ಎಕರೆಗೆ 200 ಕೋಟಿಯಂತೆ 3014 ಕೋಟಿ ರೂ. ಕೊಡಬೇಕಾಗುತ್ತೆ. ಎರಡು ಲಕ್ಷ ಮುವತ್ತು ಸಾವಿರ ಎಲ್ಲಿ, 3014 ಕೋಟಿ ರೂ ಎಲ್ಲಿ. ಇದಿರಂದ ಅಭಿವೃದ್ದಿಗೆ ಗಂಡಾಂತರ ಆಗಲಿದೆ. ಪ್ರಗತಿಗೆ ವಿರೋಧ ನೀತಿ ಆಗುತ್ತೆ ಎಂದಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಕಿರುಕುಳ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ನಾಳೆ ಸಿಎಂ ಸಿದ್ದರಾಮಯ್ಯ ತುರ್ತು ಸಭೆ ಕರೆದಿದ್ದಾರೆ. ವಿಶೇಷ ಕಾನೂನು ತರಲು ನಿರ್ಧರಿಸಲಾಗಿದೆ. ವಿಶೇಷ ಕಾನೂನು ತರಲು ನಿರ್ಣಯ ಮಾಡುತ್ತೇವೆ. ಸಣ್ಣ ಸಣ್ಣ ವ್ಯಕ್ತಿಗಳಿಗೆ ಆಗುತ್ತಿರುವ ಶೋಷಣೆ ತಡೆಯಲು ಕ್ರಮಕೈಗೊಳ್ಳುತ್ತೇವೆ. ಮೈಕ್ರೋ ಫೈನಾನ್ಸ್ ರೆಗ್ಯುಲೇಶನ್ ಮನಿ ಲ್ಯಾಂಡ್ರಿಂಗ್ ಬಿಲ್ ತರಲು ನಾಳೆ ಚರ್ಚಿಸಲಾಗುವುದು. ಈಗಿರುವ ಕಾನೂನಿನಲ್ಲಿ ಇದಕ್ಕೆ ಹೆಚ್ಚು ಬಲವಿಲ್ಲ ಎಂದು ಹೇಳಿದ್ದಾರೆ. ರಾಜ್ಯಪಾಲರು ಬಿಲ್ ವಾಪಸ್ ಕಳುಹಿಸಿದ ವಿಚಾರವಾಗಿ, ಇದರ ಬಗ್ಗೆ ನಾನು ಈಗ ಏನೂ ಹೇಳುವುದಿಲ್ಲ. ಕಾನೂನು ಇಲಾಖೆ ಮೂಲಕ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.