ಜ್ಯೋತಿರಾದಿತ್ಯ ಸಿಂಧಿಯಾರನ್ನು 24 ಕ್ಯಾರೆಟ್ ದೇಶದ್ರೋಹಿ ಎಂದ ಜೈರಾಮ್ ರಮೇಶ್
ಕಾಂಗ್ರೆಸ್‌ನ ಮಾಧ್ಯಮ ಮುಖ್ಯಸ್ಥರಾಗಿರುವ ರಮೇಶ್, ಕೇಂದ್ರ ಸಚಿವ ಸಿಂಧ್ಯಾ ಅವರನ್ನು 24 ಕ್ಯಾರೆಟ್ ದೇಶದ್ರೋಹಿ ಎಂದು ಕರೆದಿದ್ದಾರೆ. ಯಾವುದೇ ಬಂಡಾಯ ನಾಯಕರು ಹಿಂತಿರುಗಲು ಬಯಸಿದರೆ ಪಕ್ಷದ ನಿಲುವು ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್...
ದೆಹಲಿ: ಪಕ್ಷ ತೊರೆದ ನಂತರ ಗೌರವ ರೀತಿಯಲ್ಲಿ ಮೌನವಹಿಸಿರುವ ಕಪಿಲ್ ಸಿಬಲ್ (Kapil Sibal) ಅವರಂತಹವರಿಗೆ ಮರಳಲು ಅವಕಾಶ ನೀಡಬಹುದು, ಆದರೆ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅಥವಾ ಹಿಮಂತ ಬಿಸ್ವಾ ಶರ್ಮಾ ಅವರಂಥವರಿಗಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಶುಕ್ರವಾರ ಹೇಳಿದ್ದಾರೆ. ಕಾಂಗ್ರೆಸ್‌ನ ಮಾಧ್ಯಮ ಮುಖ್ಯಸ್ಥರಾಗಿರುವ ರಮೇಶ್, ಕೇಂದ್ರ ಸಚಿವ ಸಿಂಧ್ಯಾ ಅವರನ್ನು 24 ಕ್ಯಾರೆಟ್ ದೇಶದ್ರೋಹಿ ಎಂದು ಕರೆದಿದ್ದಾರೆ. ಯಾವುದೇ ಬಂಡಾಯ ನಾಯಕರು ಹಿಂತಿರುಗಲು ಬಯಸಿದರೆ ಪಕ್ಷದ ನಿಲುವು ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್, ಕಾಂಗ್ರೆಸ್ ತೊರೆದ ಜನರನ್ನು ಮರಳಿ ಸ್ವಾಗತಿಸಬಾರದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಪಕ್ಷ ತೊರೆದು ದುರುಪಯೋಗಪಡಿಸಿಕೊಂಡವರಿದ್ದಾರೆ. ಹಾಗಾಗಿ ಅವರನ್ನು ವಾಪಸ್ ತೆಗೆದುಕೊಳ್ಳಬಾರದು. ಆದರೆ ಪಕ್ಷವನ್ನು ಘನತೆಯಿಂದ ತೊರೆದು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕತ್ವದ ಬಗ್ಗೆ ಘನತೆಯ ಮೌನವನ್ನು ಅನುಸರಿಸುವ ಜನರಿದ್ದಾರೆ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಶುಕ್ರವಾರ ಮಧ್ಯಪ್ರದೇಶದ ಅಗರ ಮಾಲ್ವಾ ತಲುಪಿದ ಸಂದರ್ಭದಲ್ಲಿ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
“ಕೆಲವು ಕಾರಣಕ್ಕಾಗಿ ಪಕ್ಷವನ್ನು ತೊರೆದ ನನ್ನ ಮಾಜಿ ಸಹೋದ್ಯೋಗಿ ಮತ್ತು ಉತ್ತಮ ಸ್ನೇಹಿತ ಕಪಿಲ್ ಸಿಬಲ್ ಬಗ್ಗೆ ನಾನು ಯೋಚಿಸಬಹುದು. ಅವರು ಸಿಂಧಿಯಾ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರಂತೆ ಅಲ್ಲ, ಸಿಬಲ್ ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಗೌರವಯುತ ಮೌನವನ್ನು ಹೊಂದಿದ್ದಾರೆ. ಹಾಗಾಗಿ ಘನತೆಯನ್ನು ಉಳಿಸಿಕೊಂಡಿರುವ ಇಂತಹ ನಾಯಕರನ್ನು ಮರಳಿ ಸ್ವಾಗತಿಸಬಹುದೆಂದು ನಾನು ಭಾವಿಸುತ್ತೇನೆ, ಆದರೆ ಪಕ್ಷವನ್ನು ತೊರೆದು ಪಕ್ಷ ಮತ್ತು ಅದರ ನಾಯಕತ್ವವನ್ನು ಒದೆಯುವವರನ್ನು ಮರಳಿ ಸ್ವಾಗತಿಸಬಾರದು ಎಂದು ಅವರು ಹೇಳಿದರು.
ಸಿಂಧಿಯಾ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ, ಮಧ್ಯಪ್ರದೇಶ ಮುಖ್ಯಮಂತ್ರಿ ಅಥವಾ ರಾಜ್ಯಸಭಾ ಸ್ಥಾನ ನೀಡಿದ್ದರೆ ಕಾಂಗ್ರೆಸ್ ತೊರೆಯುತ್ತಿದ್ದರೇ ಎಂಬ ಪ್ರಶ್ನೆಗೆ ರಮೇಶ್, “ಸಿಂಧಿಯಾ ಅವರು ಗದ್ದರ್’ (ದೇಶದ್ರೋಹಿ), ನಿಜವಾದ ದೇಶದ್ರೋಹಿ ಮತ್ತು 24 ಕ್ಯಾರೆಟ್ ದೇಶದ್ರೋಹಿ.” ಎಂದಿದ್ದಾರೆ.
ರಮೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರವಾಲ್, ಸಿಂಧಿಯಾ “ಬಲವಾದ ಸಾಂಸ್ಕೃತಿಕ ಬೇರುಗಳನ್ನು ಹೊಂದಿರುವ 24 ಕ್ಯಾರೆಟ್ ದೇಶಭಕ್ತ” ಎಂದು ಹೇಳಿದರು. ಸಿಂಧಿಯಾ ಮತ್ತು ಶರ್ಮಾ ಇಬ್ಬರೂ ತಮ್ಮ ಕೆಲಸಕ್ಕೆ “24 ಕ್ಯಾರೆಟ್” ಬದ್ಧತೆಯನ್ನು ಹೊಂದಿದ್ದಾರೆ.ರಮೇಶ್ ಅವರ ಹೇಳಿಕೆಗಳು “ಅಸಂಸ್ಕೃತ” ಮತ್ತು “ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ” ಎಂದು ಅಗರವಾಲ್ ಹೇಳಿದ್ದಾರೆ.
ಶರ್ಮಾ ಅವರು 2015 ರಲ್ಲಿ ಪಕ್ಷದ ಚುನಾವಣಾ ಸೋಲಿಗೆ ರಾಹುಲ್ ಗಾಂಧಿಯವರ ಅವ್ಯವಸ್ಥೆ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಅವರು ಕೇಂದ್ರ ಸಚಿವರಾದರ, ನಂತರ ಅಸ್ಸಾಂನ ಮುಖ್ಯಮಂತ್ರಿಯಾದರು. ಸಿಂಧಿಯಾ 2020 ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಇದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಯಿತು. ನಂತರ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು ಮತ್ತು ನಾಗರಿಕ ವಿಮಾನಯಾನ ಸಚಿವರಾದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ