ಸಿದ್ದರಾಮಯ್ಯನವರ ಪಾಪದಿಂದಲೇ ನಾನು ಕಾಂಗ್ರೆಸ್‌ ಬಿಟ್ಟೆ; ಸಚಿವ ಡಾ.ಕೆ.ಸುಧಾಕರ್

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ಕೆಸರೆರೆಚಾಟ ಜೋರಾಗಿದೆ. ಅದರಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪಾಪದಿಂದಲೇ ನಾನು ಕಾಂಗ್ರೆಸ್​ ಬಿಡಬೇಕಾಯಿತು ಎಂದು ಸಚಿವ ಡಾ.ಕೆ ಸುಧಾಕರ್​ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರ ಪಾಪದಿಂದಲೇ ನಾನು ಕಾಂಗ್ರೆಸ್‌ ಬಿಟ್ಟೆ; ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 24, 2023 | 6:52 PM

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾದಳದಲ್ಲಿದ್ದು ಎಲ್ಲಾ ಬಗೆಯ ಅಧಿಕಾರ ಅನುಭವಿಸಿದ ಅವರು ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ ಎಂದು ಅವರ‌ ಕಚೇರಿ ಸಿಬ್ಬಂದಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌ನವರು ಪ್ರಜಾ ಧ್ವನಿ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗಿಲ್ಲ. ಅದರ ಬದಲಿಗೆ ವೈಯಕ್ತಿಕ ಆರೋಪವನ್ನು ಮಾಡಿದ್ದಾರೆ. ಮುಖ್ಯಮಂತ್ರಿ, ಸಚಿವರಾಗಿದ್ದವರು ಪ್ರಜಾಪ್ರಭುತ್ವದಲ್ಲಿ ಹೇಗೆ ಮಾತಾಡಬೇಕೆಂದು ಮೊದಲು ಕಲಿಯಬೇಕು. ಬಾರ್‌ನಲ್ಲಿ ಕುಡಿದು ಬಂದಂತೆ ಸಭೆಯಲ್ಲಿ ಮಾತನಾಡಬಾರದು ಎಂದರು.

ಕಾಂಗ್ರೆಸ್‌ನಲ್ಲಿ ನನಗೆ ಟಿಕೆಟ್‌ ದೊರೆಯುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ನನಗೆ 2013ರಲ್ಲಿ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರುಗಳಾದ ಎಸ್‌.ಎಂ.ಕೃಷ್ಣ ಹಾಗೂ ಡಾ.ಜಿ.ಪರಮೇಶ್ವರ್‌ ಅವರು. ನಾನು ಸಿದ್ದರಾಮಯ್ಯ ಅವರ ಬಳಿ ಟಿಕೆಟ್​ಗಾಗಿ ಏನೂ ಸಹಾಯ ಕೇಳಿಯೇ ಇಲ್ಲ. ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿದ್ದೆ. ಆದರೆ ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ ಎಂದಿದ್ದಾರೆ.

ಚುನಾಯಿತ ಪ್ರತಿನಿಧಿಗಳು ತಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಆ ಎಲ್ಲಾ ಗುಣಮಟ್ಟ ಬಿಟ್ಟು ಕೀಳಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದ ಸಚಿವ ಡಾ.ಕೆ ಸುಧಾಕರ್​

ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್‌ ಪಕ್ಷದಲ್ಲಿ ಮೊದಲಿನಿಂದಲೂ ಇದ್ದರೇ? ಅವರು ಮೊದಲು ಜನತಾದಳದಲ್ಲಿದ್ದು ಅದೇ ಪಕ್ಷದ ಸಚಿವ, ಉಪಮುಖ್ಯಮಂತ್ರಿಯಾದರು. ಅಂದಮೇಲೆ ಕಾಂಗ್ರೆಸ್​ಗೆ ಏಕೆ ಬಂದರು? ಆಶಯಕ್ಕಾ? ಬದ್ಧತೆಗಾ? ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ? ಇಷ್ಟು ವಯಸ್ಸಾಗಿರುವವರೇ ಹೀಗೆ ಮಾಡುವಾಗ ಯುವಕರಾದವರು ನಾವೇನು ಮಾಡಬೇಕು? ಸಿದ್ದರಾಮಯ್ಯನವರು ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ, ಅನೈತಿಕವಾಗಿ ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಲು ನಮ್ಮನ್ನು ಬಲಿಪಶು ಮಾಡಿದ್ದರು. ನಾನು ನನ್ನ ಫಲಿತಾಂಶ ನೋಡಿ ದೇವನಹಳ್ಳಿಗೆ ಹೋಗುವ ವೇಳೆಗೆ ಸಿದ್ದರಾಮಯ್ಯನವರು ಜನತದಾಳದ ಕೈ ಹಿಡಿದುಕೊಂಡುಬಿಟ್ಟಿದ್ದರು. ಇದು ಸರಿಯಲ್ಲ, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸ್ಪಷ್ಟವಾಗಿ ಹೇಳಿದ್ದೆ. ಸಿದ್ದರಾಮಯ್ಯನವರ ಮನೆಗೆ ಹೋಗಿ ಮಾತನಾಡಿದಾಗ ರಾಹುಲ್‌ ಗಾಂಧಿಯವರ ಮಾತಿನಂತೆ ಒಪ್ಪಿಕೊಂಡು ಬಿಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ ನಾವೇನೂ ಒಪ್ಪಿಕೊಳ್ಳಬೇಕು ಎಂದೇನಿಲ್ಲ ಎಂದಿದ್ದರು.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್‌ ಕಾಲೇಜು ತಾವೇ ತಂದಿದ್ದು ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಬಂದು ಆರು ವರ್ಷದ ಮಗುವನ್ನು ಕೇಳಿದರೂ ಯಾರು ಈ ಯೋಜನೆ ತಂದಿದ್ದು ಎಂದು ಹೇಳುತ್ತದೆ. ಎಚ್‌ಎನ್‌ ವ್ಯಾಲಿ ಬಗ್ಗೆ ಇವರನ್ನೂ ಸೇರಿ ಶಿವಶಂಕರರೆಡ್ಡಿ ಹಾಗೂ ರಮೇಶ್‌ಕುಮಾರ್‌ ಅವರಿಗೂ ಗೊತ್ತೇ ಇರಲಿಲ್ಲ. ಇದೇ ಸಿದ್ದರಾಮಯ್ಯನವರು ಎಚ್‌ಎನ್‌ ವ್ಯಾಲಿ ಯೋಜನೆ ಜಾರಿಯಾಗಲು ಸುಧಾಕರ್‌ ಕಾರಣ ಎಂದು ಇಲ್ಲಿಗೇ ಬಂದು ಭಾಷಣ ಮಾಡಿದ್ದರು. ಅಂದು ಒಂದು ಮಾತನಾಡುತ್ತಾರೆ, ಈಗ ಮತ್ತೊಂದು ಮಾತನಾಡುತ್ತಾರೆ. ಭಾಷಣ ಮಾಡಲಿ ಆದರೆ ಅದರಲ್ಲಿ ಸತ್ಯ ಇರಬೇಕು ಎಂದರು.

ಇದನ್ನೂ ಓದಿ:ಸಚಿವನಾಗಲು ಪರಮೇಶ್ವರ್​ ಕಾರಣವೆಂದ ಸುಧಾಕರ್​, ನಮ್ಮಿಬ್ಬರದು ತಂದೆ-ಮಗನ ಸಂಬಂಧವೆಂದ ಪರಮೇಶ್ವರ್​

ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಸಿದ್ದರಾಮಯ್ಯನವರು

ಸಿದ್ದರಾಮಯ್ಯನವರು ಒಂದೊಂದೇ ಕ್ಷೇತ್ರ ಹುಡುಕಾಡುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ ಬಳಿಕ ಕೋಲಾರಕ್ಕೆ ಹೋಗಿದ್ದಾರೆ. ಪ್ರತಿ ಬಾರಿ ಅನ್ನಭಾಗ್ಯ ಕೊಟ್ಟೆ, ಅಕ್ಕಿ ಕೊಟ್ಟೆ ಎಂದು ಹೇಳುತ್ತಾರೆ. ವಾಸ್ತವ ಏನೆಂದರೆ ಈ ಯೋಜನೆಯಲ್ಲಿ ಒಂದು ಕೆಜಿ ಅಕ್ಕಿಗೆ 32 ರೂ. ನಲ್ಲಿ 29 ರೂಪಯಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡುತ್ತಿದೆ. ಆದರೆ ಪ್ರಧಾನಿ ಮೋದಿ ಅದನ್ನು ಹೇಳಿಕೊಳ್ಳಲೇ ಇಲ್ಲ. ಸಿದ್ದರಾಮಯ್ಯನವರು ಅಕ್ಕಿ ನೀಡಲಿಲ್ಲ, ಕೇವಲ ಚೀಲ ನೀಡಿದ್ದಾರೆ.

ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದನ್ನು ನಾನು ಕೇಳಿದ್ದೇನೆ. ಬಿಬಿಎಂಪಿಯಲ್ಲಿ ಕಸ ವಿಲೇವಾರಿಗೆ ಟೆಂಡರ್‌ ಮೊತ್ತ ಹೆಚ್ಚಳ ಮಾಡಿದ್ದು ಏಕೆ ಎಂದು ಕೇಳಿದ್ದೆ. ಆದರೆ ಅದಕ್ಕೆ ಯಾರೂ ಉತ್ತರ ನೀಡಲಿಲ್ಲ. ಇಂತಹ ಸರ್ಕಾರದ ಮಟ್ಟದ ಪ್ರಶ್ನೆಗಳಿಗೆ ಸಿದ್ದರಾಮಯ್ಯನವರು ಉತ್ತರ ನೀಡಿಲ್ಲ. ಆದರೆ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ಕೇವಲ ರಾಜಕೀಯ ಕೆಸರೆರೆಚಾಟ ಮಾಡುತ್ತಾರೆ. ಅವರು ಮುಖ್ಯಮಂತ್ರಿಯಾಗಲು ನನ್ನ ಸಹಕಾರವೂ ಕಾರಣ. ಹಿಂದೆ ಇಲ್ಲಿ ಕಾಂಗ್ರೆಸ್‌ ಅಧಿಕಾರ ಪಡೆದಿರಲಿಲ್ಲ. ಇಲ್ಲಿ ಜನತಾದಳದ ಶಾಸಕರಿದ್ದರು. ನಾನು ಬಂದ ಮೇಲೆ ದಳದಲ್ಲಿದ್ದ ಸೀಟನ್ನು ಕಾಂಗ್ರೆಸ್‌ಗೆ ನೀಡಿದರು. ಆದರೆ ಸಿದ್ದರಾಮಯ್ಯನವರು ಮಾಡಿದ ಪಾಪದ ಕೆಲಸದಿಂದ ನಾನು ಕಾಂಗ್ರೆಸ್‌ ತೊರೆಯಬೇಕಾಯಿತು. ವ್ಯಕ್ತಿಯ ಚಾರಿತ್ರ್ಯಹರಣ ಮಾಡುವುದು ಬಹಳ ಸುಲಭ, ಆದರೆ ಅದನ್ನು ಗಳಿಸುವುದು ಕಷ್ಟ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಸಿಎಂರನ್ನು ಕೇಳಬೇಕು: ಹರಿಪ್ರಸಾದ್
ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಸಿಎಂರನ್ನು ಕೇಳಬೇಕು: ಹರಿಪ್ರಸಾದ್
ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್ ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್
ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್ ಮುಡಾ ಹಿಂದಿನ ಆಯುಕ್ತ ಡಿಬಿ ನಟೇಶ್
ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಪಿಎಂ ಮೋದಿ ಹಂಚಿಕೊಂಡ ಬ್ರೆಜಿಲ್​ನ ಜಿ-20 ಶೃಂಗಸಭೆಯ ಮೊದಲ ದಿನದ ಝಲಕ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಕೇವಲ ಒಂದು ಆರೋಪದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ಸಿಕ್ಕಿದೆ: ಪರಮೇಶ್ವರ್
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ
ಉಡುಪಿ ಜಿಲ್ಲೆ ಪೀತೆಬೈಲ್ ಅರಣ್ಯಪ್ರದೇಶದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ
ಇಟಲಿ ಪ್ರಧಾನಿ ಮೆಲೋನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಇಟಲಿ ಪ್ರಧಾನಿ ಮೆಲೋನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಸಚಿವ ಸ್ಥಾನಕ್ಕೆ ಬೇಡಿಕೆಯಲ್ಲ, ನನ್ನ ಹಕ್ಕು ಎಂದ ಶಾಸಕ ನರೇಂದ್ರಸ್ವಾಮಿ
ಸಚಿವ ಸ್ಥಾನಕ್ಕೆ ಬೇಡಿಕೆಯಲ್ಲ, ನನ್ನ ಹಕ್ಕು ಎಂದ ಶಾಸಕ ನರೇಂದ್ರಸ್ವಾಮಿ
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್