ಸಚಿವನಾಗಲು ಪರಮೇಶ್ವರ್ ಕಾರಣವೆಂದ ಸುಧಾಕರ್, ನಮ್ಮಿಬ್ಬರದು ತಂದೆ-ಮಗನ ಸಂಬಂಧವೆಂದ ಪರಮೇಶ್ವರ್
ನನ್ನದು ಮತ್ತು ಸುಧಾಕರ್ರದ್ದು ತಂದೆ-ಮಗನ ಸಂಬಂಧ ಎಂದು ಮಾಜಿ ಡಿಸಿಎಂ ಡಾ. ಪರಮೇಶ್ವರ್ ಅವರು ಹೇಳಿದರು.
ತುಮಕೂರು: ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವನಾಗಲು ಮಾಜಿ ಡಿಸಿಎಂ ಡಾ. ಪರಮೇಶ್ವರ್ (G parameshwar) ಅವರು ಕಾರಣ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ (Sudhakar) ಹೇಳಿದರೆ, ನನ್ನದು ಮತ್ತು ಸುಧಾಕರ್ರದ್ದು ತಂದೆ-ಮಗನ ಸಂಬಂಧ ಎಂದು ಡಾ. ಪರಮೇಶ್ವರ್ ಅವರು ಹೇಳಿದರು. ಜಿಲ್ಲೆಯ ಕೊರಟಗೆರೆ ಕ್ಷೇತ್ರ ವ್ಯಾಪ್ತಿಯ ದೊಡ್ಡಸೆಗ್ಗರೆ ಗ್ರಾಮ ಅವರು ಮಾತನಾಡಿ, ಬಹಳ ಸೂಕ್ಷ್ಮ ದೃಷ್ಟಿಯಿಂದ ನಾವು ಮಂತ್ರಿಗಳನ್ನು ನೋಡುತ್ತೇವೆ. ಎಲ್ಲಾ ಸಮುದಾಯಗಳ ಅಭಿವೃದ್ಧಿ ಮಾಡಿದ ಸಚಿವರೆಂದರೆ ಅದು ಸುಧಾಕರ ಅವರು ಮಾತ್ರ. ಕೊರೊನಾ ಬಂದಾಗ ಇವರಿಗೆ ಬಂದ ಕಷ್ಟ ಸಿಎಂಗೂ ಬಂದಿಲ್ಲ. ಕೊರೊನಾ ಸಂದರ್ಭದಲ್ಲಿ ನಾವೆಲ್ಲ ಬೈದಿದ್ದೇವೆ. ಕುರಿಗಳಿಗೆ ಹಾಕಿದಂತೆ ಮಾಸ್ಕ್ ಹಾಕಬೇಕು ಅಂತಾ ಸಿಟ್ಟಾಗಿದ್ದೇವೆ. ಆ ವೇಳೆ ಕ್ರಮ ತೆಗೆದುಕೊಂಡು ಲಕ್ಷಾಂತರ ಪ್ರಾಣ ಉಳಿಸಿದ್ದಾರೆ. ಸುಧಾಕರ್ ಅವರ ಕ್ರಿಯಾಶೀಲತೆ ನಿಜವಾಗಲೂ ಮೆಚ್ಚುವಂತಹದ್ದು ಎಂದು ಹೇಳಿದರು.
ಬರೀ ಬೈಯುವುದು ವಿರೋಧ ಪಕ್ಷದ ಕೆಲಸ ಅಲ್ಲ, ಒಳ್ಳೆಯ ಕೆಲಸ ಮಾಡಿದಾಗ ಹೊಗಳುತ್ತೇವೆ ಕೂಡ: ಡಾ. ಪರಮೇಶ್ವರ್
ನಾವು ವಿರೋಧ ಪಕ್ಷದಲ್ಲಿದ್ದ ಮಾತ್ರಕ್ಕೆ ಬರೀ ಬೈಯ್ಯಬೇಕು ಅಂತಲ್ಲ. ಒಳ್ಳೆ ಕೆಲಸ ಮಾಡಿದಾಗ ಒಳ್ಳೆ ಕೆಲಸ ಮಾಡಿದ್ದಾರೆಂದು ಹೇಳಬೇಕು. ನೀವು ನಮ್ಮ ಭಾಗಕ್ಕೆ ಬಂದು ದೇವರು ಥರಾ ಬಂದಿದ್ದೀರಿ. ರೋಗಿಗೆ ವೈದ್ಯರೇ ದೇವರಿದ್ದಂಗೆ. ನಮ್ಮ ಗ್ರಾಮಕ್ಕೆ ನೀವು ಆರೋಗ್ಯ ಕೇಂದ್ರ ಕೊಟ್ಟು ವೈದ್ಯರನ್ನು ನೀಡಿದ್ದೀರಿ. ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಕೊಡಲಿ. ನಾವು ನಮ್ಮ ಹುಡುಗ ಅಂತ ಹೇಳುತ್ತೇವೆ. ಸುಧಾಕರ್ಗೆ ಹೆಚ್ಚಿನ ಅಧಿಕಾರ ಕೊಡಲಿ ಅಂತಾ ಪ್ರಾರ್ಥಿಸುತ್ತೇನೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ನೀಡಲು ಕೋವಿಶಿಲ್ಡ್ ಕೊರತೆ ಇದೆ ಎಂದ ಬಿಬಿಎಂಪಿ ಆಯುಕ್ತ, ಕೊರತೆ ಇಲ್ಲ ಎಂದ ಸಚಿವ
ಕೊರೊನಾ ಪಕ್ಷ ನೋಡಿ ಬರಲ್ಲ
ಈಗ ಮತ್ತೆ ಕೊರೊನಾ ಶುರುವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳೂ ಹಾಗೂ ಸುಧಾಕರ ಅವರು ಉತ್ತರ ಕೊಟ್ಟಿದ್ದಾರೆ. ಕೊರೊನಾ ಪಕ್ಷ ನೋಡಿ ಬರಲ್ಲ. ಕಾಂಗ್ರೆಸ್ಗೆ ಜಾಸ್ತಿ ಬರುತ್ತೆ, ಬಿಜೆಪಿಗೆ ಕಡಿಮೆ ಬರುತ್ತೆ ಅಂತ ಇಲ್ಲ. ನಡುವೆ ಜನತಾದಳವೂ ಇದೆ. ಅದಕ್ಕೂ ಬರಬಹುದು. ಹೀಗಾಗಿ ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಮಾಜಿ ಡಿಸಿಎಂ ಡಾ. ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ, ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡಾಯ: ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವನಾಗಲು ಪರಮೇಶ್ವರ್ ಕಾರಣ: ಡಾ. ಕೆ. ಸುಧಾಕರ್
ಇನ್ನು ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, 1993ರಲ್ಲಿ ಡಾ. ಜಿ. ಪರಮೇಶ್ವರ್ ನನಗೆ MBBS ಸೀಟು ಕೊಟ್ಟಿದ್ದರು. ಪ್ರಥಮ ಬಾರಿ ಶಾಸಕನಾಗಲು 2013ರಲ್ಲಿ ನಾನು ಶಾಸಕನಾಗಲು ಅವಕಾಶ ಮಾಡಿಕೊಟ್ಟಿದ್ದರು. ನಾನು ಇವತ್ತು ಬೇರೆ ಪಕ್ಷದಲ್ಲಿ ಇದ್ದೇನೆ ಅದು ಬೇರೆ ಮಾತು. ಪರಮೇಶ್ವರ್ ಆತ್ಮೀಯತೆಯನ್ನು ನಾನು ಯಾವತ್ತೂ ಮರೆಯಲ್ಲ. ತುಮಕೂರು ಅಭಿವೃದ್ಧಿ ವಿಚಾರದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.