ತಕ್ಷಣ ಪಾದಯಾತ್ರೆ ನಿಲ್ಲಿಸಲು ರಣದೀಪ್ ಸುರ್ಜೇವಾಲ ಮೂಲಕ ಹೈಕಮಾಂಡ್ ಸಂದೇಶ ರವಾನೆ! ರಾಜ್ಯ ನಾಯಕರ ಮುಂದಿನ ನಡೆ ಏನು?

ಪಾದಯಾತ್ರೆ ನಿಲ್ಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡೆ ಕುತೂಹಲ ಮೂಡಿಸಿದೆ.

ತಕ್ಷಣ ಪಾದಯಾತ್ರೆ ನಿಲ್ಲಿಸಲು ರಣದೀಪ್ ಸುರ್ಜೇವಾಲ ಮೂಲಕ ಹೈಕಮಾಂಡ್ ಸಂದೇಶ ರವಾನೆ! ರಾಜ್ಯ ನಾಯಕರ ಮುಂದಿನ ನಡೆ ಏನು?
ಪ್ರಾತಿನಿಧಿಕ ಚಿತ್ರ
Edited By:

Updated on: Jan 13, 2022 | 12:44 PM

ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ನಿಲ್ಲಿಸುವಂತೆ ಹೈಕಮಾಂಡ್ ತಿಳಿಸಿದೆ. ರಣದೀಪ್ ಸುರ್ಜೇವಾಲ ಮೂಲಕ ಸಂದೇಶ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಕೋರ್ಟ್ ವತಿಯಂದಲೇ ಆದೇಶ ಬರೋವರೆಗೂ ಪಾದಯಾತ್ರೆ ಮುಂದುವರಿಸುವ ಆಲೋಚನೆಯಲ್ಲಿದ್ದ ಕರ್ನಾಟಕ ಕಾಂಗ್ರೆಸ್​ ನಾಯಕರಿಗೆ ಹೈಕಮಾಂಡ್​ ಬಿಸಿಮುಟ್ಟಿಸಿದೆ. ತಕ್ಷಣ ಪಾದಯಾತ್ರೆ ನಿಲ್ಲಿಸುವಂತೆ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ನಾಯಕ ರಣದೀಪ್ ಸುರ್ಜೇವಾಲ ಮೂಲಕ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಆದರೆ ರಾಜ್ಯ ನಾಯಕರು ಮುಂದೇನು ಮಾಡ್ತಾರೆ? ಎಂಬುದು ಸದ್ಯದ ಕುತೂಹಲವಾಗಿದೆ.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಡಿಕೆ ಶಿವಕುಮಾರ್ ಅವರಿಗೆ ಕಿವಿಮಾತು ರವಾನೆಯಾಗಿತ್ತು. ಡಿಕೆಶಿ ಜತೆ ಮಾತುಕತೆ ನಡೆಸಿದ್ದ ರಾಹುಲ್ ಗಾಂಧಿ, ದೂರವಾಣಿ ಮೂಲಕ ಪಾದಯಾತ್ರೆ ಬಗ್ಗೆ ವಿವರಣೆ ಕೇಳಿದ್ದರು. ಅಲ್ಲದೇ ಯಾವುದೇ ರೀತಿ ಅಪವಾದ‌ ಬರದಂತೆ ನೋಡಿಕೊಳ್ಳಲು‌ ಸೂಚನೆ ನೀಡಿದ್ದರು. ಇದೀಗ ಹೈಕಮಾಂಡ್ ರಣದೀಪ್ ಸುರ್ಜೇವಾಲಾ ಮೂಲಕ ಪಾದಯಾತ್ರೆಗೆ ಬ್ರೇಕ್ ಹಾಕಿದೆ.

ಮೇಕೆದಾಟು ಪಾದಯಾತ್ರೆಗೆ ಬ್ರೇಕ್ ಹಾಕಿದ ಎಐಸಿಸಿ, ತಕ್ಷಣ ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ರಣದೀಪ್ ಸುರ್ಜೇವಾಲ ಮೂಲಕ ಸಂದೇಶ ರವಾನಿಸಿದೆ. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಖಭಂಗ ತಪ್ಪಿಸಲು ತಕ್ಷಣ ಪಾದಯಾತ್ರೆ ನಿಲ್ಲಿಸಿ ಎಂದು ಸಂದೇಶ ರವಾನಿಸಲಾಗಿದೆ.

ರಾಜ್ಯ ನಾಯಕರ ನಡೆ ಏನು?
ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರು ಮಾತುಕತೆ ನಡೆಸಿದ್ದಾರೆ. ಪಾದಯಾತ್ರೆ ಮುಂದುವರಿಸಲು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದು, ಕೊವಿಡ್ ನಿಯಮ ಅನುಸರಿಸಿ ಪಾದಯಾತ್ರೆ ಮಾಡೋಣ. ನಿಯಮ ಪಾಲಿಸಿ ಐವರಾದರೂ ನಡೆದುಕೊಂಡು ಹೋಗೋಣ. ನಮ್ಮ ಜತೆ ಜನರು ಬರದಂತೆ ವಿನಂತಿ ಮಾಡಿಕೊಳ್ಳೋಣ ಎಂದು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾದಯಾತ್ರೆ ಮುಂದುವರೆಸುವ ಡಿ.ಕೆ.ಶಿವಕುಮಾರ್‌ ನಿಲುವಿಗೆ ಚಲುವರಾಯಸ್ವಾಮಿ ಬೆಂಬಲ ನೀಡಿದ್ದಾರೆ. ಮಾಜಿ ಸಚಿವ ಯು.ಟಿ.ಖಾದರ್ ವಿರೋಧ ವ್ಯಕ್ತಪಡಿಸಿದ್ದು, ಮೇಕೆದಾಟು ಪಾದಯಾತ್ರೆಯನ್ನು ಮುಂದೂಡೋಣ. ಕೊವಿಡ್ ಕಡಿಮೆ ಆದ ಬಳಿಕ ಮಾಡೋಣ ಎಂದಿದ್ದಾರೆ. ಕೋರ್ಟ್‌ನಲ್ಲಿ ಆಗುವ ಪರಿಣಾಮ ನೋಡಿ ನಿರ್ಧರಿಸೋಣ. ಕೋರ್ಟ್‌ಗೆ ಗೌರವ ಕೊಟ್ಟು ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ಸಭೆಯಲ್ಲಿ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

Mekedatu Padayatra Live: ತಕ್ಷಣ ಪಾದಯಾತ್ರೆ ನಿಲ್ಲಿಸಿ.. ರಣದೀಪ್ ಸುರ್ಜೇವಾಲ ಮೂಲಕ ಸಂದೇಶ ರವಾನೆ!

‘ಕಾಂಗ್ರೆಸ್​ ಸೇರಿದ ತಂಗಿ ಪರ ಪ್ರಚಾರ ಮಾಡಲ್ಲ’; ಖಡಕ್​ ನಿರ್ಧಾರ ತಿಳಿಸಿದ ಸೋನು ಸೂದ್​

Published On - 11:43 am, Thu, 13 January 22

Loading...
Unable to load recommendations.
Follow Us