ಭಾರತಕ್ಕೆ ಈಗ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಸಂಭ್ರಮ. ಈ ಸಂಭ್ರಮವನ್ನು ವಿನೂತನ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 75 ರ ಸಂಭ್ರಮಕ್ಕೆ ಇಡೀ ದೇಶ ಸಂತೋಷ ಸಂಭ್ರದಲ್ಲಿ ತೇಲುತ್ತಿರುವ ಸಂದರ್ಭದಲ್ಲಿ ರಾಷ್ಟ್ರದ ಏಕೈಕ ಧ್ವಜ ತಯಾರಕಾ ಘಟಕ ಸಂಕಷ್ಟದಲ್ಲಿದೆ. ಸರ್ಕಾರದ ಆ ಒಂದು ನಿರ್ಧಾರದಿಂದ ಕಂಪನಿಗೆ ಬೀದಿಗೆ ಬರುವ ಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.
ನಮ್ಮ ರಾಷ್ಟ್ರದ್ವಜವನ್ನು ಖಾದಿ ಬಟ್ಟೆಯಲ್ಲಿ ನೋಡುವುದೇ ಚಂದ. ಖಾದಿಯಲ್ಲಿ ಮಾಡಿದ ತಿರಂಗ ಕಣ್ಣೆದಿರು ಹಾರಾಡುತ್ತಿದ್ದರೆ ನೋಡುಗರ ಮನದಲ್ಲಿ ದೇಶಪ್ರೇಮ ಉಕ್ಕಿ ಬರುತ್ತದೆ. ಖಾದಿ ಬಿಟ್ಟು ಬೇರೆ ಬಟ್ಟೆಯಲ್ಲಿ ನ್ಯಾಷನಲ್ ಪ್ಲ್ಯಾಗ್ ನೋಡೋಕೆ ಯಾರಿಗೂ ಇಷ್ಟವಿಲ್ಲ. ಖಾದಿಬಟ್ಟೆಗೆ ಇರುವ ಶಕ್ತಿಯೇ ಅದು. ಭಾರತೀರೊಂದಿಗೆ ಖಾದಿ ಅಷ್ಟೊಂದು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಆದರೆ ಇದನ್ನೆಲ್ ಮರೆತಿಂತಿರುವ ಕೇಂದ್ರ ಸರಕಾರ ಈಗ ರಾಷ್ಟ್ರದ್ವಜವನ್ನು ಪಾಲಿಯಸ್ಟರ್ ಬಟ್ಟೆಯಲ್ಲಿ ತಯಾರು ಮಾಡಲು ಮುಂದಾಗಿದೆ.
ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ರ ಕಾಯಿದೆಯನ್ನ ಕೇಂದ್ರ ಸರಕಾರ ತಿದ್ದುಪಡಿ ಮಾಡಿದೆ. ತಿದ್ದುಪಡಿಯಿಂದಾಗಿ ಪಾಲಿಸ್ಟರ್ ಬಟ್ಟೆಗಳಿಂದ ರಾಷ್ಟ್ರದ್ವಜವನ್ನು ತಯಾರು ಮಾಡಬಹುದು. ಅಷ್ಟೇ ಅಲ್ಲದೆ ಮಶೀನ್ ಗಳ ಮೂಲಕ ದ್ವಜ ತಯಾರಿಸಬಹುದೆಂದು ತಿದ್ದುಪಡಿ ತರುವ ಮೂಲಕ ಬಟ್ಟೆ ಮಿಲ್ ಗಳಲ್ಲಿ ಖಾಸಗಿ ಕಂಪನಿಯವರು ಇನ್ನು ಮುಂದೆ ದ್ವಜ ತಯಾರಿಸಬಹುದಾಗಿದೆ. ಇದರಿಂದ ರಾಷ್ಟ್ರದ್ವಜದ ಗೌರವ ಮತ್ತು ಮಹತ್ವ ಕಡಿಮೆ ಆಗಬಹುದು ಎನ್ನುವ ಆತಂಕ ಶುರುವಾಗಿದೆ.
ಈ ಮೊದಲು ಖಾದಿ, ಉಣ್ಣೆ ಮತ್ತು ಸಿಲ್ಕ್ ಬಟ್ಟೆಯಲ್ಲಿ ರಾಷ್ಟ್ರದ್ವಜ ತಯಾರಿಸುತ್ತಿದ್ದರು. ಈಗ ಪಾಲಿಸ್ಟರ್ ಬಟ್ಟೆ ಬಳಕೆಗೆ ಅವಕಾಶ ನೀಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ ಬಿಐಎಸ್ ಮಾನ್ಯತೆ ಪಡೆದಿರುವ ಏಕೈಕ ಕೇಂದ್ರ ಖಾದಿ ಗ್ರಾಮೋದ್ಯೋಗ ಕೇಂದ್ರವಾಗಿದೆ.
ಆದರೆ ಕೇಂದ್ರದ ಧ್ವಜ ಸಂಹಿತೆ ನೀತಿಯಿಂದಾಗಿ ಕಳೆದ ಎರಡು ದಶಕಗಳಿಂದ ರಾಷ್ಟ್ರಧ್ವಜ ತಯಾರು ಮಾಡುತ್ತಿದ್ದ ಘಟಕ ಅಳಿವಿನಿಂಚಿಗೆ ಬಂದು ನಿಂತಿದೆ.
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ಮಾತ್ರ ರಾಷ್ಟ್ರದ್ವಜ ತಯಾರಾಗ್ತಾ ಇತ್ತು. ದೇಶದ ಎಲ್ಲಾ ಭಾಗಗಳಿಗೆ ಇಲ್ಲಿಂದಲೇ ದ್ವಜಗಳು ಪೂರೈಕೆ ಆಗುತ್ತಿದ್ದವು.
ಕೇಂದ್ರ ಸರಕಾರ ಕಾಯಿದೆಯಲ್ಲಿ ತಿದ್ದುಪಡಿ ತಂದಿದ್ದರಿಂದ ಈ ರಾಷ್ಟ್ರದ್ವಜ ತಯಾರಿಕಾ ಕೇಂದ್ರ ಬಂದ್ ಆಗುವ ಆತಂಕ ಎದುರಿಸುತ್ತಿದೆ. ತಲೆ ತಲಾಂತರಗಳಿಂದ ವರ್ಷವಿಡಿ ಧ್ವಜ ತಯಾರಿಯಲ್ಲಿ ತೊಡಗಿದ್ದ ಸಾವಿರಾರು ಬಡ ಕುಟುಂಬಗಳು ಬೀದಿ ಪಾಲಾಗಲಿವೆ, 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಮೊದಲು ದ್ವಜ ತಯಾರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಆದ್ರೆ ಈಗ ಖಾದಿಯಲ್ಲಿ ತಯಾರಾದ ದ್ವಜಗಳಿಗೆ ಬೆಲೆ ಹೆಚ್ಚು ಎನ್ನುವ ಕಾರಣ ನೀಡಿ ಖರೀದಿಗೆ ಮುಂದಾಗಿಲ್ಲ. ಬದಲಾಗಿ ಚೀನಾ ಮೂಲದ ಕಂಪನಿಯಿಂದ ಪಾಲಿಯಸ್ಟರ್ ಬಟ್ಟೆಯಲ್ಲಿ ದ್ವಜ ತಯಾರಿಕೆಗೆ ಮುಂದಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮಹಾತ್ಮಾ ಗಾಂಧೀಜಿಯವರ ಕನಸಿಗೆ ಕೇಂದ್ರ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಖಾಸಗಿ ಕಂಪನಿಗಳ ಲಾಬಿಗೆ ಸರ್ಕಾರ ಮಣಿದಿದೆ. ದುರಂತ ಅಂದ್ರೆ ಚೀನಾದಿಂದ ರಾಷ್ಟ್ರದ್ವಜ ತಯಾರಿಕೆಗೆ ಮುಂದಾಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಒಂದು ಕಡೆ ಖಾದಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳುವ ಜನಪ್ರತಿನಿಧಿಗಳು, ಮತ್ತೊಂದೆಡೆ ಖಾದಿ ಗ್ರಾಮೋದ್ಯೋಗವನ್ನ ಸಂಪೂರ್ಣವಾಗಿ ಮುಚ್ಚಲು ಹೊರಟಿರೋದು ದುರಂತವೇ ಸರಿ. ಈ ನಡುವೆ ಬಾಯ್ಬಿಟ್ರೆ ದೇಶಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರ ದೇಶಪ್ರೇಮ ಇದೇನಾ ಅಂತ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಂಸ್ಥೆ ಮನವಿ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಮನವಿ ಸಲ್ಲಿಕೆ ಮಾಡಿದ್ದರೂ ಯಾರೊಬ್ಬರೂ ಕ್ಯಾರೆ ಎಂದಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಇನ್ನಾದ್ರೂ ಕಣ್ಣು ಬಿಟ್ಟು ನೋಡಬೇಕಿದೆ. ಹೊಸ ಧ್ವಜ ನೀತಿಯನ್ನ ವಾಪಸ್ ಪಡೆದು, ಖಾದಿ ಬಟ್ಟೆಗಳಿಂದ ಸಿದ್ದ ಪಡಿಸಿದ ಧ್ವಜಗಳನ್ನೇ ಖರೀದಿ ಮಾಡಬೇಕಿದೆ. ಅಲ್ಲದೇ 2002 ರಲ್ಲಿ ಜಾರಿಗೆ ಮಾಡಿದ್ದ ಧ್ವಜ ನೀತಿಯನ್ನ ಮುಂದುವರೆಸಬೇಕಿದೆ.
ಖಾದಿ ಗ್ರಾಮೋದ್ಯೋಗ ಕೆಂದ್ರದಲ್ಲಿ ಕೆಲಸ ಮಾಡ್ತಿದ್ದ ಸುಮಾರು ೧೨೦೦ ಕ್ಕೂ ಹೆಚ್ಚು ಸಿಬ್ಬಂದಿಗೆ ಬೀದಿ ಪಾಲಾಗೊ ಆತಂಕ ಎದುರಾಗಿದೆದ. ಪ್ರತಿ ವರ್ಷ ಅಂದಾಜು 3 ರಿಂದ 4 ಕೋಟಿ ರೂ.ಗಳ ವ್ಯವಹಾರ ನಡೆಸುತ್ತಿತ್ತು. ಅಂದ್ರೆ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ ಧ್ವಜ ತಯಾರು ಮಾಡಲಾಗುತಿತ್ತು. ಆದ್ರೆ ಈ ವರ್ಷ ಅದು ಭಾರೀ ಕುಸಿತ ಕಂಡಿದೆ. ಬಿಜೆಪಿ ಸರ್ಕಾರದ ಅಜಾದಿ ಕಾ ಅಮೃತ ಮಹೋತ್ಸವ ಮಾಡ್ತಿದೆ. ಹರ್ ಘರ್ ಪೇ ತಿರಂಗಾ ಎನ್ನೋ ಕರೆ ನೀಡಿದೆ. ಧ್ವಜ ತಯಾರಿಸುವ ಜವಾಬ್ದಾರಿಯನ್ನು ಇದೇ ಖಾದಿ ಗ್ರಾಮೋದ್ಗಕ್ಕೆ ನೀಡಿದ್ದರೇ ಸಂಸ್ಥೆ ದೊಡ್ಡ ಮಟ್ಟದಲ್ಲಿ ಮೇಲೇಳುತ್ತಿತ್ತು.
ರಾಹುಲ್ ಭೇಟಿ; ರಾಜಕೀಯ ಬಣ್ಣ ಪಡೆದ ತಿರಂಗ!
ಧ್ವಜ ಸಂಹಿತೆ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರದ ಧೋರಣೆಯನ್ನು ಖಾದಿ ಗ್ರಾಮೋದ್ಯೋಗ ಸಿಬ್ಬಂದಿಯಲ್ಲದೆ ಹಲವಾರು ಜನ ವಿರೋಧಿಸುತ್ತಿದ್ದಾರೆ. ಅದರ ಭಾಗವಾಗಿ ಕಾಂಗ್ರೆಸ್ ಕೂಡಾ ಪಾಲಿಯಸ್ಟರ್ ಧ್ವಜ ಬಾಯ್ಕಾಟ್ ಎನ್ನೋ ಅಭಿಯಾನಕ್ಕೆ ಕರೆ ನೀಡಲಾಗಿದೆ. ಅದರ ಭಾಗವಾಗಿಯೇ ನಿನ್ನೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಅಭಿಯಾನಕ್ಕೆ ಬಲ ನೀಡಿದ್ದಾರೆ.
Former AICC President @RahulGandhi visited the National Flag manufacturing unit of Bengeri Khadi Village Industry in Hubli-Dharwad on Wednesday evening. AICC General Secretary @kcvenugopalmp , KPCC President @DKShivakumar and others were present.@INCKarnataka @prasad_abbayya pic.twitter.com/IeAmm8wbRE
— INC Hubli-Dharwad East-72. My Tiranga My Pride (@INCHubDwdEast) August 3, 2022
ನಿನ್ನೆ ದಾವಣಗೆರೆಗೆ ಸಿದ್ದರಾಮಯ್ಯ ಹುಟ್ಟು ಹಬ್ಬಕ್ಕೆ ಬಂದಿದ್ದ ರಾಹುಲ್ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ, ಧ್ವಜ ತಯಾರಿಕೆ ಮಹಿಳೆಯರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲದೇ ದಿನಕ್ಕೆ ಎಷ್ಟು ಧ್ವಜ ತಯಾರಿಸಲಾಗುತ್ತದೆ, ಕೆಲಸಗಾರರ ಸಮಸ್ಯೆಗಳೇನು ಮೊದಲಾದ ಸಂಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಕೇಂದ್ರ ಮಾಡಿರುವ ತಿದ್ದುಪಡಿಯ ವಿರುದ್ದ ಸಂಸತ್ ನಲ್ಲಿ ಪ್ರಶ್ನೆ ಮಾಡ್ತೆನೆ ಎಂದು ಅಭಯವಚನ ನೀಡಿದ್ದಾರೆ.
ಏಳು ಲಕ್ಷದ ಖಾದಿ ಧ್ವಜ ಖರೀದಿಸಿದ ಕಾಂಗ್ರೆಸ್
ಈ ಎಲ್ಲಾ ಬೆಳವಣಿಗೆಯನ್ನ ಗಮನಿಸಿದ ರಾಜ್ಯ ಕೈ ನಾಯಕರು, ಹುಬ್ಬಳ್ಳಿಯ ಬೆಂಗೇರಿಯಲ್ಲಿರೋ ಖಾದಿ ಧ್ವಜವನ್ನ ಖರೀದಿ ಮಾಡಿ, ಕಷ್ಟದಲ್ಲಿರೋ ಸಂಸ್ಥೆಗೆ ಬಲ ತುಂಬುವ ಕೆಲಸ ಮಾಡಿದ್ದಾರೆ.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ.