BJP Tweet: ಭಯೋತ್ಪಾದನೆ ಜೊತೆ ಕಾಂಗ್ರೆಸ್​​ಗೆ ನಂಟು; ಸಿದ್ದರಾಮಯ್ಯಗೆ ಬಿಜೆಪಿ ಟ್ವೀಟ್ ಪಾಠ

| Updated By: ಆಯೇಷಾ ಬಾನು

Updated on: Jan 25, 2023 | 7:31 AM

ಭಯೋತ್ಪಾದನೆ ಜೊತೆ ಕಾಂಗ್ರೆಸ್​​ಗಿರುವ ಸಂಬಂಧದ ಬಗ್ಗೆ ತಿಳಿಯಿರಿ ಎಂದು ಟ್ವೀಟ್​​ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ಟಾಂಗ್ ಕೊಟ್ಟಿದೆ.

BJP Tweet: ಭಯೋತ್ಪಾದನೆ ಜೊತೆ ಕಾಂಗ್ರೆಸ್​​ಗೆ ನಂಟು; ಸಿದ್ದರಾಮಯ್ಯಗೆ ಬಿಜೆಪಿ ಟ್ವೀಟ್ ಪಾಠ
ವಿಪಕ್ಷ ನಾಯಕ ಸಿದ್ದರಾಮ್ಯಯ್ಯ
Follow us on

ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತ ಕಾಲೆಳೆದುಕೊಳ್ಳುವುದು ಹೆಚ್ಚಾಗಿದೆ. ಸದ್ಯ ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವೀಟ್​ ವಾರ್​​ ಮಾಡಿದೆ. ಭಯೋತ್ಪಾದನೆ ಜೊತೆ ಕಾಂಗ್ರೆಸ್​​ಗಿರುವ ಸಂಬಂಧದ ಬಗ್ಗೆ ತಿಳಿಯಿರಿ ಎಂದು ಟ್ವೀಟ್​​ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ಟಾಂಗ್ ಕೊಟ್ಟಿದೆ.

ಸಿದ್ದರಾಮಯ್ಯನವರೇ ಆ ಕಾಲದಲ್ಲಿ ನೀವಿನ್ನೂ ಕಾಂಗ್ರೆಸ್​ಗೆ ಹೋಗಿರಲಿಲ್ಲ. ಭಯೋತ್ಪಾದನೆ ಜೊತೆಗಿನ ಸಂಬಂಧದ ಬಗ್ಗೆ ಡಿಕೆಶಿ ನಿಮಗೆ ತಿಳಿಸಿರಲ್ಲ. ಹಾಗಾಗಿ ನಾವು ಈ ವಿಚಾರವನ್ನು ನಿಮಗೆ ತಿಳಿಸಬೇಕಾಯಿತು. ಬಸ್​​ನಲ್ಲಿ ಬಿಡುವು ಮಾಡಿಕೊಂಡು ಓದಿದರೆ ಜ್ಞಾನ ಸಂಪಾದಿಸಿಕೊಳ್ಳಿ ಎಂದು ಟ್ವೀಟ್​​ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ಟಾಂಗ್ ಕೊಟ್ಟಿದೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ಪಾಪದಿಂದಲೇ ನಾನು ಕಾಂಗ್ರೆಸ್‌ ಬಿಟ್ಟೆ; ಸಚಿವ ಡಾ.ಕೆ.ಸುಧಾಕರ್

ಭಯೋತ್ಪಾದನೆ ಜೊತೆ ಕೈ ಮಿಲಾಯಿಸಿದ ಇತಿಹಾಸ ಕಾಂಗ್ರೆಸ್ಸಿಗಿದೆ. ಕೊನೆಗೆ ಅದೇ ವಿಚಾರಕ್ಕೆ ರಾಜೀವ್ ಗಾಂಧಿ ಹತ್ಯೆಯಾಯಿತು. ಆದರೆ ಈ ರೀತಿ ಇದ್ದ ಸಂಬಂಧ ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು. ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು ಎಂಬ ಕೋಪ ಎಲ್​​ಟಿಟಿಇಗೆ ಇತ್ತು. ಶ್ರೀಲಂಕಾಗೆ ಶಾಂತಿ ಪಾಲನಾ ಪಡೆ ಕಳುಹಿಸಿದ ರಾಜೀವ್ ಗಾಂಧಿ ಭಾರತದ ಗುಪ್ತಚರ ಸಂಸ್ಥೆ ಜೊತೆ ಭಾರತೀಯ ಸೇನೆಯನ್ನೇ ಯುದ್ಧಕ್ಕಿಳಿಸಿದ್ರು. ಶ್ರೀಲಂಕಾ ಸೇನೆ ಜೊತೆ ಎಲ್‌ಟಿಟಿಇ ಯುದ್ಧ ಮಾಡಿದಾಗಲೆಲ್ಲ ಅವರಿಗೆ ಶಸ್ತ್ರಾಸ್ತ್ರ, ವೈದ್ಯಕೀಯ ನೆರವೂ ಸಿಗುತ್ತಿದುದು ಭಾರತದಲ್ಲಿಯೇ. ಅವರ ನಿತ್ಯದ ಆಗುಹೋಗುಗಳು ವರದಿಯಾಗುತ್ತಿದ್ದದ್ದು ಕಾಂಗ್ರೆಸ್​ಗೆ. ತಾವು ಈಗ ಇರುವಂಥದ್ದು ಭಯೋತ್ಪಾದನೆಯ ಲೆಕ್ಕ ಇಟ್ಟ ಪಕ್ಷದಲ್ಲಿ ಎಂದು ಟ್ವೀಟ್​​ ಮೂಲಕ ಸಿದ್ದರಾಮಯ್ಯಗೆ ರಾಜ್ಯ ಬಿಜೆಪಿ ಘಟಕ ಟೀಕಿಸಿದೆ.

ಬಂಡುಕೋರರನ್ನು ಬೆಳೆಸಿ ನೆರೆದೇಶಗಳ ಮೇಲೆ ನಿಯಂತ್ರಣ ಸಾಧಿಸುವುದು ಇಂದಿರಾ ಗಾಂಧಿ ಸೂತ್ರ. ಎಲ್‌ಟಿಟಿಇ ಸಕ್ರಿಯವಾಗಿದ್ದರೆ ಶ್ರೀಲಂಕಾವನ್ನು ನಿಯಂತ್ರಿಸುವ ಲೆಕ್ಕಾಚಾರವಿತ್ತು. ಹಾಗಾಗಿ ಎಲ್‌ಟಿಟಿಇಯನ್ನ ಭಾರತಕ್ಕೆ ಕರೆಸಿ ಶಸ್ತ್ರಾಸ್ತ್ರ ಜೊತೆ ತರಬೇತಿ ನೀಡಿದ್ರು. ನಮ್ಮ ಇನ್ನೊಬ್ಬ ಪ್ರಧಾನಿಯವರನ್ನು ಬಲಿತೆಗೆದುಕೊಂಡದ್ದು ಎಲ್‌ಟಿಟಿಇ. ಆದರೆ ಎಲ್‌ಟಿಟಿಇಗೆ ಸಹಾಯ ಮಾಡಿದ್ದು ಯಾರು ಎಂದು ಹುಡುಕಿದರೆ ಬಾಣ ಪುನಃ ಕಾಂಗ್ರೆಸ್‌ ಕಡೆಗೇ ತಿರುಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಎಲ್‌ಟಿಟಿಇ ಪ್ರಭಾಕರನ್‌ನನ್ನು ಪೋಷಿಸಿ ಬೆಳೆಸಿದ್ದು ಯಾರು? ಎಂದು ಟ್ವೀಟ್​​ ಮೂಲಕ ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:31 am, Wed, 25 January 23