AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ಮತದಾನ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ಒಪ್ಪಿದ ಕಾಂಗ್ರೆಸ್ ನಾಯಕತ್ವ

ಸೆಪ್ಟೆಂಬರ್ 6 ರಂದು ಮಿಸ್ತ್ರಿ ಅವರಿಗೆ ಬರೆದ ಜಂಟಿ ಪತ್ರದಲ್ಲಿ, ಐವರು ಸಂಸದರು ಪಕ್ಷದ ಉನ್ನತ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತಿ  ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಎಲ್ಲಾ ಮತದಾರರು ಮತ್ತು ಸಂಭಾವ್ಯ ಅಭ್ಯರ್ಥಿಗಳಿಗೆ..

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ಮತದಾನ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ಒಪ್ಪಿದ ಕಾಂಗ್ರೆಸ್ ನಾಯಕತ್ವ
ಸೋನಿಯಾ - ರಾಹುಲ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 11, 2022 | 3:42 PM

Share

ಕೆಲವು ಹಿರಿಯ ನಾಯಕರ ಬೇಡಿಕೆಯ ನಂತರ,  ಪಕ್ಷದ  ಮುಂದಿನ ಅಧ್ಯಕ್ಷರ ನಿರ್ಣಾಯಕ ಚುನಾವಣೆಗೆ (Congress president election )ಮುಂಚಿತವಾಗಿ ಮತದಾನ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಕಾಂಗ್ರೆಸ್ ಉನ್ನತ ನಾಯಕತ್ವವು ಒಪ್ಪಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸುವ ಯಾರಾದರೂ ಚುನಾವಣಾ ಕಾಲೇಜನ್ನು ಒಳಗೊಂಡಿರುವ ಎಲ್ಲಾ 9,000 ಪ್ರತಿನಿಧಿಗಳ ಪಟ್ಟಿಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಪಟ್ಟಿಯು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಕಚೇರಿಯಲ್ಲಿ ಸೆಪ್ಟೆಂಬರ್ 20 ರಿಂದ ಲಭ್ಯವಿರುತ್ತದೆ ಎಂದು ಕಾಂಗ್ರೆಸ್ ನಾಯಕ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ. ಶಶಿ ತರೂರ್ (Shashi Tharoor), ಕಾರ್ತಿ ಚಿದಂಬರಂ ಮತ್ತು ಮನೀಶ್ ತಿವಾರಿ ಸೇರಿದಂತೆ ಐವರು ಸಂಸದರು ಮಿಸ್ತ್ರಿ ಅವರಿಗೆ ಪತ್ರದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ “ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಬೇಕು ಎಂದು ಒತ್ತಾಯಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 30 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಚುನಾವಣೆಗೆ ಸ್ಪರ್ಧಿಸಲು ಆಸಕ್ತರು ತಮ್ಮ ರಾಜ್ಯದ ಹತ್ತು ಪ್ರತಿನಿಧಿಗಳ ಹೆಸರನ್ನು ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಪರಿಶೀಲಿಸಬಹುದು ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಿಸ್ತ್ರಿ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ತರೂರ್ ಅವರು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಿಸ್ತ್ರಿ ಅವರಿಗೆ ಪತ್ರದ “ದುರುದ್ದೇಶಪೂರಿತ ಸೋರಿಕೆ” ನಂತರ ಉಂಟಾದ “ವಿವಾದ” ಅಂತ್ಯಗೊಳಿಸಲು ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಅವರು ಸ್ಪಷ್ಟೀಕರಣವನ್ನು ಬಯಸುತ್ತಿದ್ದಾರೆಯೇ ಹೊರತು ಜಗಳವಲ್ಲ ಎಂದ ತರೂರ್ ಮಿಸ್ತ್ರಿ ಅವರ ಪತ್ರವನ್ನೂ ತಮ್ಮ ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ.

ಬೇರೆ ಬೇರೆ ರಾಜ್ಯಗಳ 10 ಬೆಂಬಲಿಗರಿಂದ ಯಾರಾದರೂ ನಾಮನಿರ್ದೇಶನಗಳನ್ನು ಪಡೆಯಲು ಬಯಸಿದರೆ, ಎಲ್ಲಾ 9,000 ಕ್ಕೂ ಹೆಚ್ಚು ಪ್ರತಿನಿಧಿಗಳ ಪಟ್ಟಿಯು ದೆಹಲಿಯ ಎಐಸಿಸಿಯಲ್ಲಿರುವ ತನ್ನ ಕಚೇರಿಯಲ್ಲಿ ಸೆಪ್ಟೆಂಬರ್ 20 ರಿಂದ( ಬೆಳಗ್ಗೆ 11  ರಿಂದ ಸಂಜೆ 6ರವರೆಗೆ) ಲಭ್ಯವಿರುತ್ತದೆ ಎಂದು ಮಿಸ್ತ್ರಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಅವರು ಬಂದು ಪಟ್ಟಿಯಿಂದ ತಮ್ಮ 10 ಬೆಂಬಲಿಗರು ಅಥವಾ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು. ಆಮೇಲೆ ನಾಮನಿರ್ದೇಶನಕ್ಕೆ ಅವರ ಸಹಿ ಪಡೆಯಬಹುದು ಎಂದು ಮಿಸ್ತ್ರಿ ಲೋಕಸಭೆ ಸದಸ್ಯರಾದ ಶಶಿ ತರೂರ್, ಮನೀಶ್ ತಿವಾರಿ, ಕಾರ್ತಿ ಚಿದಂಬರಂ, ಪ್ರದ್ಯುತ್ ಬೊರ್ಡೊಲೊಯ್ ಮತ್ತು ಅಬ್ದುಲ್ ಖಲೀಕ್ ಅವರಿಗೆ ಪತ್ರ ಬರೆದಿದ್ದಾರೆ.

ಸೆಪ್ಟೆಂಬರ್ 6 ರಂದು ಮಿಸ್ತ್ರಿ ಅವರಿಗೆ ಬರೆದ ಜಂಟಿ ಪತ್ರದಲ್ಲಿ, ಐವರು ಸಂಸದರು ಪಕ್ಷದ ಉನ್ನತ ಹುದ್ದೆಗೆ ನಡೆದ ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತಿ  ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಎಲ್ಲಾ ಮತದಾರರು ಮತ್ತು ಸಂಭಾವ್ಯ ಅಭ್ಯರ್ಥಿಗಳಿಗೆ ಚುನಾವಣಾ ಕಾಲೇಜನ್ನು ರೂಪಿಸುವ ಪಿಸಿಸಿ ಪ್ರತಿನಿಧಿಗಳ ಪಟ್ಟಿಯನ್ನು ಒದಗಿಸುವಂತೆ ಕೋರಿದ್ದಾರೆ.

ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಯಾರು ಅರ್ಹರು ಮತ್ತು ಯಾರು ಮತ ಚಲಾಯಿಸಲು ಅರ್ಹರು ಎಂಬುದನ್ನು ಪರಿಶೀಲಿಸಲು ಈ ಪಟ್ಟಿಯನ್ನು ಲಭ್ಯಗೊಳಿಸಬೇಕು ಎಂದು ಅವರು ಹೇಳಿದ್ದರು. “ನಾನು ಕಾಂಗ್ರೆಸ್ ಪಕ್ಷದ ಮುಖ್ಯ ಚುನಾವಣಾ ಪ್ರಾಧಿಕಾರ ಮಧುಸೂದನ್ ಮಿಸ್ತ್ರಿ ಜಿ ಅವರೊಂದಿಗೆ 5 ಸಂಸದರಿಂದ ಖಾಸಗಿ ಪತ್ರದ ದುರುದ್ದೇಶಪೂರಿತ ಸೋರಿಕೆಯ ನಂತರ ಉದ್ಭವಿಸಿದ ಅನಪೇಕ್ಷಿತ ವಿವಾದವನ್ನು ಕೊನೆಗೊಳಿಸಲು ನಾನು ಇಂದು ಬೆಳಿಗ್ಗೆ ಮಾತನಾಡಿದ್ದೇನೆ ಎಂದು ತರೂರ್ ಶನಿವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ನಾವು ಸ್ಪಷ್ಟೀಕರಣವನ್ನು ಬಯಸುತ್ತಿದ್ದೇವೆಯೇ ಹೊರತು ಜಗಳ ಅಲ್ಲ ಎಂದು ನಾನು ಒತ್ತಿಹೇಳಿದೆ ಎಂದಿದ್ದಾರೆ ತರೂರ್.

ತಮ್ಮ ಪತ್ರಕ್ಕೆ ರಚನಾತ್ಮಕ ಉತ್ತರದ ರೂಪದಲ್ಲಿ ಈ ಸ್ಪಷ್ಟನೆ ಬಂದಿರುವುದಕ್ಕೆ ಸಂತಸವಾಗುತ್ತಿದೆ ಎಂದು ತರೂರ್ ಹೇಳಿದ್ದಾರೆ. ಈ ಭರವಸೆಗಳ ದೃಷ್ಟಿಯಿಂದ ನಾನು ತೃಪ್ತನಾಗಿದ್ದೇನೆ. ನನ್ನ ದೃಷ್ಟಿಯಲ್ಲಿ ಪಕ್ಷವನ್ನು ಬಲಪಡಿಸುವ ಚುನಾವಣಾ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಹಲವರು ಸಂತೋಷಪಡುತ್ತಾರೆ ಎಂದು ಅವರು ಹೇಳಿದರು.

ನನ್ನ ಸಂಸದೀಯ ಸಹೋದ್ಯೋಗಿಗಳೊಂದಿಗೆ ಪತ್ರಕ್ಕೆ ಸಹಿ ಹಾಕಿದವನಾಗಿ, ಮಿಸ್ತ್ರಿ ಜಿಯವರ ಉತ್ತರದಿಂದ ನಾನು ತೃಪ್ತನಾಗಿದ್ದೇನೆ. ನನ್ನ ಹಿರಿಯ ಸಹೋದ್ಯೋಗಿ ಶಶಿ ತರೂರ್ ಅವರ ಭಾವನೆಗಳನ್ನು ನಾನು ಅನುಮೋದಿಸುತ್ತೇನೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಯಾವುದೇ ಪ್ರತಿನಿಧಿಗೆ ತೆರೆದಿರುವ ಮೊದಲ ಮಾರ್ಗವೆಂದರೆ ಅವರು ತಮ್ಮ ರಾಜ್ಯದ 10 ಪ್ರತಿನಿಧಿಗಳ ಹೆಸರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನೋಡಬಹುದು ಎಂದು ಮಿಸ್ತ್ರಿ ಹೇಳಿದರು. ಹೆಸರು ಮತ್ತು ಕ್ರಮಸಂಖ್ಯೆ ರಾಜ್ಯದ ಪಟ್ಟಿಯಲ್ಲಿ ಲಭ್ಯವಿದೆ. ನಾಮನಿರ್ದೇಶನದ ಮಾನ್ಯತೆಗೆ 10 ಬೆಂಬಲಿಗರು ಸಹಿ ಮಾಡಿದ ನಾಮಪತ್ರವು ಸಾಕಾಗುತ್ತದೆ ಎಂದು ಅವರು ಹೇಳಿದರು.

ಮೊದಲ ಬಾರಿಗೆ, ನಾವು ಕಾಂಗ್ರೆಸ್ ಸಮಿತಿಗಳನ್ನು ಹೊಂದಿರುವ 28 ರಾಜ್ಯಗಳು ಮತ್ತು ಒಂಬತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಪ್ರತಿನಿಧಿಗಳಿಗೆ QR ಕೋಡ್ ಆಧಾರಿತ ಗುರುತಿನ ಕಾರ್ಡ್‌ಗಳನ್ನು ಸಹ ನೀಡುತ್ತಿದ್ದೇವೆ. ನಾಮಪತ್ರ ಸಲ್ಲಿಸಲು ಬಯಸುವವರು ತಮ್ಮ ಬಳಿ ಪ್ರತಿನಿಧಿ ಗುರುತಿನ ಚೀಟಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮಿಸ್ತ್ರಿ ಅವರು ಐವರು ಸಂಸದರಿಗೆ ನೀಡಿದ ಸಂವಹನದಲ್ಲಿ ತಿಳಿಸಿದ್ದಾರೆ.

ಮಾನ್ಯ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಕ್ಕೆ ಸಹಿ ಹಾಕಲು ಅವಕಾಶವಿದೆ ಎಂದಿದ್ದಾರೆ ಮಿಸ್ತ್ರಿ. “ಪ್ರತಿನಿಧಿಗಳ ಹೆಸರುಗಳನ್ನು ತಿಳಿಯದೆ ತಮ್ಮ ನಾಮಪತ್ರಗಳನ್ನು ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ಸಂದೇಹಗಳನ್ನು ಇದು ಪರಿಹರಿಸಬೇಕು. ಒಮ್ಮೆ ನಾಮಪತ್ರಕ್ಕೆ ಸಹಿ ಹಾಕಿ ಮುಖ್ಯ ಚುನಾವಣಾಧಿಕಾರಿಗೆ ಒಪ್ಪಿಸಿದರೆ ಪ್ರತಿನಿಧಿಗಳ ಸಂಪೂರ್ಣ ಪಟ್ಟಿ ಸಿಗಲಿದೆ. ಇದು ನಿಮ್ಮ ಮತ್ತು ಪತ್ರಕ್ಕೆ ಸಹಿ ಮಾಡಿದ ಇತರ ಸಹೋದ್ಯೋಗಿಗಳ ಅಗತ್ಯಗಳನ್ನು ಪೂರೈಸುತ್ತದೆ ಎಂದು ನಾನು ಭಾವಿಸುತ್ತೇನೆ. ಶಶಿ ಜೀ ಅವರು ನನಗೆ ಕರೆ ಮಾಡಿ ಮಾತುಕತೆ ನಡೆಸಿದ್ದಕ್ಕಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಮಿಸ್ತ್ರಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ತಮ್ಮ ಪತ್ರದಲ್ಲಿ ಐವರು ಸಂಸದರು, “ಒಂದು ವೇಳೆ ಕೇಂದ್ರ ಚುನಾವಣಾ ಪ್ರಾಧಿಕಾರ (CEA) ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಕಾಳಜಿಯನ್ನು ಹೊಂದಿದ್ದರೆ, ಈ ಮಾಹಿತಿಯನ್ನು ಎಲ್ಲಾ ಮತದಾರರು ಮತ್ತು ಸಂಭಾವ್ಯ ಅಭ್ಯರ್ಥಿಗಳೊಂದಿಗೆ ಸುರಕ್ಷಿತವಾಗಿ ಹಂಚಿಕೊಳ್ಳಲು ಕಾರ್ಯವಿಧಾನವನ್ನು ಜಾರಿಗೆ ತರಬೇಕು. ಮತದಾರರ ಪಟ್ಟಿಯನ್ನು ಪರಿಶೀಲಿಸಲು ಮತದಾರರು ಮತ್ತು ಅಭ್ಯರ್ಥಿಗಳು ಎಲ್ಲಾ 28 ಪ್ರದೇಶ ಕಾಂಗ್ರೆಸ್ ಸಮಿತಿಗಳು (ಪಿಸಿಸಿಗಳು) ಮತ್ತು ಒಂಬತ್ತು ಕೇಂದ್ರ ಪ್ರಾದೇಶಿಕ ಘಟಕಗಳಿಗೆ ಹೋಗುವುದನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಸಂಸದರು ಮಿಸ್ತ್ರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಅಂದಹಾಗೆ ತರೂರ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದ್ದು, ಚುನಾವಣೆ ಅಗತ್ಯವಿದ್ದಲ್ಲಿ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಫಲಿತಾಂಶ ಹೊರಬೀಳಲಿದೆ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ